ಸುದ್ದಿಮೂಲ ವಾರ್ತೆ ಬೆಂಗಳೂರು, ಅ.07:
ಪರಿಶಿಷ್ಟರ ಜನಸಂಖ್ಯೆೆಗೆ ಅನುಗುಣವಾಗಿ ಅನುದಾನ ನಿಗದಿಪಡಿಸಿ ಅವರ ಪರ ಕಾಳಜಿ ತೋರಿಸಿದ ನಾನು ಯಾವುದೇ ಕಾರಣಕ್ಕೂ ಪರಿಶಿಷ್ಟರ ಮೀಸಲಾತಿಯಲ್ಲಿ ಕೈ ಹಾಕುವುದಿಲ್ಲ ಎಂದು ಮುಖ್ಯಮಂತ್ರಿಿ ಸಿದ್ದರಾಮಯ್ಯ ದೃಢಪಡಿಸಿದರು.
ಪರಿಶಿಷ್ಟ ಪಂಗಡಗಳ ಕಲ್ಯಾಾಣ ಇಲಾಖೆ ಮತ್ತು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಿ ನಿಗಮ ನಿಯಮಿತ ಸಹಯೋಗದಲ್ಲಿ ವಿಧಾನಸೌಧದ ಬ್ಯಾಾಂಕ್ವೆೆಟ್ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಮತ್ತು ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಿ ಪ್ರದಾನ ಸಮಾರಂಭ ಉದ್ಘಾಾಟಿಸಿ ಮಾತನಾಡಿದ ಅವರು, ಕುರುಬರನ್ನು ಎಸ್ಟಿಿ (ಪರಿಶಿಷ್ಟ ಪಂಗಡ) ಪಟ್ಟಿಿಗೆ ಸೇರಿಸಬೇಕು ಎಂದು ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಿ ಆಗಿದ್ದ ಬಸವರಾಜ ಬೊಮ್ಮಾಾಯಿ ಕೇಂದ್ರಕ್ಕೆೆ ಶಿಾರಸು ಮಾಡಿದ್ದರು. ಈಗ ಕೇಂದ್ರದಿಂದ ವಿವರಣೆ ಕೇಳಿ ರಾಜ್ಯಕ್ಕೆೆ ಪತ್ರ ಬರೆದಿದ್ದಾರೆ. ಆದರೆ, ಕುರುಬರನ್ನು ಎಸ್ಟಿಿಗೆ ಸೇರಿಸುವ ಅಧಿಕಾರ ಕೇಂದ್ರಕ್ಕೆೆ ಇದೆ ಎಂದು ವಿವರಣೆ ನೀಡಿದರು.
ವಾಲ್ಮೀಕಿ ಮತ್ತು ಕುರುಬ ಸಮುದಾಯವನ್ನು ಎಸ್ಟಿಿಗೆ ಸೇರಿಸಲು ನಾನು ಮತ್ತು ಉಗ್ರಪ್ಪ ಅವರ ಮಾವ ವೀರಣ್ಣ ಅವರು ರಾಮಕೃಷ್ಣ ಹೆಗಡೆಯವರಿಗೆ ಮನವಿ ಮಾಡಿದ್ದೆವು. ಹೆಗಡೆಯವರು ನಮ್ಮ ಮನವಿಯನ್ನು ಕೇಂದ್ರಕ್ಕೆೆ ಶಿಾರಸ್ಸು ಮಾಡಿದರೂ ಆಗ ಸೇರಿಸಲು ಆಗಲಿಲ್ಲ. ಆದರೆ, ಉಗ್ರಪ್ಪ ಅವರು ಸುಮ್ಮನೆ ಕೂರಲಿಲ್ಲ. ಉಗ್ರಪ್ಪ ಮತ್ತು ದೇವೇಗೌಡರ ನಡುವಿನ ಒಡನಾಟ ಆಗಲೂ ಚೆನ್ನಾಾಗಿತ್ತು. ದೇವೇಗೌಡರು ಮತ್ತು ಆಗಿನ ಪ್ರಧಾನಿ ಚಂದ್ರಶೇಖರ್ ಅವರ ಒಡನಾಡ ಚೆನ್ನಾಾಗಿದ್ದರಿಂದ ಅವರನ್ನು ಒಪ್ಪಿಿಸಿ ವಾಲ್ಮೀಕಿ-ನಾಯಕ-ಬೇಡ ಸಮುದಾಯಗಳನ್ನು ಎಸ್ಟಿಿಗೆ ಸೇರಿಸಿದರು. ಇದರ ಸಂಪೂರ್ಣ ಶ್ರೇೇಯಸ್ಸು ಉಗ್ರಪ್ಪನವರಿಗೆ ಸಲ್ಲುತ್ತದೆ ಎಂದರು.
ಕುರುಬರನ್ನು ಎಸ್ಟಿಿಗೆ ಸೇರಿಸಲು ನಾನು ಪ್ರಯತ್ನ ಮಾಡುತ್ತಿಿದ್ದೇನೆ ಎಂಬ ಪ್ರತಿಪಕ್ಷಗಳ ಆರೋಪ ಅಲ್ಲಗಳೆದ ಸಿಎಂ ಸಿದ್ದರಾಮಯ್ಯ, ಒಂದು ವೇಳೆ ಕುರುಬರನ್ನು ಎಸ್ಟಿಿ ಪಟ್ಟಿಿಗೆ ಸೇರಿಸಿದರೆ ಸದ್ಯ ಎಸ್ಟಿಿಗೆ ಶೇ.7ರಷ್ಟು ಮೀಸಲಾತಿ ಇದೆ. ಇದನ್ನು ಶೇ.14ರಿಂದ 20ಕ್ಕೆೆ ಏರಿಕೆ ಮಾಡುವ ಮೂಲಕ ಕುರುಬರ ಜನಸಂಖ್ಯೆೆಗೆ ಅನುಗುಣವಾಗಿ ಪರಿಶಿಷ್ಟರ ಪಟ್ಟಿಿಯಲ್ಲಿ ಮೀಸಲಾತಿ ನೀಡಬಹುದು. ಆದರೆ, ಇದನ್ನು ಕೇಂದ್ರ ಸರ್ಕಾರ ಯಾವಾಗ ಮಾಡುತ್ತದೋ ಗೊತ್ತಿಿಲ್ಲ. ಏಕೆಂದರೆ ಈ ಹಿಂದೆ ಬೆಸ್ತರು ಮತ್ತು ಯಾದವರನ್ನು ಎಸ್ಟಿಿ ಪಟ್ಟಿಿಗೆ ಸೇರಿಸಬೇಕು ಎಂಬ ಶಿಾರಸ್ಸು, ಕೇಂದ್ರಕ್ಕೆೆ ಸಲ್ಲಿಕೆಯಾಗಿ ದಶಕಗಳೇ ಕಳೆದರೂ ಇಲ್ಲಿಯವರೆಗೂ ಆಗಿಲ್ಲ ಎಂದರು.
ಪರಿಶಿಷ್ಟರಿಗೆ ಜನಸಂಖ್ಯೆೆಗೆ ಅನುಗುಣವಾಗಿ ಸೌಲಭ್ಯ ಒದಗಿಸಲು ಶೇ.24.1ರಷ್ಟು ಅನುದಾನ ಮೀಸಲಿಟ್ಟಿಿದ್ದು ನನ್ನ ನೇತೃತ್ವದ ಕಾಂಗ್ರೆೆಸ್ ಸರ್ಕಾರ. ಈ ಕಾಯ್ದೆೆ ಜಾರಿಗೆ ಬರುವ ಮುನ್ನ ಪರಿಶಿಷ್ಟರ ಅಭಿವೃದ್ಧಿಿಗೆ ಕೇವಲ 5 ಸಾವಿರ ಕೋಟಿ ಕೋಟಿ ಮಾತ್ರ ಖರ್ಚು ಮಾಡಲಾಗುತ್ತಿಿತ್ತು. ಆದರೆ, ಕಾಯ್ದೆೆ ಜಾರಿಗೆ ಬಂದ ತಕ್ಷಣವೇ ಈ ಅನುದಾನ 15,890 ಕೋಟಿಗೆ ಏರಿಕೆಯಾಗಿ ಪ್ರಸ್ತುತ 42,017 ಕೋಟಿ ರೂ.ಗೆ ಏರಿಕೆಯಾಗಿದೆ. ಆದರೆ, ದಾರಿ ತಪ್ಪಿಿಸುವವರ ಮಾತು ಕೇಳಬೇಡಿ. ನಾನು ಮೀಸಲಾತಿ ವಿಚಾರದಲ್ಲಿ ಪರಿಶಿಷ್ಟರಿಗೆ ಅನ್ಯಾಾಯ ಮಾಡುತ್ತೇನೆಯೇ? ಎಂದು ಪ್ರಶ್ನೆೆ ಮಾಡಿದರು.
ರಾಜ್ಯದಲ್ಲಿ 38 ಸಾವಿರ ಪರಿಶಿಷ್ಟ ವಿದ್ಯಾಾರ್ಥಿಗಳು ವಿಶೇಷ ವಸತಿ ಶಾಲೆಗಳಲ್ಲಿ ಅಭ್ಯಾಾಸ ಮಾಡುತ್ತಿಿದ್ದು ಅಲ್ಲಿ ಉತ್ತಮ ಲಿತಾಂಶ ಸಹ ಬಂದಿದೆ ಎಂದ ಅವರು, ಪರಿಶಿಷ್ಟರು ತಮ್ಮ ಹಕ್ಕು ಕೇಳುವುದು ತಪ್ಪಲ್ಲ. ಶಿಕ್ಷಣ, ಸಂಘಟನೆ, ಹೋರಾಟ ಮೂಲಕ ವಂಚಿತ ಸಮುದಾಯದವರು ಎಲ್ಲ ರಂಗದಲ್ಲೂ ಸಮಪಾಲು ಪಡೆಯಬೇಕು ಎಂದ ಅವರು, ಇದು ಶಿಕ್ಷಣದಿಂದಲೇ ಸಾಧ್ಯ. ಹಾಗಾಗಿ ಪಠ್ಯದಲ್ಲಿ ವಾಲ್ಮೀಕಿ ವಿಚಾರಗಳು ಅಳವಡಿಸುವ ಕುರಿತು ಪರಿಶೀಲನೆ ಮಾಡಲಾಗುವುದು ಎಂದರು.
ಬೆಂಗಳೂರಿನ ಸುಮನಹಳ್ಳಿಿಯಲ್ಲಿರುವ ನಿರಾಶ್ರಿತರ ಕೇಂದ್ರದಲ್ಲಿ ವಾಲ್ಮೀಕಿ ಸೌಧ ನಿರ್ಮಾಣಕ್ಕೆೆ ಈಗಾಗಲೇ 2 ಎಕರೆ ಜಮೀನು ನೀಡಲಾಗಿದೆ. ಬೆಂಗಳೂರಿನ ಅಂಬೇಡ್ಕರ್ ಭವನ ಮತ್ತು ಜಗಜೀವನ್ ರಾಮ್ ಸೌಧ ಮಾದರಿಯಲ್ಲಿಯೇ ವಾಲ್ಮೀಕಿ ಸೌಧ ನಿರ್ಮಾಣ ಮಾಡಲು ಅಗತ್ಯ ಇರುವಷ್ಟು ಹಣವನ್ನು ಬರುವ ಮುಂಗಡ ಪತ್ರದಲ್ಲಿ ಒದಗಿಸಲಾಗುವುದು ಎಂದು ಭರವಸೆ ನೀಡಿದ ಸಿಎಂ, ನಗರದ ಮೆಟ್ರೋೋ ನಿಲ್ದಾಾಣವೊಂದಕ್ಕೆೆ ವಾಲ್ಮೀಕಿ ಅವರ ಹೆಸರಿಸಲು ಕೇಂದ್ರಕ್ಕೆೆ ಶಿಾರಸು ಮಾಡುವುದಾಗಿ ಹೇಳಿದರು.
ದೆಹಲಿಯಲ್ಲಿ ಯುಪಿಎಸ್ಸಿಿ ತರಬೇತಿ ಕೇಂದ್ರ:
ಲೋಕೋಪಯೋಗಿ ಇಲಾಖೆ ವತಿಯಿಂದ ದೆಹಲಿಯಲ್ಲಿ ಪರಿಶಿಷ್ಟ ವಿದ್ಯಾಾರ್ಥಿಗಳು ಯುಪಿಎಸ್ಸಿಿ ಪರೀಕ್ಷೆಗೆ ಸಿದ್ಧವಾಗಲು 40 ಕೋಟಿ ರೂ. ವೆಚ್ಚದಲ್ಲಿ ಬೃಹತ್ ಭವನ ನಿರ್ಮಾಣ ಮಾಡಲಾಗುವದು. ಇದರಿಂದ ಕನಿಷ್ಠ 500 ವಿದ್ಯಾಾರ್ಥಿಗಳಿಗೆ ಅನುಕೂಲ ವಾಗಲಿದೆ ಎಂದು ಹೇಳಿದರು.
ರಾಜ್ಯದಲ್ಲಿ 10 ಜಿಲ್ಲೆಗಳಲ್ಲಿ ಪ್ರಾಾಯೋಗಿಕವಾಗಿ ಅಂಬೇಡ್ಕರ್ ಮತ್ತು ವಾಲ್ಮೀಕಿ ಬಡಾವಣೆಗಳನ್ನು ನಿರ್ಮಾಣ ಮಾಡಲಾಗುವುದು. ಅದರ ಸಾಧಕ ಬಾಧಕಗಳನ್ನು ನೋಡಿ ಮುಂದೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ವಿಸ್ತರಿಸುವುದಾಗಿ ಹೇಳಿದರು.
ರಾಜ್ಯದಲ್ಲಿ ಬುಡಕಟ್ಟು ವಿಶ್ವವಿದ್ಯಾಾಲಯ ಸ್ಥಾಾಪನೆ ಮಾಡಬೇಕು ಮತ್ತು ವಾಲ್ಮೀಕಿ ಸೌಧ ನಿರ್ಮಾಣ ಮಾಡುವುದರ ಜೊತೆಗೆ ತಮ್ಮ ಇಲಾಖೆಯಿಂದ ಪರಿಶಿಷ್ಟರ ಅಭಿವೃದ್ಧಿಿಗೆ ವಿಶೇಷ ಯೋಜನೆಗಳು ಹಮ್ಮಿಿಕೊಳ್ಳುತ್ತೇವೆ ಎಂದ ಅವರು ಕೇವಲ ಜಯಂತಿಗೆ ಮಾತ್ರ ಸೀಮಿತವಾಗದೆ ವರ್ಷವಿಡೀ ವಾಲ್ಮೀಕಿ ಅವರ ಆದರ್ಶಗಳನ್ನು ಜನರಿಗೆ ತಿಳಿಸುವ ಕೆಲಸವನ್ನು ಸರ್ಕಾರ ಮತ್ತು ಸಮುದಾಯ ಮಾಡಬೇಕು ಎಂದರು.
ಪ್ರಶಸ್ತಿಿ ಪ್ರದಾನ:
2025ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಿಯನ್ನು ಕೆ. ಉಚ್ಛಂಗಪ್ಪ, ಮಳಸಿದ್ದ ಲಕ್ಷ್ಮಣ ನಾಯಿಕೋಡಿ, ನಾಗರಾಜು ಗಾಣದ ಹುಣಸೆ, ಜಿ.ಕೆ. ಮುತ್ತಮ್ಮ, ತಿಪ್ಪೇಸ್ವಾಾಮಿ.ಪಿ ಅವರುಗಳಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿಿಯು 5 ಲಕ್ಷ ರೂ. ನಗದು ಮತ್ತು 25 ಗ್ರಾಾಂ. ಚಿನ್ನದ ಪದಕ ಹೊಂದಿದೆ.
ಕಾರ್ಯಕ್ರಮದಲ್ಲಿ ಶಾಸಕರಾದ ರಿಜ್ವಾಾನ್ ಅರ್ಷದ್, ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ರಾಯಚೂರು ಗ್ರಾಾಮೀಣ ಶಾಸಕ ಹಾಗೂ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್, ಶಾಸಕಿ ಅನ್ನಪೂರ್ಣ, ವಿಧಾನ ಸಭೆಯ ಮುಖ್ಯ ಸಚೇತಕ ಅಶೋಕ ಮಹದೇವಪ್ಪ ಪಟ್ಟಣ, ಪರಿಶಿಷ್ಟ ಪಂಗಡಗಳ ಕಲ್ಯಾಾಣ ಇಲಾಖೆ ಮತ್ತು ಗ್ರಾಾಮೀಣಾಭಿವೃದ್ಧಿಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರಂದೀಪ್.ಡಿ ಹಾಗೂ ಅಧಿಕಾರಿಗಳು ಉಪಸ್ಥಿಿತರಿದ್ದರು.

