ಸುದ್ದಿಮೂಲ ವಾರ್ತೆ ಕೊಪ್ಪಳ, ಡಿ.29:
ಡಿ ಕೆ ಶಿವಕುಮಾರ. ಸಿದ್ದರಾಮಯ್ಯ ಮಧ್ಯೆೆ ಅಧಿಕಾರಕ್ಕಾಾಗಿ ಹೊಂದಾಣಿಕೆಯಾಗಿದೆ.ಸಂಕ್ರಾಾಂತಿಯ ನಂತರ ಒಳ್ಳೆೆಯ ದಿನ ನೋಡಿ ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡಬಹುದು ಎಂದು ಶಾಸಕ ಗಾಲಿ ಜನಾರ್ದನರಡ್ಡಿಿ ಹೇಳಿದರು.
ಅವರು ಇಂದು ಮುನಿರಾಬಾದ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಸಿದ್ದರಾಮಯ್ಯ ಕೊಟ್ಟ ಮಾತು ಉಳಿಸಿಕೊಳ್ಳುತ್ತಾಾರೆ. ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡುತ್ತಾಾರೆ ಎಂದು ಕಾಂಗ್ರೆೆಸ್ ಪಕ್ಷದವರು ಸಹ ಡಿ ಕೆ ಶಿವಕುಮಾರ ಸಿಎಂ ಆಗುತ್ತಾಾರೆ ಎಂದು ಮಾತನಾಡುತ್ತಿಿದ್ದಾಾರೆರೆ ಎಂದು ಹೇಳಿದರು.
ಮುಖ್ಯಮಂತ್ರಿಿಗಳ ಮನೆಯ ಹತ್ತಿಿರ ಹಾಗು ರಾಜಧಾನಿ ಬೆಂಗಳೂರಿನ ಮೂರು ಕಡೆ ಡ್ರಗ್ಸ್ ್ಯಾಕ್ಟರಿ ಪತ್ತೆೆಯಾಗಿವೆ. ಮಹಾರಾಷ್ಟ್ರಪೊಲೀಸರು ಪತ್ತೆೆ ಮಾಡಿದ್ದಾಾರೆ. ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ನಡೆಯುತ್ತಿಿದೆ. ಇಡೀ ದೇಶದಲ್ಲಿ ಕರ್ನಾಟಕ ತಲೆತೆಗ್ಗಿಿಸುವಂತಾಗಿದೆ. ಇದಕ್ಕೆೆ ಮುಖ್ಯಮಂತ್ರಿಿ ಹಾಗು ಸರಕಾರ ಹೊಣೆ ಹೊರಬೇಕು. ಸರಕಾರಕ್ಕೆೆ ಡ್ರಗ್ಸ್ ್ಯಾಕ್ಟರಿ ಇರುವುದು ನಾಚಿಗೇಡು. ರಾಜ್ಯದಲ್ಲಿ ಕೊಪ್ಪಳ, ಬಳ್ಳಾಾರಿಯಲ್ಲಿ ಡ್ರಗ್ಸ್ ಮಾಫಿಯಾ ಇದೆ. ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದರೂ ಸಚಿವರು, ಕಾಂಗ್ರೆೆಸ್ ಶಾಸಕರು ಬಿಡುತ್ತಿಿಲ್ಲ. ಬಳ್ಳಾಾರಿ ಎಸ್ಪಿಿ ಒಳ್ಳೆೆಯ ಕೆಲಸ ಮಾಡುತ್ತಾಾರೆ. ಅವರಿಗೆ ಕೆಲಸ ಮಾಡಲು ಬಿಡುತ್ತಿಿಲ್ಲ ಹೀಗಾಗಿ ಅವರು ಬೇರೆಡೆ ಹೋಗಲು ಯತ್ನಿಿಸುತ್ತಿಿದ್ದಾಾರೆ ಎಂದು ಆರೋಪಿಸಿದರು.
ಬೇಲಿಕೇರಿ ಅದಿರು ಪ್ರಕರಣದ ಬಗ್ಗೆೆ ಸಿಬಿಐ ಅಧಿಕಾರಿಗಳ ಮಾಹಿತಿ ತಪ್ಪುು ಎಂದು ನ್ಯಾಾಯಾಲಯ ಹೇಳಿದೆ. ನ್ಯಾಾಯಾಲಯದಲ್ಲಿರುವದರಿಂದ ಈ ಕುರಿತು ಮಾತನಾಡುವುದಿಲ್ಲ. ಹಿಂದಿನ ಕೇಂದ್ರ ಸರಕಾರ ಸಿಬಿಐ ಬಳಸಿಕೊಂಡು ನನ್ನನ್ನು ಸೇರಿ ಪ್ರಮುಖರನ್ನು ಬಂಧಿಸಿದ್ದಾಾರೆ. ಸತ್ಯಕ್ಕೆೆ ಯಾವುತ್ತೂ ಜಯ ಸಿಗುತ್ತೆೆ ಎಂದು ಹೇಳಿದರು.

