ವಿರೂಪಾಕ್ಷ ಹೊಕ್ರಾಾಣಿ ಬೆಂಗಳೂರು, ಜ.05:
ರಾಜ್ಯ ಕಂಡ ಶ್ರೇೇಷ್ಠ ಆಡಳಿತಗಾರ, ಆರ್ಥಿಕ ತಜ್ಞ, ತಳ ಸಮುದಾಯಳಿಗೆ ಧ್ವನಿ ನೀಡಿದ ಮುಖ್ಯಮಂತ್ರಿಿ ಸಿದ್ದರಾಮಯ್ಯ ಇಂದು ತಮ್ಮ ಜೀವನದಲ್ಲಿ ಮತ್ತೊೊಂದು ಮೈಲಿಗಲ್ಲು ಸಾಧಿಸಿದ್ದಾರೆ. ಕರ್ನಾಟಕದಲ್ಲಿ ಅತಿಹೆಚ್ಚು ಕಾಲ ಮುಖ್ಯಮಂತ್ರಿಿಯಾಗಿ ಅಧಿಕಾರ ನಡೆಸಿದ ಕೀರ್ತಿಗೆ ಸಿದ್ದರಾಮಯ್ಯ ಪಾತ್ರರಾಗಿದ್ದು, ಹಿಂದುಳಿದ ವರ್ಗದ ಧೀಮಂತ ನಾಯಕ ಈ ಕೀರ್ತಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ರಾಜ್ಯದಲ್ಲಿ ಇದುವರೆಗೆ ಅತಿ ದೀರ್ಘಕಾಲದ ಮುಖ್ಯಮಂತ್ರಿಿಯಾದ ದಾಖಲೆ ದೇವರಾಜು ಅರಸು ಅವರ ಹೆಸರಲ್ಲಿತ್ತು. ಅರಸು ಅವರು 1972ರಿಂದ 1978ರವರೆಗೆ ಎರಡು ಅವಧಿಯಲ್ಲಿ 7 ವರ್ಷ 239 ದಿನಗಳ ಕಾಲ ಆಡಳಿತ ನಡೆಸಿದ್ದರು. ಅದು ಬಿಟ್ಟರೆ ಈಗ ಸಿದ್ದರಾಮಯ್ಯ ಎರಡು ಅವಧಿಗೆ ಅಂದರೆ 2013-18ರವರೆಗೆ 1829 ದಿನಗಳು (ಐದು ವರ್ಷ ಪೂರ್ಣ ಆಡಳಿತ) ಮತ್ತು 2023ರಿಂದ ಜ.5ರವರೆಗೆ 7 ವರ್ಷ 239 ದಿನ ಪೂರ್ಣಗೊಳಿಸಿ ಜ.6ರಂದು 7 ವರ್ಷ 240ನೇ ದಿನದ ಅಧಿಕಾರ ನಡೆಸಲಿದ್ದಾರೆ. ಈ ಮೂಲಕ ಅರಸು ದಾಖಲೆಯನ್ನು ಮೀರಿ ಅತಿ ಹೆಚ್ಚು ಅವಧಿಗೆ ಸಿಎಂ ಆದ ಕೀರ್ತಿಗೆ ಸಿದ್ದರಾಮಯ್ಯ ಪಾತ್ರವಾಗಲಿದ್ದಾರೆ.
ಇನ್ನು 3ನೇ ಸ್ಥಾಾನದಲ್ಲಿ ಎಸ್.ನಿಜಲಿಂಗಪ್ಪ (7 ವರ್ಷ 175 ದಿನ), 4ನೇ ಸ್ಥಾಾನ ರಾಮಕೃಷ್ಣ ಹೆಗ್ಡೆೆ (5 ವರ್ಷ 216 ದಿನ) ಮತ್ತು 5ನೇ ಸ್ಥಾಾನ ಬಿ.ಎಸ್.ಯಡಿಯೂರಪ್ಪ (5 ವರ್ಷ 82 ದಿನ) ಇದ್ದಾರೆ.
ಮೈಸೂರಿನ ವರುಣಾ ಹೋಬಳಿಯ ಸಿದ್ದರಾಮನ ಹುಂಡಿಯಲ್ಲಿ ಆ.12, 1948ರಂದು ಜನಿಸಿದ ಸಿದ್ದರಾಮಯ್ಯ ತಮ್ಮ ಹತ್ತನೇ ವರ್ಷದ ವರೆಗೆ ಶಾಲೆ ಮುಖವನ್ನೇ ನೋಡಿರಲಿಲ್ಲ. ಬಳಿಕ ನೇರವಾಗಿ ಐದನೇ ತರಗತಿಗೆ ಪ್ರವೇಶ ಪಡೆದು ತಮ್ಮ ಹುಟ್ಟೂರಿನಲ್ಲಿಯೇ ಪ್ರಾಾಥಮಿಕ, ಮಾಧ್ಯಮಿಕ, ಪ್ರೌೌಢ ಶಾಲೆ ಮುಗಿಸಿದರು. ಬಳಿಕ ಮೈಸೂರಿನಲ್ಲಿ ಪಿಯುಸಿ ಹಾಗೂ ಬಿಎಸ್ಸಿಿ ಪದವಿ ಪಡೆದರು. ತದನಂತರ ಮೈಸೂರು ಕಾನೂನು ವಿವಿಯಿಂದ ಕಾನೂನು ಪದವಿ ಪಡೆದು ಚಿಕ್ಕಬೋರಯ್ಯ ಎಂಬುವರ ಬಳಿ ಜೂನಿಯರ್ ಆಗಿ ವಕೀಲಿ ವೃತ್ತಿಿ ಆರಂಭಿಸಿದರು. 1978ರಲ್ಲಿ ಸ್ವಂತ ವಕೀಲ ವೃತ್ತಿಿಗೆ ಬಂದರು. ತದನಂತ ನಡೆದ ಬೆಳವಣಿಗೆಗಳಲ್ಲಿ ರಾಜಕೀಯಕ್ಕೆೆ ಧುಮುಕಿದ ಸಿದ್ದರಾಮಯ್ಯ ಅಂದಿನಿಂದ ಇಂದಿನವರೆಗೂ ಅಂದರೆ ಸುಮಾರು ಐದು ದಶಕಗಳ ಕಾಲ ಅಕ್ಷರಶಃ ಕರ್ನಾಟಕ ರಾಜಕಾರಣದ ‘ಸೆಂಟರ್ ಆ್ ಅಟ್ರಾಾಕ್ಷನ್’ ಆಗಿಯೇ ಮೆರೆಯುತ್ತಿಿದ್ದಾರೆ.
1983ರಲ್ಲಿ ಲೋಕದಳದಿಂದ ಮೈಸೂರಿನ ಚಾಮುಂಡೇಶ್ವರಿಯಿಂದ ಗೆದ್ದು ರಾಜಕೀಯ ಪ್ರವೇಶ ಮಾಡಿದರು. ಈ ವೇಳೆ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದರು. 1985ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಮತ್ತೊೊಮ್ಮೆೆ ಗೆದ್ದು ರಾಮಕೃಷ್ಣ ಹೆಗಡೆಯವರ ಸರ್ಕಾರದಲ್ಲಿ ಪಶು ಸಂಗೋಪನೆ ಸಚಿವರಾದರು. ಬಳಿಕ 1989ರ ಚುನಾವಣೆಯಲ್ಲಿ ಕಾಂಗ್ರೆೆಸ್ ಅಲೆಯಲ್ಲಿ ಸೋತರು. 1992ರಲ್ಲಿ ಸಮಾಜವಾದಿ ಜನತಾದಳದಿಂದ ದೇವೇಗೌಡರು ಜನತಾದಳ ಸೇರಿದಾಗ ಸಿದ್ದರಾಮಯ್ಯ ದೇವೇಗೌಡರ ಜೊತೆ ಜನತಾದಳ ಸೇರಿ ಆ ಪಕ್ಷದ ಕಾರ್ಯದರ್ಶಿಯಾದರು.
‘ಕುರಿ ಕಾಯುವವ ೈನಾನ್ಸ್ ಮಿನಿಸ್ಟರ್’
ಅದು 1994ರ ಇಸ್ವಿಿ. ಎಚ್.ಡಿ. ದೇವೇಗೌಡ ರಾಜ್ಯದ ಮುಖ್ಯಮಂತ್ರಿಿ. ಆ ಚುನಾವಣೆಯಲ್ಲಿ ಗೆದ್ದಿದ್ದ ಸಿದ್ದರಾಮಯ್ಯ ಅವರಿಗೆ ಜವಾಬ್ದಾಾರಿಯುತ ಹಣಕಾಸು ಖಾತೆ ನೀಡಿದರು. ಪ್ರಮುಖ ಇಂಗ್ಲೀಷ್ ದಿನಪತ್ರಿಿಕೆಯೊಂದು ‘ದನ ಕಾಯುವವ ಚ್ೀ ಮಿನಿಸ್ಟರ್, ಕುರಿ ಕಾಯುವವ ೈನಾನ್ಸ್ ಮಿನಿಸ್ಟರ್’ ಎಂದು ಮೂದಲಿಸುವ ವ್ಯಂಗ್ಯಚಿತ್ರ ಪ್ರಕಟಿಸಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ಸಿದ್ದರಾಮಯ್ಯ ಅದೇ ವರ್ಷ ಯಾವುದೇ ಅರ್ಥಿಕ ತಜ್ಞರಿಗೂ ಕಡಿಮೆ ಇಲ್ಲದಂತಹ ಶ್ರೇೇಷ್ಠ ಬಜೆಟ್ ನೀಡಿದರು. ಅದಕ್ಕೂ ಹಿಂದಿನ ವೀರಪ್ಪ ಮೊಯಿಲಿ ಸರ್ಕಾರ ಆರ್ಥಿಕ ದಿವಾಳಿತನದಿಂದ ಬೊಕ್ಕಸ ಬರಿದು ಮಾಡಿ ಹೋಗಿದ್ದರೆ, ಸಿದ್ದರಾಮಯ್ಯ ರಾಜ್ಯದ ಆರ್ಥಿಕತೆಯನ್ನು ಶಿಸ್ತಿಿನ ಹಳಿಗೆ ತಂದರು. ಹಿಂದಿನ ಸರ್ಕಾರದ ಸಾಲ ತಿರಿಸಿದರಲ್ಲದೆ, ತಮ್ಮ ಅವಧಿಯಲ್ಲಿ ರಾಜ್ಯದ ಖಜಾನೆಯಲ್ಲಿ 300ಕೋಟಿ ರೂ. ಉಳಿಕೆ ಮಾಡಿದ್ದರು.
1999ರ ವೇಳೆಗ ಜನತಾದಳ ಇಬ್ಬಾಾಗವಾದಾಗ ಸಿದ್ದರಾಮಯ್ಯ ಮತ್ತೆೆ ದೇವೇಗೌಡರ ಜೊತೆ ಜಾತ್ಯತೀತ ಜನತಾದಳದ ಕೈಹಿಡಿದರು. ಆದರೆ, ಅದೇ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡರು. 2004ರಲ್ಲಿ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಿಯಾಯಿತು. ಆಗ ಕಾಂಗ್ರೆೆಸ್ ಮತ್ತು ಜೆಡಿಎಸ್ ಜೊತೆಗೂಡಿ ಸರ್ಕಾರ ರಚನೆ ಮಾಡಿದಾಗ ಸಿದ್ದರಾಮಯ್ಯ ಉಪಮುಖ್ಯಮಂತ್ರಿಿ ಮತ್ತು ಹಣಕಾಸು ಸಚಿವರಾಗಿದ್ದರು. ಕುಮಾರಸ್ವಾಾಮಿ ಮುಖ್ಯಮಂತ್ರಿಿಯಾಗುತ್ತಿಿದ್ದಂತೆ ದೇವೇಗೌಡರ ಜೊತೆ ವೈಮನಸ್ಯದಿಂದ ಜೆಡಿಎಸ್ ಬಿಟ್ಟುಹೊರಬಂದ ಸಿದ್ದರಾಮಯ್ಯ ಅಖಿಲ ಭಾರತ ಪ್ರಗತಿಪರ ಜನತಾದಳ ಎಂಬ ಸ್ವಂತ ಪಕ್ಷ ಸ್ಥಾಾಪನೆ ಮಾಡಿದರು. ಆದರೆ, ಇದಕ್ಕೆೆ ಅಲ್ಪ ಆಯುಷ್ಯ. ಸಿದ್ದರಾಮಯ್ಯ ಸ್ವಂತ ಪಕ್ಷ ಮುಂದುವರಿಸಲು ಇಷ್ಟವಿಲ್ಲದೆ ಕಾಂಗ್ರೆೆಸ್ನತ್ತ ಮುಖ ಮಾಡಿದರು.
ಹೀಗೆ ಕಾಂಗ್ರೆೆಸ್ಗೆ ಬಂದ ಸಿದ್ದರಾಮಯ್ಯ ಆಹಿಂದ ಎಂಬ ಅಸ ಹಿಡಿದು ಕಾಂಗ್ರೆೆಸ್ನ ಘಟಾನುಘಟಿಗಳ ಮಧ್ಯೆೆಯೇ ತಮ್ಮ ಪ್ರಭಾವಳಿ ಉಳಿಸಿಕೊಂಡವರು ಸಿದ್ದರಾಮಯ್ಯ. ಕಾಂಗ್ರೆೆಸ್ ಪಕ್ಷದ ವರಿಷ್ಠರು ಅಳೆದು-ತೂಗಿ ಪಕ್ಷಕ್ಕೆೆ ಸೇರಿಸಿಕೊಂಡರೂ ಇಂದಿಗೂ ಆ ಪಕ್ಷಕ್ಕೇ ಆಸ್ತಿಿಯಾಗಿದ್ದಾರೆ. ಸಿದ್ದರಾಮಯ್ಯ ಎರಡು ಬಾರಿ ಮುಖ್ಯಮಂತ್ರಿಿಯ ಹುದ್ದೆ ಪಡೆದರು. 2013-18ರವರೆಗೆ ಪೂರ್ಣಾವಧಿಗೆ ಮುಖ್ಯಮಂತ್ರಿಿಯಾಗಿದ್ದರು. ಈಗ 2023ರಲ್ಲಿ ಕಾಂಗ್ರೆೆಸ್ ಮತ್ತೊೊಮ್ಮೆೆ ಅಧಿಕಾರಕ್ಕೆೆ ಬಂದ ಬಳಿಕ ಸಿದ್ದರಾಮಯ್ಯ ಅವರೇ ಮತ್ತೊೊಮ್ಮೆೆ ಮುಖ್ಯಮಂತ್ರಿಿಯಾಗಿ ಎರಡೂವರೆ ವರ್ಷ ಕಳೆದು ಮೂರನೇ ವರ್ಷದತ್ತ ದಾಪುಗಾಲು ಹಾಕುತ್ತಿಿದೆ.
ಆಡಳಿತದಲ್ಲಿ ಶಿಸ್ತು:
ಸಿದ್ದರಾಮಯ್ಯ ಎಂದರೆ ಆಡಳಿತದಲ್ಲಿ ಶಿಸ್ತು. ಆಡಳಿತದ ಮೇಲೆ ಸಂಪೂರ್ಣ ಹಿಡಿತ ಹೊಂದಿದ್ದ ಕೆಲವೇ ಕೆಲವು ಮುಖ್ಯಮಂತ್ರಿಿಗಳ ಪೈಕಿ ಸಿದ್ದರಾಮಯ್ಯ ಅವರೂ ಪ್ರಮುಖರು. ಯಾವುದೇ ಅಧಿಕಾರಿಯೂ ಸಹ ಸಿದ್ದರಾಮಯ್ಯ ಅವರನ್ನು ಮರಳು ಮಾಡಿ ದಾರಿ ತಪ್ಪಿಿಸಲು ಸಾಧ್ಯವಿಲ್ಲ. ಬಣ್ಣಬಣ್ಣದ ಯೋಜನೆಗಳನ್ನು ರೂಪಿಸಿ ಜನಪ್ರಿಿಯತೆಯ ಲಾಲಸೆಯನ್ನು ತೋರಿಸುವ ಅಧಿಕಾರಿಗಳಿಗೆ ಕ್ಯಾಾರೆ ಎನ್ನದ ಸಿದ್ದರಾಮಯ್ಯ, ’ನೀನು ಹೇಳುವ ಈ ಯೋಜನೆ ನನ್ನ ಸಿದ್ದರಾಮನ ಹುಂಡಿ ಜನಕ್ಕೆೆ ಸಿಗುತ್ತದೇನಯ್ಯ? ಆ ಜನರಿಗೆ ಸಿಕ್ಕರೆ ಹೇಳು ಇಲ್ಲದಿದ್ದರೆ, ನಡಿ’ ಎಂದು ಹೇಳುವ ಮೂಲಕ ಸರ್ಕಾರದ ಯೋಜನೆಗಳು ಪ್ರತಿ ಗ್ರಾಾಮೀಣ ಜನರಿಗೆ ಮುಟ್ಟುವಂತಿದ್ದರೆ ಮಾತ್ರ ಜಾರಿಮಾಡಬೇಕು ಎಂಬ ಬದ್ಧತೆ ತೋರುತ್ತಲೇ ಬಂದವರು.
ಸಿದ್ದರಾಮಯ್ಯ ಅವರನ್ನು ಬೆಂಬಲಿಗರು ಅನೇಕ ಸಂದರ್ಭಗಳಲ್ಲಿ ದೇವರಾಜು ಅರಸು ಅವರಿಗೆ ಹೋಲಿಕೆ ಮಾಡುತ್ತಾಾರೆ. ಆದರೆ, ಸಿದ್ದರಾಮಯ್ಯ ಎಂದಿಗೂ ಇದನ್ನು ಒಪ್ಪಿಿಲ್ಲ. ಅರಸು ಅರಸೇ, ಸಿದ್ದರಾಮಯ್ಯ ಸಿದ್ದರಾಮಯ್ಯನೇ. ನಾನು ಅರಸು ಅಗಲು ಸಾಧ್ಯವಿಲ್ಲ ಎಂದು ಹೇಳುತ್ತಲೇ ಇದ್ದಾರೆ.
ದೇವರಾಜ ಅರಸು ಪ್ರಬಲ ಜಾತಿಗಳ ಹೊರತಾಗಿ ಧ್ವನಿ ಎಲ್ಲ ಸಣ್ಣಪುಟ್ಟ ಜಾತಿ, ಸಮುದಾಯಗಳಿಗೆ ರಾಜಕೀಯ ಅಧಿಕಾರ ಕೊಟ್ಟವರು. ಅದರ ಜೊತೆಗೆ ಅವರು ಜಾರಿ ಮಾಡಿದ ಉಳುವವನೇ ಹೊಲದೊಡೆಯ, ಜೀತ ಪದ್ದತಿ ನಿಷೇಧ, ಮಲಹೊರುವ ಪದ್ಧತಿ ನಿಷೇಧ, ಹಾವನೂರು ಅಯೋಗ, ಕರ್ನಾಟಕ ರಾಜ್ಯ ಎಂದು ಮರುನಾಮಕರಣ ಹೀಗೆ ಮುಂತಾದ ಆಡಳಿತ ಮತ್ತು ಸಾಂಸ್ಥಿಿಕ ಸಾಧನೆಗಳು ಅರಸು ಹೆಸರನ್ನು ಕರ್ನಾಟಕ ರಾಜಕಾರಣದಲ್ಲಿ ಚಿರಸ್ಥಾಾಯಿ ಮಾಡಿವೆ.
ಆದರೆ, ಸಿದ್ದರಾಮಯ್ಯ ಅರಸು ರೀತಿಯಲ್ಲಿ ಪರ್ಯಾಯ ರಾಜಕಾರಣ ಸೃಷ್ಟಿಿಮಾಡಲಿಲ್ಲ. ಬದಲಿಗೆ ‘ಅಹಿಂದ’ ವರ್ಗಕ್ಕೆೆ ಚಿಮ್ಮುಹಲಗೆಯಾದರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದವರು, ಅಲ್ಪಸಂಖ್ಯಾಾತರ ಅಭ್ಯುದಯಕ್ಕೆೆ ಬಲ ತಂದುಕೊಟ್ಟರು.
ಸಿದ್ದರಾಮಯ್ಯ ತಮ್ಮ ಮೊದಲನೇ ಅವಧಿಯಲ್ಲಿ ‘ಅನ್ನಭಾಗ್ಯ’, ‘ಕ್ಷೀರಭಾಗ್ಯ’ ದಂತಹ ಭಾಗ್ಯಗಳನ್ನು ಕರ್ನಾಟಕಕ್ಕೆೆ ನೀಡಿದರೆ, ಎರಡನೇ ಅವಧಿಯಲ್ಲಿ ಪಂಚ ಗ್ಯಾಾರಂಟಿಗಳನ್ನು ನೀಡುವ ಮೂಲಕ ಮಹಿಳೆಯರು, ಬಡವರು, ಹಸಿದವರ ಅಭ್ಯುದಯಕ್ಕೆೆ ಕೊಡುಗೆ ನೀಡಿ ಇಡೀ ದೇಶಕ್ಕೆೆ ಮಾದರಿಯಾದಂತಹ ಯೋಜನೆಗಳನ್ನು ಯಶಸ್ವಿಿಯಾಗಿ ಜಾರಿ ಮಾಡಿದರು.
ಶಿಕ್ಷಣದಿಂದಲೇ ಪ್ರಗತಿ ಸಾಧ್ಯ ಎಂದು ಬಲವಾಗಿ ಪ್ರತಿಪಾದಿಸುವ ಸಿದ್ದರಾಮಯ್ಯ ತಮ್ಮ ಎಲ್ಲಾ ಬಜೆಟ್ಗಳಲ್ಲಿಯೂ ಶಿಕ್ಷಣಕ್ಕೆೆ ಒತ್ತು ನೀಡಿದ್ದನ್ನು ಸೂಕ್ಷ್ಮವಾಗಿ ಕಾಣಬಹುದು. ಅದರಲ್ಲೂ ಅಹಿಂದ ವರ್ಗದ ಮಕ್ಕಳಿಗೆ ವಸತಿ ಶಾಲೆಗಳು, ಸ್ಕಾಾಲರ್ಶಿಪ್ ಯೋಜನೆಗಳು, ವಿದೇಶದಲ್ಲಿ ಓದಲು ಹೋಗುವ ವಿದ್ಯಾಾರ್ಥಿಗಳಿಗೆ ಆರ್ಥಿಕ ಶಕ್ತಿಿ ನಿಡುವಂತಹ ಹತ್ತಾಾರು ಯೋಜನೆಗಳಿಗೆ ಧಾರಾಳವಾಗಿ ಹಣ ನೀಡಿದ್ದನ್ನು ಕಾಣಬಹುದು. ಶಿಕ್ಷಣ, ಆರೋಗ್ಯ ವಿಚಾರದಲ್ಲಿ ಧ್ವನಿ ಎಲ್ಲದ ಜನರಿಗೆ ಸಿಗುವಂತಹ ಸೌಲಭ್ಯಗಳನ್ನು ಸೂಕ್ಷ್ಮವಾಗಿ ಬಜೆಟ್ನಲ್ಲಿಯೇ ಸೇರಿಸುವ ಮೂಲಕ ಅವರ ಬದುಕಿಗೆ ಅಗಾಧ ಶಕ್ತಿಿ ನೀಡಿದ್ದು ಸಿದ್ದರಾಮಯ್ಯ.
ಸಿದ್ದರಾಮಯ್ಯ ಎಂದರೆ ಅಪಾರ ನೆನಪಿನ ಶಕ್ತಿಿ. ಸದನದಲ್ಲಿಯೇ ಆಗಲಿ, ಲಕ್ಷಾಂತರ ಜನರ ಮುಂದೆಯೇ ಆಗಲಿ. ರಾಜ್ಯದ ಬಜೆಟ್ ಗಾತ್ರ, ಯಾವ ಇಲಾಖೆಗಳಿಗೆ ಎಷ್ಟು ಹಣದ ಹಂಚಿಕೆ ಮಾಡಿದ್ದೇನೆ ಎಂಬುದು,
ರಾಜ್ಯದಲ್ಲಿ ಅತಿಹೆಚ್ಚು ಕಾಲ ಮುಖ್ಯಮಂತ್ರಿಿಯಾದ ದಾಖಲೆ ಸೇರಿದ ಸಿದ್ದರಾಮಯ್ಯ ಧ್ವನಿ ಇಲ್ಲದವರಿಗೆ ಶಕ್ತಿಿ ತುಂಬಿದ ಧೀಮಂತ ಸಿದ್ದರಾಮಯ್ಯ

