ಸುದ್ದಿಮೂಲ ವಾರ್ತೆ
ಮೈಸೂರು, ಮೇ 18: ಇದನ್ನೇ ಪ್ರಜಾಪ್ರಭುತ್ವದ ಸೌಂದರ್ಯ ಅನ್ನೋದು… ಒಬ್ಬ ಸಾಮಾನ್ಯನೂ ಸಂವಿಧಾನದತ್ತವಾದ ರಾಜ್ಯಾಧಿಕಾರ ಪಡೆಯಲಿಕ್ಕೆ ಸಾಧ್ಯ ಆಗೋದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತ್ರ. ಇದಕ್ಕೆ ಸಾಕ್ಷಿ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಸಿದ್ದರಾಮಯ್ಯನವರು 2ನೇ ಬಾರಿ ಮುಖ್ಯಮಂತ್ರಿ ಆಗಿರೋದು.
ಅವರು ರಾಜ್ಯ ರಾಜಕಾರಣದಲ್ಲಿ ಗುರುತಿಸಿಕೊಳ್ಳುವವರೆಗೂ ಮೈಸೂರು ಜಿಲ್ಲೆಯಲ್ಲಿ ಇರುವ ಸಿದ್ದರಾಮನಹುಂಡಿ ಅನಕ್ಷರಸ್ಥರಿಂದ ತುಂಬಿದ್ದ ಕುಗ್ರಾಮವೇ. ಈಗ ಆ ಹಳ್ಳಿಯ ಚಿತ್ರಣ ಬೇರೆ ಆಗಿದೆ ಎಂಬುದು ಬೇರೆ. 1948 ಆಗಸ್ಟ್ 12 ರಲ್ಲಿ ಸಿದ್ದರಾಮಯ್ಯನವರು ಜನಿಸಿದಾಗ ಗ್ರಾಮಕ್ಕೆ ಬಸ್, ವಿದ್ಯುತ್,ಆಸ್ಪತ್ರೆ ಮತ್ತಿತರ ಯಾವುದೇ ಇರಲಿಲ್ಲ. ಇಂತಹ ಗ್ರಾಮದಲ್ಲಿ ಹುಟ್ಟಿದ ಮಗು ಮುಂದೆ 13 ಬಾರಿ ಬಜೆಟ್ ಮಂಡಿಸುವ ಮತ್ತು ಎರಡು ಬಾರಿ ಸಿಎಂ ಪಟ್ಟಾಭಿಷೇಕ ಮಾಡಿಸಿಕೊಳ್ಳುತ್ತದೆ ಎಂದು ಯಾರು ತಾನೇ ಊಹಿಸಲು ಸಾಧ್ಯವಾದೀತು.
ದಿನಗಳು ಉರುಳಿದಂತೆ ಆ ಊಹೆಯನ್ನು ನಿಜ ಮಾಡಿ ಎಲ್ಲರನ್ನು ಚಕಿತಗೊಳಿಸಿದ್ದು ಸಾಮಾನ್ಯ ಸಂಗತಿಯೇನು ಅಲ್ಲ. ಗ್ರಾಮೀಣ ಬದುಕಿನ ಕಷ್ಟಕರ್ಪಣ್ಯಗಳನ್ನು ನೇರ ಅನುಭವಿಸಿದ್ದು ಅವರ ರೈತ, ಬಡವರ ಬಗ್ಗೆ ಅತೀವ ಕಾಳಜಿಗೆ, ಅನ್ನಭಾಗ್ಯದಂತಹ ಯೋಜನೆ ತರಲು ಕಾರಣವಾಯಿತು. ಇಂತಹ ಹಳ್ಳಿಯಲ್ಲಿ ಹುಟ್ಟಿದ ಸಿದ್ದರಾಮಯ್ಯನವರು ರಾಜ್ಯ ರಾಜಕೀಯಾಗಸದಲ್ಲಿ ಮಿನುಗುತಾರೆ ಹೊರಹೊಮ್ಮಿದ್ದು ಮತ್ತು ರಾಜಕಾರಣದಲ್ಲಿ ಸಾಗಿದ ರೀತಿರಿವಾಜು ನಿಜಕ್ಕೂ ಅದ್ಭುತ ಸಾಧನೆಯೇ. ಅವರೆಂದಿಗೂ ರಾಜಕಾರಣವನ್ನು ಭಾರಿ ಗಂಭೀರವಾಗಿ ತೆಗೆದುಕೊಂಡಿದ್ದು ವಿರಳವೇ.
ಅವರ ನೇರ ನಡೆನಡೆ, ನುಡಿದಂತೆ ನಡೆಯುವ ಜನಪರ ಕಾಳಜಿಯಿಂದಲೇ ಎತ್ತರಕ್ಕೆ ಬೆಳೆದಿದ್ದು ಎಂದರೆ ಅತಿಶಯೋಕ್ತಿಯಾಗದು. ಪ್ರಾಥಮಿಕ ಶಾಲೆಗೆ ಹೋಗದೆ ಏಕದಂ ಮಾಧ್ಯಮಿಕ ಶಾಲೆಗೆ ಅಂದರೆ 5 ರಿಂದ 7ನೇ ತರಗತಿಯವರೆಗೆ ಹುಟ್ಟೂರಿನಲ್ಲಿ ಓದಿದ ಸಿದ್ದರಾಮಯ್ಯನವರು ಮೈಸೂರು ನಗರದ ವಿದ್ಯಾವರ್ಧಕ ಹೈಸ್ಕೂಲ್ ನಲ್ಲಿ ವ್ಯಾಸಂಗ ಮಾಡಿದ ವೇಳೆ ಅವರಿಗೆ ಅಲ್ಲಿಗೆ ಬರುತ್ತಿದ್ದ ಅಲ್ಪಸಂಖ್ಯಾತರು, ಹಿಂದುಳಿದ ಹುಡುಗರೆ ಹೆಚ್ಚು ಸಹಪಾಠಿಗಳು. ಈ ಸಂರ್ಭದಲ್ಲಿ ಅವರಿಗೆ ಅಲ್ಪಸಂಖ್ಯಾತರು, ಹಿಂದುಳಿದವರ ಸಾಮಾಜಿಕ ಸ್ಥಿತಿಗತಿಯನ್ನು ಅರ್ಥೈಸಿಕೊಂಡಿದ್ದು ಹೆಚ್ಚು. ಈ ಅನುಭವದ ಹಿನ್ನೆಲೆಯಂದಲೇ ಈಗಲೂ ಅವರ ಏಳಿಗೆ ಅನೇಕ ಯೋಜನೆಗಳನ್ನುಜಾರಿಗೊಳಿಸಿದ್ದು ಎಂಬುದನ್ನು ತಳ್ಳಿ ಹಾಕಲು ಸಾಧ್ಯವಿಲ್ಲ.
ಉತ್ತರ ಕರ್ನಾಟಕದ ಭಾಗದ ವಿರೇಂದ್ರ ಪಾಟೀಲರು, ಸಿದ್ದವನಗಳ್ಳಿ ನಿಜಲಿಂಗಪಪ್ನವರು 2 ಬಾರಿ ಸಿಎಂ ಆಗಿದ್ದರು. ಆದರೆ ಮೈಸೂರು ಭಾಗದಲ್ಲಿ ದಿವಂಗತ ಡಿ. ದೇವರಾಜ ಅರಸು ಅವರನ್ನು ಬಿಟ್ಟರೇ 2ನೇ ಬಾರಿಗೆ ಮುಖ್ಯಮಂತ್ರಿ ಆದವರು. ಸಿದ್ದರಾಮಯ್ಯನವರು. ಅರಸು ಅವರು 1972 ರಿಂದ 1977 ರವರೆಗೆ ಮೊದಲ ಬಾರಿಗೆ ಮತ್ತು 1978 ರಿಂದ 1980 ರವರೆಗೆ 2 ನೇ ಬಾರಿಗೆ ಮುಖ್ಯಮಂತ್ರಿ ಆಗಿದ್ದರು. ಆ ರಾಜಕೀಯ ಇತಿಹಾಸ ಸಿದ್ದರಾಮಯ್ಯನವರು 2ನೇ ಬಾರಿಗೆ ಮುಖ್ಯಮಂತ್ರಿ ಆಗುವ ಮೂಲಕ ಮರುಕಳಿಸಿದೆ. 2013 ರಿಂದ 2018ರ ತನಕ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ಸಿದ್ದರಾಮಯ್ಯ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರು. ಮೈತ್ರಿ ರ್ಕಾರ ಪತನಗೊಂಡ ಬಳಿಕ 2019ರಲ್ಲಿ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದರು. ವಿರೋಧ ಪಕ್ಷದ ನಾಯಕರಾಗಿ ಸದನದಲ್ಲಿ ರ್ಕಾರವನ್ನು ಅಂಕಿಅಂಶಗಳು, ದಾಖಲೆಗಳ ಸಮೇತ ಆಡಳಿರರೂಢ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳುವುದಲ್ಲಿ ಸಿದ್ದರಾಮಯ್ಯ ನಿಸ್ಸೀಮರು.
ಮೂಲತಃ ವೃತ್ತಿಯಿಂದ ವಕೀಲರಾದ ಅವರು ಸಮಾಜವಾದಿ ಯುವಜನ ಸಭಾ ಮೂಲಕ ರಾಜಕೀಯಕ್ಕೆ ಬಂದರು. ಲೋಹಿಯಾ ಸಿದ್ದಾಂತ, ರೈತ ನಾಯಕ ಪ್ರೊ. ಎಂ.ಡಿ ನಂಜುಂಡಸ್ವಾಮಿ ಅವರೊಂದಿಗೆ ರೈತ ಚಳುವಳಿಯಲ್ಲಿ ಭಾಗಿ. ನಂತರ 1978 ರವರೆಗೂ ಮೈಸೂರಿನ ಹಿರಿಯ ವಕೀಲ ಪಿ.ಎಂ.ಚಿಕ್ಕಬೋರಯ್ಯನವರ ಬಳಿ ಕಿರಿಯ ವಕೀಲರಾಗಿದ ಕರ್ನಾಟಕ ವಿಧಾನಸಭೆಯ ಹಲವಾರು ಸ್ಥಾನಗಳಲ್ಲಿ ಸೇವೆ ಸಲ್ಲಿಸಿರುವ ಸಿದ್ದರಾಮಯ್ಯ ಈಗ ಕಾಂಗ್ರೆಸ್ನ ಪ್ರಮುಖ ನಾಯಕರು.. ಕಾಂಗ್ರೆಸ್ ಸೇರುವ ಮುನ್ನ ಜೆಡಿಎಸ್ನಲ್ಲಿ ಇದ್ದಾಗ ಎರಡು ವರ್ಷ ಉಪಮುಖ್ಯಮಂತ್ರಿಯಾಗಿದ್ದರು. ಜೆಡಿಎಸ್ ಮುಖಂಡ ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡರ ವಿರುದ್ಧ ಬಂಡಾಯ ಸಾರಿದ ನಂತರ 2005-06 ರಲ್ಲಿ ಪಕ್ಷದಿಂದ ಉಚ್ಛಾಟಿಸಲ್ಪಟ್ಟರು. ಬಳಿಕ 2005-2006 ರಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಅವರು, ಮೈತ್ರಿ ಸರ್ಕಾರ ಪತನಗೊಂಡ ಬಳಿಕ 2019ರಲ್ಲಿ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದರು 2010ರಲ್ಲಿ ಗಣಿಧಣಿ ಜನಾರ್ಧನ ರೆಡ್ಡಿ ಸಹೋದರರ ವಿರುದ್ದ ವಿಧಾನಸೌದ ಒಳಗೆ ತೊಡೆ ತಟ್ಟಿ ಅವರ ವಿರುದ್ದ ಬೆಂಗಳೂರಿನಿಂದ ಬಳ್ಳಾರಿಯವರಗೆ 320 ಕಿಮಿ ಪಾದಯಾತ್ರೆ ನಡೆಸಿದ್ದು ಅವರ ರಾಜಕೀಯ ಶಕ್ತಿಯ ಪ್ರತೀಕವೇ
1980ರಲ್ಲಿ ಚರಣ್ಸಿಂಗ್ ನೇತೃತ್ವದ ಲೋಕದಳದಿಂದ ಮೈಸೂರಿನಲ್ಲಿ ನಿಂತು ಸೋತರು, ನಂತರ ಶ್ರೀ
ಚಾಮುಂಡೇಶ್ವರಿ ಕೇತ್ರದಲ್ಲಿ ಅದೇ ಲೋಕದಳದಿಂದ ಗೆದ್ದ ನಂತರ ರಾಜ್ಯ ರಾಜಕಾರಣದಲ್ಲಿ ಹಿಂತಿರುಗಿ ನೋಡಿದ್ದೇ ಇಲ್ಲ. ಮುಖ್ಯಮಂತ್ರಿ ಪಟ್ಟಕ್ಕೆ ಏರಿ ತಮ್ಮದೇ ಛಾಪು ಮೂಡಿಸಿಕೊಂಡ ಸಿದ್ದರಾಮಯ್ಯನವರು ಈಗ ಮಾಸ್ ಲೀಡರ್. ಹಳ್ಳಿಯಲ್ಲಿ ಹುಟ್ಟಿ ವಿಧಾನಸೌಧದಲ್ಲಿ ಮಂತ್ರಿ, ಉಪಮುಖ್ಯಮಂತ್ರಿ, ವಿರೋಧಪಕ್ಷದ ನಾಯಕ, 2 ಬಾರಿ ಮುಖ್ಯಮಂತ್ರಿಯಾಗಿ ಜನರ ಪ್ರೀತಿ, ವಿಶ್ವಾಸ, ಗೌರವವನ್ನು ತಮ್ಮ ಕೆಲಸದಿಂದಲೇ ಗಳಿಸಿದ್ದಾರೆ. ರಾಜಕೀಯಾಗಸದಲ್ಲಿ ಮಿನುಗು ತಾರೆ ಆಗಿದ್ದಾರೆ. ಇದಕ್ಕಿಂತ ಇನ್ನೇನು ಬೇಕು ಅಲ್ಲವಾ ?.