ಸುದ್ದಿಮೂಲ ವಾರ್ತೆ ಹೂವಿನಹಡಗಲಿ ಮೈಲಾರ (ವಿಜಯನಗರ), ೆ.04:
ಕರ್ನಾಟಕದ ಪ್ರಮುಖ ಜಾತ್ರೆೆಗಳ ಲ್ಲಿ ಒಂದಾದ ಶ್ರೀ ಮೈಲಾರಲಿಂಗೇಶ್ವರ ಜಾತ್ರೆೆಯ ಪ್ರಮುಖ ವಾಣಿ ಸಂಪಾಯಿತ ಲೇ ಪರಾಕ್ ಇದು ಈ ವರ್ಷದ ಮೈಲಾರಲಿಂಗೇಶ್ವರನ ಕಾರ್ಣಿಕವನ್ನು ಗೊರವಯ್ಯ ರಾಮಣ್ಣ ದೈವವಾಣಿ ನುಡಿದಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಸುಕ್ಷೇತ್ರ ಮೈಲಾರದಲ್ಲಿ ಬುಧವಾರ ಸಂಜೆ ಗೋಧೂಳಿ ಸಮಯದಲ್ಲಿ ತಾಲೂಕಿನ ಮೈಲಾರ ಗ್ರಾಾಮದ ಡೆಂಕನ ಮರಡಿಯಲ್ಲಿ ಕಾರ್ಣಿಕ ನುಡಿಯಲು ರಾಮಣ್ಣಗೊರವಯ್ಯ 18 ಅಡಿ ಎತ್ತರದ ಬಿಲ್ಲ ನೇರಿ ದೈವವಾಣಿ ಕೇಳಲೆಂದು ನೆರೆದಿದ್ದ ಸುಮಾರು 8-10 ಲಕ್ಷ ಭಕ್ತ ಸಮೂಹಕ್ಕೆೆ ಸದ್ದಲೇ… ಕೋಟಿ ಕೋಟಿ ಕೇಳಿರೋ… ಎಂಬ ಕೂಗು ಕೇಳುತ್ತಿಿದ್ದಂತೆ ಇಡೀ ಮೈದಾನವೇ ಮೌನಕ್ಕೆೆ ಶರಣಾಯಿತು. ಆತುರದಿಂದ ಕಾಯುತ್ತಿಿದ್ದ ಲಕ್ಷಾಂತರ ಭಕ್ತರಿಗೆ ಸದ್ದಲೇ ಎಂದ ಕೂಡಲೇ ನಿಶಬ್ದವಾದ ಭಕ್ತ ಸಮೂಹ ಸಂಪಾಯಿತಲೇ ಪರಾಕ್ ಎಂದು ಕಾರ್ಣಿಕ ನುಡಿದು ಕೆಳಗೆ ಬಿದ್ದ ಗೊರವಯ್ಯನ ದೇವವಾಣಿ ಕೇಳಿದ ಭಕ್ತ ಸಮುಹ ಕೇಕೆ ಹಾಕುತ್ತಲೇ ಭಕ್ತಿಿ ಪರಾಕಾಷ್ಠೆೆ ಯಲ್ಲಿ ಮಿಂದೆದ್ದು ಶ್ರೀ ಸ್ವಾಾಮಿ ಮೈಲಾರಲಿಂಗೇಶ್ವರನ ಘೋಷವಾಕ್ಯ ಕೂಗಿ ಸಂತಸ ಹಂಚಿಕೊಂಡರು.
ಈ ಬಾರಿಯ ಕಾರ್ಣಿಕವನ್ನು ನೆರೆದಿದ್ದ ಭಕ್ತರು ವಿವಿಧ ಬಗೆ ಯಲ್ಲಿ ವಿಶ್ಲೇಷಿಸಿದರು. ನಾಡಿನಲ್ಲಿ ಮಳೆ, ಬೆಳೆ ಸಮೃದ್ಧ ವಾಗಿ ಜನ ಸುಖ-ಸಂತೋಷದಿಂದ ಜೀವನ ನಡೆ ಸಲಿದ್ದಾರೆ.ಕೃಷಿ ಕ್ಷೇತ್ರದಲ್ಲಿ ಹೆಚ್ಚಿಿನ ಸಲು ಬಂದು ರೈತರಿಗೆ ದೊರಕುವುದು.ಮುಂ ದಿನ ದಿನಗಳಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸುಭದ್ರವಾಗಿ ಆಡಳಿತ ನಡೆಸುತ್ತವೆ ಎಂದು ನೆರೆದಿದ್ದ ಭಕ್ತ ಸಮೂಹದಲ್ಲಿ ಚರ್ಚೆ, ವಿಶ್ಲೇಷಣೆ ನಡೆಯುತ್ತಿಿರುವುದು ಸಾಮಾನ್ಯವಾಗಿತ್ತು.

