ಸುದ್ದಿಮೂಲ ವಾರ್ತೆ ಯಾದಗಿರಿ, ಡಿ.29:
ಮುಂಬರುವ ಬಜೆಟ್ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಮಂಡಿಸಲಿದ್ದಾಾರೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
ಸೋಮವಾರ ನಗರದಲ್ಲಿ ಆಯೋಜಿಸಲಾಗಿರುವ ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು, ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಇದರಲ್ಲಿ ಯಾವುದೇ ಅನುಮಾನ ಬೇಡ ಸಿದ್ದರಾಮಯ್ಯ ಅವರೇ ಮತ್ತೆೆ ಬಜೆಟ್ ಮಂಡಿಸುತ್ತಾಾರೆ ಎಂದರು.
ಸದ್ಯ ಸಿದ್ದರಾಮಯ್ಯ ಅವರೇ ಸಿಎಂ ಇದ್ದಾರಲ್ಲ ಅವರೇ ಮಂಡಿಸಲಿದ್ದಾರೆ. ಸಂಕ್ರಾಾಂತಿ ಮುಗಿದ ಮೇಲೆ ಅಧಿಕಾರ ಬದಲಾವಣೆ ವಿಚಾರ ಬಗ್ಗೆೆ ಯಾವುದೇ ಮಾಹಿತಿ ಇಲ್ಲ. ಹಬ್ಬ ಮುಗಿದ ಬಳಿಕ ನೋಡೋಣ ಎಂದರು. ರಾಹುಲ್ ಗಾಂಧಿ ದೆಹಲಿಗೆ ಬಂದ ಬಳಿಕ ಮತ್ತೊೊಮ್ಮೆೆ ಡಿಕೆಶಿ ಬೆಂಬಲಿಗರು ಭೇಟಿ ಮಾಡುವ ಸಂದರ್ಭವಿಲ್ಲ. ಪಕ್ಷ ಹೈಕಮಾಂಡ್ ಇದೆ, ಯಾರೂ ಡೆಲ್ಲಿಗೆ ಹೋಗೋದಿಲ್ಲ. ಏನೇ ಮಾಡಬೇಕಾದ್ರೂ ಹೈಕಮಾಂಡ್ ಗೆ ಬಿಟ್ಟ ವಿಚಾರವಾಗಿದೆ. ಹೈಕಮಾಡ್ ಏನು ಹೇಳುತ್ತೋೋ ಅದಕ್ಕೆೆ ನಾವೆಲ್ಲ ಬದ್ಧರಾಗಿರಬೇಕು ಎಂದು ತಿಳಿಸಿದರು.

