ಸುದ್ದಿಮೂಲ ವಾರ್ತೆ ರಾಯಚೂರು, ೆ.03:
ಕೇಂದ್ರ ಸರ್ಕಾರದ ಮುಂಗಡ ಪತ್ರ ಪ್ರಧಾನಮಂತ್ರಿಿಗಳ ವಿಕಸಿತ ಭಾರತದ ಸಂಕಲ್ಪಕ್ಕೆೆ ಪೂರಕವಾಗಿದ್ದು ದೇಶದ ಸುಸ್ಥಿಿರ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಬಿಜೆಪಿ ಜಿಲ್ಲಾಾ ವಕ್ತಾಾರ ಸಿದ್ದನಗೌಡ ನೆಲಹಾಳ ಸಮರ್ಥಿಸಿಕೊಂಡರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ 9ನೇ ಬಜೆಟ್ ಕರ್ತವ್ಯಶಕ್ತಿಿಗಳ ಆಧಾರದ ಮೇಲೆ ಮಂಡಿಸಲ್ಪಟ್ಟಿಿದ್ದು ಉತ್ಪಾಾದನಾ ಹೆಚ್ಚಳ, ಜನರ ಆಶೋತ್ತರಗಳ ಈಡೇರಿಕೆ ಹಾಗೂ ಸರ್ವರ ವಿಕಾಸದ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ತಮ್ಮ ಬಜೆಟ್ ಮಂಡಿಸಿದ್ದಾರೆ ಎಂದು ಸಮರ್ಥಿಸಿಕೊಂಡ ಅವರು ಕೈಗಾರಿಕೆ, ಪ್ರವಾಸೋದ್ಯಮ, ಐಟಿ, ಬಿಟಿ, ವಿಶೇಷವಾಗಿ ರೈತರ ಆದಾಯ ದ್ವಿಿಗುಣಗೊಳಿಸುವ ನಿಟ್ಟಿಿನಲ್ಲಿ ಅನೇಕ ಯೋಜನೆಗಳ ಘೋಷಿಸಿದ್ದಾರೆ ಎಂದರು.
ಎಲ್ಲಕ್ಕಿಿಂತ ಪ್ರಮುಖವಾಗಿ ಹೊಸ ತೆರಿಗೆಗೆ ಅವಕಾಶ ನೀಡದೆ, ಹೊಸ ತೆರಿಗೆ ಹೇರದೆ ಸರ್ವಸ್ಪರ್ಶಿ, ಸರ್ವವ್ಯಾಾಪ್ತಿಿಯಡಿ ಎಲ್ಲ ಕ್ಷೇತ್ರಗಳಿಗೂ ಆದ್ಯತೆ ನೀಡಿದ್ದಾರೆ. ಈ ದೇಶದ ಸರ್ವತೋಮುಖ ಅಭಿವೃದ್ಧಿಿ ಸಶಕ್ತ ಆರ್ಥಿಕತೆ ಮೂಲಕ ಭಾರತ ವಿಶ್ವ ಗುರು ಆಗುವ ನಿಟ್ಟಿಿನಲ್ಲಿ ಒಂದು ಉತ್ತಮ ಬಜೆಟ್ ಮಂಡಿಸಿದ್ದಾಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಜಿಲ್ಲೆಗೆ ಏಮ್ಸ್ ಹಾಗೂ ಕಲ್ಯಾಾಣ ಕರ್ನಾಟಕಕ್ಕೆೆ ವಿಶೇಷ ಪ್ಯಾಾಕೇಜ್ ನೀಡದಿರುವುದು ಬೇಸರದ ಸಂಗತಿಯಾಗಿದ್ದು ಮುಂದಿನ ದಿನಗಳಲ್ಲಿ ರಾಯಚೂರಿಗೆ ಏಮ್ಸ್ ಸಿಗುವ ಭರವಸೆ ಇದೆ ಎಂದರು.
ಸುದ್ದಿಗೋಷ್ಠಿಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರ ಜಲ್ದಾಾರ್ , ಸಂತೋಷ್ ರಾಜಗುರು , ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ್ ಪಾಟೀಲ್ , ಜಿಲ್ಲಾ ಮಾಧ್ಯಮ ಸಹ ಸಂಚಾಲಕರಾದ ವಿ.ಪಿ.ರೆಡ್ಡಿಿ , ವೌನೇಶ್ , ಕೃಷ್ಣ ಉಪಸ್ಥಿಿತರಿದ್ದರು.

