ಅದ್ದೂರಿಯಾಗಿ ಜರುಗಿದ 6ನೇ ಶರಣ ಸಾಹಿತ್ಯ ಸಮ್ಮೇಳನ
ಕನ್ನಡಿಗರ ಮೇಲೆ ಹಿಂದಿ ಭಾಷೆ ಏರಬೇಡಿ: ಸಿದ್ದಲಿಂಗ ಮಹಾಸ್ವಾಮಿಗಳು
ಜೇವರ್ಗಿ : ತಾಲೂಕಿನ ಹಳೆ ತಹಸಿಲ್ದಾರ್ ಕಚೇರಿ ಆವರಣದಲ್ಲಿ 6ನೇ ಶರಣ ಸಾಹಿತ್ಯ ಸಮ್ಮೇಳನ ಜರುಗಿತು.ಸಮ್ಮೇಳನದ ಭವ್ಯ ಮೆರವಣಿಗೆ ಮಿನಿವಿಧಾನಸೌಧದಿಂದ ರಾಜ್ಯ ಹೆದ್ದಾರಿಗಳ ಮೂಲಕ ವಿವಿಧ ಕಲಾತಂಡಗಳಿಂದ ಅದ್ದೂರಿಯಾಗಿ ಮೆರವಣಿಗೆ ವೇದಿಕೆ ಕಡೆ ಸಾಗಿ ಬಂತು.
ಸಮ್ಮೇಳನದ ಮೆರವಣಿಗೆಯನ್ನು ಕೃಷ್ಣ ಸುಬೇದಾರ್ ಹಾಗೂ ಚೆನ್ನಮಲ್ಲಯ್ಯ ಹಿರೇಮಠ್, ರಾಜಶೇಖರ್ ಬಿ ಸಾಹು ಸಿರಿ, ಕಲ್ಯಾಣಕುಮಾರ್ ಕಟ್ಟಿಸಂಘಾವಿ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.
ಈ ಒಂದು ಕಾರ್ಯಕ್ರಮವನ್ನು ಉದ್ದೇಶಿಸಿ ಸಮ್ಮೇಳನದ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ವಿರಕ್ತ ಮಠ ನೆಲೋಗಿ ಮಾತನಾಡಿದರು.
ಕೇವಲ ಶರಣ ಸಾಹಿತ್ಯವನ್ನು ಶರಣ ಧರ್ಮವನ್ನು ಸಮಾರಂಭಗಳ ಮಾಡಿ ಆಚರಣೆ ಮಾಡಿ ಅಂತ ಹೇಳಿದರೆ ಸಾಲದು ನಾವು ನೀವು ಎಲ್ಲರೂ ಕೂಡಿ ಬಸವ ಧರ್ಮ ಶರಣ ಸಾಹಿತ್ಯದ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಅಂದಾಗ ಮಾತ್ರ ಬಸವಧರ್ಮ ಶರಣ ಸಾಹಿತ್ಯ ಉಳಿಯಲು ಸಾಧ್ಯ ಎಂದು ಹೇಳಿದರು. ನಮ್ಮ ಕರ್ನಾಟಕದಲ್ಲಿ ಕನ್ನಡ ಭಾಷೆ ಸಾರ್ವಭೌಮ ಅದನ್ನು ಬಿಟ್ಟು ರಾಷ್ಟ್ರೀಯ ಭಾಷೆ ಹಿಂದಿ ಕನ್ನಡಿಗರ ಮೇಲೆ ಏರುವುದನ್ನು ಖಂಡಿಸುತ್ತೇನೆ ಎಂದು ಹೇಳಿದರು. ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ ಅದನ್ನು ಬಿಟ್ಟು ಕನ್ನಡಿಗರ ಮೇಲೆ ಹಿಂದಿ ಭಾಷೆ ಏರುವುದು ತಪ್ಪು ಎಂದು ಹೇಳಿದರು.
ಶರಣ ಸಾಹಿತ್ಯ ಉಳಿಯಬೇಕಾದರೆ ಇಂದಿನ ಯುವಕರು ಮತ್ತು ಹಿರಿಯರು ಶರಣರ ವಚನಗಳನ್ನು ಪ್ರತಿ ಮನೆಗಳಲ್ಲಿ ಮಕ್ಕಳಿಗೆ ಬೋಧಿಸಬೇಕು ಎಂದು ಹೇಳಿದರು. ಕೇವಲ ಸಭೆ ಸಮಾರಂಭಗಳಲ್ಲಿ ವಚನಗಳು ಹೇಳಿದರೆ ಸಾಲದು ಪ್ರತಿಯೊಂದು ಮನೆಯಲ್ಲಿ ವಚನ ಸಾಹಿತ್ಯ ಪಟನೆ ಆಗಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ವಿಶೇಷ ಗೌರವ ಸನ್ಮಾನ ಜರುಗಿತು. ನಿಂಗಣ್ಣ ಬಿರಾದಾರ ತಹಸಿಲ್ದಾರರು ಸಿಂದಗಿ, ಡಾ ಅಶ್ವಿನಿ ಬಿರಾದಾರ್ ಸ್ತ್ರೀರೋಗ ತಜ್ಞರು ನೆಲೋಗಿ, ಈರಯ್ಯ ಹಿರೇಮಠ್, ಶಿವಶರಣಪ್ಪ, ಯು.ಬಿ ಹಿರೇಮಠ್, ಭೀಮರಾಯ ನಗನೂರ್, ತನುಜಾ ಕಾಂಬಳೆ, ವೆಂಕಟೇಶ್ ಹರವಾಳ, ಬಿ ಎಚ್ ಮಾಲಿ ಪಾಟೀಲ್, ಸೌಭಾಗ್ಯ ಬಿ ಮಂದೇವಾಲ, ಶರಣು ನಾಟಿಕರ್, ಗುಲಾಬ್ ರಸುಲ್ಸಾಬ್, ಅಮೃತ್ ಗೌಡ ನಂದೂರ್, ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪರಮಪೂಜ್ಯರಾದ ಮ ನಿ ಪ್ರ ಡಾಕ್ಟರ್ ಶಿವಾನಂದ ಮಹಾಸ್ವಾಮಿಗಳು ವಿರಕ್ತಮಠ ಸೋನ್ನ, ಶಾಸಕ ಅಜಯ್ ಸಿಂಗ್, ವಿಜಯ್ ಕುಮಾರ ಪಾಟೀಲ್, ರೈಮಾನ್ ಪಟೇಲ್, ಪ್ರಭು ಜಾದವ್, ಶಿವರಾಜ್, ಶರಣಗೌಡ ಪಾಟೀಲ್ ಜೈನಾಪುರ್, ವಿಜಯ್ ಕುಮಾರ್ ಪಾಟೀಲ್ ತೇಗಲ್ತಿಪ್ಪಿ, ಶಿವಾನಂದ ಮಠಪತಿ, ಶ್ರೀಮತಿ ಗಂಗೂಬಾಯಿ ಜಟ್ಟಿಂಗರಾಯ ಮಂದ್ರಾವಾಡ ಪುರಸಭೆ ಅಧ್ಯಕ್ಷರು, ಹಳ್ಳೆಪ್ಪ ಆಚಾರ್ಯ ಜೋಶಿ, ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ಎಸ್ ಕೆ ಬಿರಾದಾರ್, ಬಿಜಿ ಹೂಗಾರ, ಎಸ್ ಟಿ ಬಿರಾದಾರ್, ಚಂದ್ರಶೇಖರ್ ತುಂಬಿಗಿ,ಶಿವಕುಮಾರ್ ಕಲ್ಲಾ, ಮೌನೇಶ್ ವಿಶ್ವಕರ್ಮ, ಬಾಬು ನಾಯಕ್, ಶ್ರೀಮತಿ ಕಾವ್ಯಶ್ರೀ ಮಾಹಾಗಾ0ವ್ಕರ್, ಸಂತೋಷ್ ಹೂಗಾರ್, ಶರಣಯ್ಯ ಹಿರೇಮಠ, ಪದ್ಮರಾಜ್ ರಾಸಣಗಿ, ಸದಾನಂದ ಪಾಟೀಲ್, ಭಾರತಿ ಎಂ ನೆಲೋಗಿ, ದುರ್ಗಮ್ಮ ಗೌನಳ್ಳಿ, ಶರಣ ಸಾಹಿತ್ಯ ಅಭಿಮಾನಿಗಳು ಯುವಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.