ಸುದ್ದಿಮೂಲ ವಾರ್ತೆ ಸಿಂಧನೂರು, ಜ.22:
ತುಮಕೂರಿನ ಸಿದ್ದಗಂಗಾಮಠದ ಡಾ.ಶಿವಕುಮಾರ ಸ್ವಾಾಮೀಜಿಯವರ 7ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಬಳ್ಳಾಾರಿಯ ಡಾ.ಶಿವಕುಮಾರ ಸ್ವಾಾಮೀಜಿಯವರ ಅನ್ನದಾಸೋಹ ಸಂಘ ನೀಡುವ 2026ನೇ ಸಾಲಿನ ಸಿದ್ಧಗಂಗಾ ಸೇವಾರತ್ನ ಪ್ರಶಸ್ತಿಿಗೆ ಸಿಂಧನೂರು ತಾಲೂಕಿನ ಜಾಲಿಹಾಳ ಸರಕಾರಿ ಪ.ಪೂ.ಕಾಲೇಜಿನ ಉಪನ್ಯಾಾಸಕ, ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಹುಸೇನಪ್ಪ ಅಮರಾಪುರ ಅವರನ್ನು ಆಯ್ಕೆೆ ಮಾಡಲಾಗಿದೆ ಎಂದು ಆಯೋಜಕ ಎನ್.ಶ್ರೀನಿವಾಸ ಮುಕ್ಕುಂದಾ ತಿಳಿಸಿದ್ದಾಾರೆ.
ಡಾ.ಹುಸೇನಪ್ಪ ಅಮರಾಪುರ ಅವರ ಸಾಮಾಜಿಕ ಮತ್ತು ಶೈಕ್ಷಣಿಕ ಸೇವೆ ಗುರುತಿಸಿ ಆಯ್ಕೆೆ ಮಾಡಲಾಗಿದೆ. ಶುಕ್ರವಾರ ಬಳ್ಳಾಾರಿಯಲ್ಲಿ ನಡೆಯಲಿರುವ ಅನ್ನ ದಾಸೋಹ ಕಾರ್ಯಕ್ರಮದಲ್ಲಿ ಪ್ರಶಸ್ತಿಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದ್ದಾಾರೆ.
ಡಾ.ಹುಸೇನಪ್ಪ ಅಮರಾಪುರರಿಗೆ ಸಿದ್ದಗಂಗಾ ಸೇವಾರತ್ನ ಪ್ರಶಸ್ತಿ

