ಸುದ್ದಿಮೂಲವಾರ್ತೆ
ಕೊಪ್ಪಳ ಏ ೦೭: ಕಾಂಗ್ರೆಸ್ ಪಕ್ಷದಲ್ಲಿ ಮತ್ತೆ ಸಿದ್ದರಾಮಯ್ಯ ಎಂಬ ಕೂಗು ಕೇಳಿ ಬರುತ್ತಿದೆ. ಇದಕ್ಕೆ ಪೂರಕ ಎಂಬAತೆ ಮಾಜಿ ಸಚಿವ ಬಸವರಾಜ ರಾಯರಡ್ಡಿ ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು. ಅವರ ಬಿಟ್ಟು ಬೇರೆ ಯಾರು ಸಿಎಂ ಆಗುವಂಥವರು ಕಾಣುತ್ತಿಲ್ಲ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಪರ ಬ್ಯಾಟಿಂಗ್ ನಡೆಸಿದ್ದಾರೆ.
ಯಲಬುರ್ಗಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಯಲಬುರ್ಗಾ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಬಸವರಾಜ ರಾಯರಡ್ಡಿ ಸಿದ್ದರಾಮಯ್ಯ ಕಾನೂನು ಗೊತ್ತಿದ್ದವರು ಅಂಥವರು ಮುಖ್ಯಮಂತ್ರಿಯಾಗಬೇಕೆಂದು ಹೇಳಿದರು.
ಸಿದ್ದರಾಮಯ್ಯ ನಂತರ ವಿಧಾನಸಭೆಯಲ್ಲಿ ಸಮರ್ಥವಾಗಿ ಮಾತನಾಡೋರು ಇಲ್ಲ.ಕಾನೂನು ಗೊತ್ತಿಲ್ಲದವರೊಂದಿಗೆ ನಾನು ವಿಧಾನಸಭೆಯಲ್ಲಿ ಕೂಡಬೇಕು ಎಂಬ ಆತಂಕವಿದೆ. ಬಿಜೆಪಿ ರಾಜಕಾರಣವನ್ನು ಹಾಳು ಮಾಡಿದೆ ಎಂದು ಟೀಕಿಸಿದರು.
ರಾಜ್ಯ ಸರಕಾರ ಒಳಮೀಸಲಾತಿ, ೨ಡಿ ಮೀಸಲಾತಿ ಶಿಫಾರಸ್ಸು ಮಾಡಿದೆ.ಇದು ಜಾರಿಯಾಗುವುದು ಅನುಮಾನ.ಕೇಂದ್ರ ಸರಕಾರ ಒಪ್ಪಿಕೊಳ್ಳಬೇಕು ಹಾಗು ೧೬ ರಾಜ್ಯಗಳು ಸಹ ಒಪ್ಪಿಕೊಳ್ಳಬೇಕು.ಆಂಧ್ರದಲ್ಲಿ ಒಳಮೀಸಲಾತಿಗೆ ಶಿಫಾರಸ್ಸು ಮಾಡಿ ೮ ವರ್ಷವಾಗಿದೆ ಅಲ್ಲಿ ಜಾರಿಯಾಗಿಲ್ಲ.ಮುಸ್ಲಿಂರಿಗೂ ಮೀಸಲಾತಿ ಕಡಿತ ಮಾಡಿದೆ ಅದನ್ನು ಸಹ ನ್ಯಾಯಲಯದಲ್ಲಿ ಪ್ರಶ್ನಿಸುವ ಸಾಧ್ಯತೆ ಇದೆ.ಕಾನೂನು ಗೊತ್ತಿಲ್ಲ ಒಳಮೀಸಲಾತಿಯ ಬಗ್ಗೆ ಮಾತನಾಡುತ್ತಿದ್ದಾರೆ.೨ಡಿ ಮೀಸಲಾತಿಯಿಂದ ಲಿಂಗಾಯತ್ ಅಂಥ ಬದಲಾವಣೆಯಾಗುವುದಿಲ್ಲ ಎಂದರು.
ಸಚಿವ ಹಾಲಪ್ಪ ಆಚಾರರಿಗೆ ಬಿಜೆಪಿ ಟಿಕೆಟ್ ಸಿಗುವುದು ಡೌಟು. ಹೀಗೆಂದು ಬಿಜೆಪಿ ಕೆಲವು ಸ್ನೇಹಿತರು ನನಗೆ ಹೇಳಿದ್ದಾರೆ.ಯಲಬುರ್ಗಾ ಕ್ಷೇತ್ರಕ್ಕೆ ಹೊರಗಿನಿಂದ ಅಭ್ಯರ್ಥಿ ಹಾಕುವ ಸಾಧ್ಯತೆ ಇದೆ.ಎಪ್ರಿಲ್ ೧೫ ರವರೆಗೂ ಯಲಬುರ್ಗಾ ಘೋಷಣೆ ಸಾಧ್ಯತೆ ಕಡಿಮೆ.ಹಾಲಪ್ಪ ಆಚಾರ ತಮ್ಮ ಕುಟುಂಬದವರಿಗೆ ಅಧಿಕಾರ ನೀಡಿದ್ದಾರೆ.ಡಿಸಿಸಿ ಬ್ಯಾಂಕಿಗೆ ಅಳಿಯನನ್ನು ನಿರ್ದೇಶಕರನ್ನಾಗಿ ಮಾಡಿದ್ದಾರೆ ಎಂದರು.ಹಾಲಪ್ಪ ಆಚಾರ ಯಲಬುರ್ಗಾಕ್ಕೆ ನೀರು ತಂದಿದ್ದು ಎಂದು ಹೇಳುತ್ತಿದ್ದಾರೆ. ಯಲಬುರ್ಗಾ ಎಷ್ಟು ಪ್ರಮಾಣ ನೀರು ಅಲಾಕೇಷನ್ ಆಗಿದೆ ಎಂದು ಹೇಳಲಿ.ಕಾನೂನು ಗೊತ್ತಿಲ್ಲದೆ ಮಾತನಾಡುತ್ತಿದ್ದಾರೆ .ನಾನು ಎಲ್ಎಲ್ ಬಿ ಓದಿ ವಕೀಲನಾಗಿದ್ದವ.ರಾಜಕಾರಣಗಳು ಕಾನೂನು ತಿಳಿದುಕೊಳ್ಳಬೇಕು ಎಂದರು. ಹಾಲಪ್ಪ ಆಚಾರ ಸೀರೆ, ಕುಬಸ ಹಂಚಿದ್ದಾರೆ. ಈ ಸೀರೆಯನ್ನು ಮಹಿಳೆಯರು ಉಟ್ಟುಕೊಳ್ಳುತ್ತಿಲ್ಲ. ಅವುಗಳನ್ನು ಹಪ್ಪಳ ಸಂಡಿಗೆ ಒಣಗಿಸಲು ಹಾಕುತ್ತಿದ್ದಾರೆ ಎಂದು ಹೇಳಿದರು.