ಸುದ್ದಿಮೂಲ ವಾರ್ತೆ
ಬಳ್ಳಾರಿ,ಮೇ17: ರಾಜ್ಯದ 2023ರ ವಿಧಾನಸಭಾ ಚುನಾಣೆಯಲ್ಲಿ ಚಾಮರಾಜನಗರದಿಂದ ಉಪ್ಪಾರ ಸಮಾಜದಿಂದ ಏಕೈಕ ಶಾಸಕರಾಗಿ ನಾಲ್ಕನೇ ಬಾರಿಗೆ ಸಿ ಪುಟ್ಟರಂಗಶೆಟ್ಟಿ ಆಯ್ಕೆಯಾಗಿದ್ದಾರೆ. ಇವರು ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ಕೆಲದಿನಗಳಷ್ಟೆ ಮಂತ್ರಿಯಾಗಿ ವಿರೋಧಿಗಳ ಷಡ್ಯಂತ್ರದ ಪದಚ್ಯುತಿಗೊಂಡಿದ್ದರು. ಕಾರಣ ಈ ಭಾರಿ ಬಿಜೆಪಿ ಪ್ರಭಾವಿ ಸಚಿವ ವಿ ಸೋಮಣ್ಣನವರನ್ನು ಸೋಲಿಸಿ ಭಾರಿ ಅಂತರದಿಂದ ಆಯ್ಕೆಯಾಗಿದ್ದಾರೆ. ಅತ್ಯಂತ ಹಿಂದುಳಿದ ಸಮಾಜವಾದ ಉಪ್ಪಾರ ಸಮಾಜಕ್ಕೆ ಸೇರಿರುವ ಪುಟ್ಟರಂಗ ಶೆಟ್ಟಿಯವರಿಗೆ ಈ ಭಾರಿಯ ಸಚಿವ ಸಂಪುಟದಲ್ಲಿ ಸಾಮಾಜಿಕ ನ್ಯಾಯಾದಡಿಯಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನವನ್ನು ನೀಡಬೇಕೆಂದು ಸಮಸ್ತ ಕರ್ನಾಟಕ ಉಪ್ಪಾರ ಜನಾಂಗದ ಪರವಾಗಿ ಕೆ.ಪಿ.ಸಿ.ಸಿ ಅಧ್ಯಕ್ಷರಿಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಮತ್ತು ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ಉಪ್ಪಾರು ಜನಾಂಗದವರು ಕಾಂಗ್ರೇಸ್ ಪಕ್ಷಕ್ಕೆ ಬೆಂಬಲವನ್ನು ಸೂಚಿಸಿರುತ್ತಾರೆ. ಕಾರಣ ಶೆಟ್ಟಿಯುವರಿಗೆ ತಮ್ಮ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾ (ರಿ) ರಾಜ್ಯ ಉಪಾಧ್ಯಕ್ಷರು ಸಿದ್ದೇಶ್ ಊಳೂರು ಮತ್ತು ಬಳ್ಳಾರಿ ಜಿಲ್ಲಾ ಉಪ್ಪಾರ ಸಮಾಜದ ಮುಂಖಡರುಗಳಾದ ಕೂರಿಗನೂರು ಗಾದಿಲಿಂಗಪ್ಪ, ಊಳೂರು ವೆಂಕೋಬ, ಹಾಗೂ ಇತರರು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರನವರಲ್ಲಿ ಒತ್ತಾಯಸಿದ್ದಾರೆ.