ಸುದ್ದಿಮೂಲ ವಾರ್ತೆ ಬೆಂಗಳೂರು, ಜ.03:
ಮೋದಿ ಸರ್ಕಾರ ಮಹಾತ್ಮಾಾ ಗಾಂಧಿ ರಾಷ್ಟ್ರೀಯ ಉದ್ಯೋೋಗ ಖಾತ್ರಿಿ ಯೋಜನೆ ಹಿಂಪಡೆಯುವ ಮೂಲಕ ವಿಬಿ ಜಿ ರಾಮ್ ಜಿ ಹೆಸರಿನಲ್ಲಿ ಹೊಸ ಕಾಯ್ದೆೆಜಾರಿ ಮಾಡಿ ಸರ್ವಾಧಿಕಾರಿ ಧೋರಣೆ ತೋರಿದೆ. ಕೂಡಲೇ ಈ ಹೊಸ ಕಾಯ್ದೆೆ ವಾಪಸ್ ಪಡೆದು ಈಹಿಂದಿನ ಮನರೇಗಾ ಕಾಯ್ದೆೆ ಮುಂದುವರಿಸಬೇಕು ಎಂದು ಮುಖ್ಯಮಂತ್ರಿಿ ಸಿದ್ದರಾಮಯ್ಯ ಆಗ್ರಹಿಸಿದರು.
ಗೃಹ ಕಚೇರಿ ಕೃಷ್ಣಾಾದಲ್ಲಿ ಮಹಾತ್ಮಾಾ ಗಾಂಧಿ ರಾಷ್ಟ್ರೀಯ ಗ್ರಾಾಮೀಣ ಉದ್ಯೋೋಗ ಖಾತ್ರಿಿ ಯೋಜನೆ ರದ್ಧತಿ ಕುರಿತು ಸುದ್ದಿಗೋಷ್ಠಿಿಯಲ್ಲಿ ಮಾತನಾಡಿದ ಅವರು, ಮೋದಿ ಸರ್ಕಾರ ಮಹಾತ್ಮಾಾ ಗಾಂಧಿ ರಾಷ್ಟ್ರೀಯ ಉದ್ಯೋೋಗ ಖಾತ್ರಿಿ ಯೋಜನೆ ಹಿಂಪಡೆಯುವ ಮೂಲಕ ವಿಬಿ ಜಿ ರಾಮ್ ಜಿ ಹೆಸರಿನಲ್ಲಿ ಹೊಸ ಕಾಯ್ದೆೆ ಜಾರಿಗೆ ತರುವಾಗ, ರಾಜ್ಯ ಸರ್ಕಾರಗಳ ಅಭಿಪ್ರಾಾಯ ಕೇಳಿಲ್ಲ. ಭಾರತೀಯರ ಅಭಿಪ್ರಾಾಯ ಪಡೆಯದೆ ನೇರವಾಗಿ ಹೊಸ ಕಾಯ್ದೆೆ ಜಾರಿಗೊಳಿಸುವ ಮೂಲಕ ಸರ್ವಾಧಿಕಾರಿ ಧೋರಣೆ ಪ್ರದರ್ಶಿಸಿದೆ ಎಂದರು.
ಮನಮೋಹನ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರ ಉದ್ಯೋೋಗದ ಹಕ್ಕು, ಮಾಹಿತಿ ಹಕ್ಕು, ಶೈಕ್ಷಣಿಕ ಹಕ್ಕು ಮೊದಲಾದ ಕ್ರಾಾಂತಿಕಾರಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಜನರಿಗೆ ಹೆಚ್ಚಿಿನ ಅಧಿಕಾರ ನೀಡುವ ಕಾರ್ಯ ಮಾಡಿತ್ತು. ಆದರೆ, ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹಳ್ಳಿಿ ಅಧಿಕಾರ ಕಸಿದುಕೊಂಡು, ಗ್ರಾಾಮೀಣ ಆರ್ಥಿಕತೆ ನಾಶ ಪಡಿಸಲು ಮುಂದಾಗಿದೆ. ಅಲ್ಲದೆ, ಈ ಜನಪರ ಕಾಯ್ದೆೆಯನ್ನು ಹಿಂಪಡೆದುಕೊಳ್ಳುವ ಮೂಲಕ ಕಾರ್ಪೊರೇಟ್ ಕಂಪೆನಿಗಳಿಗೆ ಲಾಭ ಮಾಡಿಕೊಡುವ ಕೆಲಸವನ್ನು ಮೋದಿ ಸರ್ಕಾರ ಮಾಡುತ್ತಿಿದೆ ಎಂದು ಕಿಡಿಕಾರಿದರು.
ಮನುಸ್ಮೃತಿ ಪ್ರಕಾರ ಮಹಿಳೆಯರು, ದಲಿತರು ಮತ್ತು ಶೂದ್ರರ ಕೈಯಲ್ಲಿ ಹಣ ಇರಬಾರದು. ಅವರು ಸ್ವಾಾಭಿಮಾನದಿಂದ ಬದುಕಬಾರದು. ಅವರು ಪೂರ್ಣ ಸೇವಕರಾಗಿಯೇ ಇರಬೇಕು ಎಂದು ಹೇಳುತ್ತದೆ. ಇಂತಹ ಮನುಸ್ಮೃತಿಯಿಂದ ಪ್ರೇೇರಣೆ ಪಡೆದಿರುವ ಆರ್ಎಸ್ಎಸ್ ಬಿಜೆಪಿ ಸರ್ಕಾರಕ್ಕೆೆ ಮಾರ್ಗದರ್ಶಕವಾಗಿದೆ. ಮಹಾತ್ಮಾಾ ಗಾಂಧಿಯನ್ನು ಗೋಡ್ಸೆೆ ಮೊದಲ ಬಾರಿ ಕೊಂದು ಹಾಕಿದರೆ, ಇದೀಗ ನರೇಗಾ ಕಾಯ್ದೆೆಯಲ್ಲಿ ಇದ್ದ ಮಹಾತ್ಮಾಾ ಗಾಂಧಿ ಹೆಸರನ್ನು ತೆಗೆದು ಹಾಕುವ ಮೂಲಕ ಬಿಜೆಪಿ ಮತ್ತೆೆ ಅವರನ್ನು ಮತ್ತೆೆ ಮತ್ತೆೆ ಕೊಲ್ಲುವ ಕೆಲಸ ಮಾಡುತ್ತಿಿದೆ ಎಂದರು.
ಮೋದಿ ಸರ್ಕಾರ ಡಿಸೆಂಬರ್ 17ರಂದು ಕಾಯ್ದೆೆ ಸಂಸತ್ತಿಿನಲ್ಲಿ ಮಂಡಿಸಿ ಡಿ.18ರಂದು ಅಂಗೀಕಾರ ಪಡೆದಿದೆ. ಸುಮಾರು 12.16 ಕೋಟಿ ನರೇಗಾ ಕಾರ್ಮಿಕರು ದೇಶದಲ್ಲಿದ್ದಾರೆ. ಅದರಲ್ಲಿ 6.21 ಕೋಟಿ ಮಹಿಳೆಯರು ಇದ್ದಾರೆ. ಪ.ಜಾತಿಯವರು ಶೇ.17, ಪ.ವರ್ಗ ಶೇ. 11 ಇದ್ದಾರೆ. ನಮ್ಮ ರಾಜ್ಯದಲ್ಲಿ 71.18 ಲಕ್ಷ ನರೇಗಾ ಕಾರ್ಮಿಕರಿದ್ದಾರೆ. ಇದರಲ್ಲಿ 36.75 ಲಕ್ಷ ಮಹಿಳೆಯರು, ಅಂದರೆ ಶೇ. 51.6 ಮಹಿಳೆಯರಿದ್ದಾರೆ ಎಂದು ವಿವರಿಸಿದರು.
ಕಳೆದ 11 ವರ್ಷಗಳ ಕೇಂದ್ರ ಸರ್ಕಾರದ ಸಾಧನೆ ಅಂದರೆ ಯೋಜನೆಗಳ ಹೆಸರು ಬದಲಾಯಿಸಿರುವುದು ಮಾತ್ರ. ಹಿಂದೆ ಜಾರಿಯಲ್ಲಿದ್ದ ಸುಮಾರು 30 ಯೋಜನೆಗಳ ಹೆಸರು ಬದಲಾವಣೆ ಅಥವಾ ಕಾಯ್ದೆೆಗಳನ್ನು ಹಿಂತೆಗೆದುಕೊಳ್ಳುವ ಕಾರ್ಯವನ್ನು ಮೋದಿ ಸರ್ಕಾರ ಮಾಡಿದೆ. ಪ್ರಸ್ತುತ ಕಾಯ್ದೆೆಯಡಿ 100 ದಿನ ಕನಿಷ್ಟ ಕೆಲಸ ನೀಡಬೇಕಾಗಿತ್ತು. ಅವರು ಎಲ್ಲಿ ವಾಸಿಸುತ್ತಾಾರೋ ಅಲ್ಲಿಯೇ ಕೆಲಸ ನೀಡಬೇಕಾಗಿತ್ತು. ಈಗ ಹೊಸ ಕಾಯ್ದೆೆ ಸೆಕ್ಷನ್ 5(1) ಪ್ರಕಾರ ಸರ್ಕಾರ ಅಧಿಸೂಚಿತ ಪ್ರದೇಶದಲ್ಲಿ ಮಾತ್ರ ಉದ್ಯೋೋಗ ನೀಡಲಾಗುತ್ತದೆ. ಉದ್ಯೋೋಗ ದೊರೆಯುವ ಬಗ್ಗೆೆ ಯಾವುದೇ ಗ್ರಾಾಮ ಪಂಚಾಯತ್ ಗಳಿಗೂ ಖಾತ್ರಿಿಯಿರುವುದಿಲ್ಲ ಎಂದರು.
ಹೊಸ ಬದಲಾವಣೆಗಳಿಂದ ತೊಂದರೆ:
ವರ್ಷದ ಯಾವುದೇ ಅವಧಿಯಲ್ಲಿ ಲಭ್ಯವಾಗುತ್ತಿಿದ್ದ ಕೂಲಿ ಕೆಲಸವನ್ನು ಈಗ ನಿರ್ಬಂಧಿಸಲಾಗಿದ್ದು, ಕೃಷಿ ಚಟುವಟಿಕೆ ಅವಧಿಯ 60 ದಿನ ಯೋಜನೆಯಡಿ ಯಾವುದೇ ಉದ್ಯೋೋಗ ನೀಡಲಾಗುವುದಿಲ್ಲ. ಹಣದುಬ್ಬರಕ್ಕೆೆ ತಕ್ಕಂತೆ ಕೂಲಿ ಹಣವನ್ನು ಸರಿದೂಗಿಸುವ ಅವಕಾಶವನ್ನು ತೆಗೆದು ಹಾಕಲಾಗಿದೆ. ಹಿಂದಿನ ಕಾಯ್ದೆೆ ಪ್ರಕಾರ ಕೇಂದ್ರ ಸರ್ಕಾರ ಪೂರ್ಣ ಅನುದಾನವನ್ನು ಭರಿಸುತ್ತಿಿತ್ತು. ಹೊಸ ಕಾಯ್ದೆೆ ಪ್ರಕಾರ ಶೇ.60 ರಷ್ಟು ಕೇಂದ್ರ ಹಾಗೂ ಶೇ.40ರಷ್ಟು ರಾಜ್ಯ ಸರ್ಕಾರ ಭರಿಸಲಿದೆ. ಇದು ರಾಜ್ಯಗಳ ಮೇಲೆ ಹೆಚ್ಚಿಿನ ಹಣಕಾಸು ಹೊರೆ ಹೇರಲಿದ್ದು, ಇದು ಸಂವಿಧಾನದ ಆರ್ಟಿಕಲ್ 258 ಮತ್ತು 280ಗೆ ವಿರುದ್ಧವಾಗಿದೆ ಎಂದು ಆಕ್ರೋೋಶ ವ್ಯಕ್ತಪಡಿಸಿದರು.
ಗ್ರಾಾಮ ಪಂಚಾಯತ್ಗಳಿಗೆ ಇದ್ದ ಅಧಿಕಾರವನ್ನು ಇದೀಗ ಕೇಂದ್ರ ಸರ್ಕಾರ ಕಿತ್ತು ಕೊಂಡಿದ್ದು, ಇದು ಒಕ್ಕೂಟ ವ್ಯವಸ್ಥೆೆಗೆ ಮತ್ತು ಸಂವಿಧಾನಕ್ಕೆೆ ವಿರುದ್ಧವಾಗಿದೆ. ಹೊಸ ಕಾಯ್ದೆೆ ಜಾರಿಗೊಳಿಸದಿರುವಂತೆ ಕೋರಿ ಪ್ರಧಾನಿಯವರಿಗೆ ಡಿ.30ರಂದು ನಾನು ಪತ್ರ ಬರೆದಿದ್ದೇನೆ. ಹೊಸ ಕಾಯ್ದೆೆಯನ್ನು ರದ್ದುಪಡಿಸಬೇಕು. ನರೇಗಾ ಕಾಯ್ದೆೆ ಮತ್ತೆೆ ಜಾರಿಗೊಳಿಸಬೇಕು. ಮಹಿಳೆಯರು, ದಲಿತರ ಉದ್ಯೋೋಗದ ಹಕ್ಕನ್ನು ಪುರ್ನ ಸ್ಥಾಾಪಿಸಬೇಕು. ಪಂಚಾಯತ್ಗಳ ಸ್ವಯಂ ಆಡಳಿತದ ಹಕ್ಕನ್ನು ಮರು ಸ್ಥಾಾಪಿಸಬೇಕು ಎಂದು ರಾಜ್ಯ ಸರ್ಕಾರ ಕೇಂದ್ರವನ್ನು ಒತ್ತಾಾಯಿಸಿದೆ ಎಂದರು.
ಉಪ ಮುಖ್ಯಮಂತ್ರಿಿ ಡಿ.ಕೆ.ಶಿವಕುಮಾರ್, ಸಚಿವರಾದ ಪ್ರಿಿಯಾಂಕ್ ಖರ್ಗೆ, ಕೆ.ಎಚ್.ಮುನಿಯಪ್ಪ, ಚಲುವರಾಯ ಸ್ವಾಾಮಿ, ಲಕ್ಷ್ಮಿಿ ಹೆಬ್ಬಾಾಳ್ಕರ್, ಶರಣ ಪ್ರಕಾಶ್ ಪಾಟೀಲ್, ಮುಖ್ಯಮಂತ್ರಿಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಉಪಸ್ಥಿಿತರಿದ್ದರು.
ಮಸೂದೆ ಹಿಂಪಡೆಯುವವರೆಗೂ ಆಂದೋಲನ: ಡಿಸಿಎಂ
ರಾಜ್ಯದ ಕೂಲಿ ಕಾರ್ಮಿಕರ ಬದುಕು ಹಾಗೂ ಗ್ರಾಾಮೀಣ ಪ್ರದೇಶದ ಅಭಿವೃದ್ಧಿಿಗೆ ಮಾರಕವಾಗಿರುವ ವಿಬಿ ಜಿ ರಾಮ್ ಜಿ ಮಸೂದೆಯನ್ನು ಕೇಂದ್ರ ಸರ್ಕಾರ ಹಿಂಪಡೆಯುವವರೆಗೂ ಪಕ್ಷತೀತವಾಗಿ ಆಂದೋಲನ ರೂಪಿಸಲಾಗುವುದು ಎಂದು ಉಪಮುಖ್ಯಮಂತ್ರಿಿ ಡಿ.ಕೆ. ಶಿವಕುಮಾರ್ಹೇಳಿದರು.
ಈ ಮಸೂದೆ ವಿರುದ್ಧದ ಹೋರಾಟ ಕೇವಲ ಪಕ್ಷ ಅಥವಾ ಸರ್ಕಾರಕ್ಕೆೆ ಮಾತ್ರ ಸೀಮಿತವಲ್ಲ. ಪ್ರತಿ ಪಂಚಾಯ್ತಿಿಯಲ್ಲಿ ಪ್ರತಿಯೊಬ್ಬರನ್ನು ಆಹ್ವಾಾನ ನೀಡಿ ನಮ್ಮ ನಾಯಕರು ಸೇರಿ ಸಮಾವೇಶ ಹಾಗೂ ಗ್ರಾಾಮ ಸಭೆ ನಡೆಸುತ್ತೇವೆ. ಅಲ್ಲಿ ಇದರ ಬಗ್ಗೆೆ ಚರ್ಚೆ ಮಾಡುತ್ತೇವೆ. ನಂತರ ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಹೋರಾಟ ಮಾಡುತ್ತೇವೆ. ಕೇಂದ್ರ ಸರ್ಕಾರ ಹೇಗೆ ಕೃಷಿ ಕರಾಳ ಕಾಯ್ದೆೆ ಹಿಂಪಡೆಯಿತೋ ಅದೇ ರೀತಿ ಈ ಮಸೂದೆಯನ್ನು ಹಿಂಪಡೆಯುವಂತೆ ಮಾಡಲು ಆಂದೋಲನ ಮಾಡುತ್ತೇವೆ. ಪಕ್ಷಬೇಧ ಮರೆತು ನಮ್ಮ ಹೋರಾಟ ರೂಪಿಸುತ್ತೇವೆ ಎಂದು ಹೇಳಿದರು.
ಕಳೆದ 20 ವರ್ಷಗಳಿಂದ ಹಳ್ಳಿಿ ಜನ ತಮ್ಮ ಬೆವರು ಸುರಿಸಿ ತಮ್ಮ ಹಳ್ಳಿಿಗಳ ಅಭಿವೃದ್ಧಿಿ ಮಾಡುವ ಪ್ರಯತ್ನಕ್ಕೆೆ ಅಂತ್ಯ ಹಾಡಲಾಗುತ್ತಿಿದೆ. ಕೇಂದ್ರ ಸರ್ಕಾರದ ಹೊಸ ಮಸೂದೆ ನಮ್ಮ ಕರಾವಳಿ ಭಾಗದ ಮೀನುಗಾರರಿಗೂ ಅನ್ಯಾಾಯವಾಗಲಿದೆ. ಮನರೇಗಾ ಯೋಜನೆಯಲ್ಲಿ ಮೀನುಗಾರರಿಗೂ ಕೂಲಿ ಪಡೆಯುವ ಅವಕಾಶವಿತ್ತು. ಇದನ್ನೂ ಕಸಿಯಲಾಗಿದೆ. ರಾಜ್ಯ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ವಿಬಿ ಜಿ ರಾಮ್ ಜಿ ಯೋಜನೆಯನ್ನು ಸರಿ ಎಂದು ಸ್ವಾಾಗತಿಸುತ್ತಿಿಲ್ಲ, ತಪ್ಪುು ಎಂದು ವಿರೋಧ ಮಾಡುತ್ತಿಿಲ್ಲ. ಈ ವಿಚಾರದಲ್ಲಿ ಮೌನ ವಹಿಸಿದ್ದಾರೆ ಯಾಕೆ? ಎಂದು ಪ್ರಶ್ನಿಿಸಿದರು.

