ಸುದ್ದಿಮೂಲ ವಾರ್ತೆ ಭಾಲ್ಕಿ, ಜ.14:
ಶಿವಯೋಗಿ ಸಿದ್ಧರಾಮೇಶ್ವರರು ಬಸವಾದಿ ಶರಣರಲ್ಲಿ ಪ್ರಮುಖ ಶರಣರಾಗಿದ್ದರು. ಸಿದ್ಧರಾಮೇಶ್ವರರು ಬಸವಣ್ಣನವರನ್ನು ಪರಮ ಗುರುವಾಗಿ ಕಂಡರು, ಬಸವಣ್ಣನವರ ಮಾರ್ಗದರ್ಶನದಿಂದ ಸಿದ್ಧರಾಮೇಶ್ವರರು ಶಿವಯೋಗಿಯಾದರು ಎಂದು ಇಳಕಲ್ನ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ ಹೇಳಿದರು.
ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದಲ್ಲಿ ಬುಧವಾರ ಆಯೋಜಿಸಿದ್ದ ಸಿದ್ಧರಾಮೇಶ್ವರ ಜಯಂತಿ ಮತ್ತು ವಿಶ್ವಗುರು ಬಸವಣ್ಣನವರ ಮೂರ್ತಿ ಅನಾವರಣ ಕಾರ್ಯಕ್ರಮದ ದಿವ್ಯಸಾನ್ನಿಿಧ್ಯ ವಹಿಸಿ ಅವರು ಮಾತನಾಡಿದರು.
ಸಿದ್ಧರಾಮೇಶ್ವರರು ಲಿಂಗಭೇದ ನಿವಾರಿಸಿ ಸಮಾನತೆಯ ಸಂದೇಶ ನೀಡಿದರು, ಕೆರೆ, ಬಾವಿ, ದೇವಾಲಯಗಳ ನಿರ್ಮಾಣ ಮಾಡಿ ಜನಕಲ್ಯಾಾಣ ಕಾರ್ಯಗಳಲ್ಲಿ ತೊಡಗಿಸಿಕೊಂಡರು ಮತ್ತು ಸೊಲ್ಲಾಪುರ ಭೂಕೈಲಾಸವನ್ನಾಾಗಿ ಪರಿವರ್ತಿಸಿದರು. ಅಂತಹ ಶರಣರ ಆದರ್ಶಗಳು ವಿದ್ಯಾಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಾನಿಧ್ಯ ವಹಿಸಿದ್ದ ಬಸವಕಲ್ಯಾಾಣ ಅನುಭವ ಮಂಟಪದ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಸಿದ್ದರಾಮೇಶ್ವರರು ಕೇವಲ ದಾರ್ಶನಿಕರಾಗಿರದೆ, ತಮ್ಮ ಕಾಯಕ ಮತ್ತು ಚಿಂತನೆಗಳ ಮೂಲಕ ಸಮಾಜದ ಓರೆಕೋರೆಗಳನ್ನು ಸರಿಪಡಿಸಲು ಶ್ರಮಿಸಿದರು ಎಂದು ತಿಳಿಸಿದರು.
ಮದನೂರಿನ ಯುವ ಮುಖಂಡ ಗುಂಡಪ್ಪ ಬೆಲ್ಲೆ ಅವರು ಬಸವಣ್ಣನವರ ಮೂರ್ತಿಗೆ ಪೂಜೆ ನೆರವೇರಿಸಿದರು.
ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಅನುಭವ ಮಂಟಪದ ಸಂಚಾಲಕ ಶಿವಾನಂದ ಸ್ವಾಾಮೀಜಿ, ಹಿರೇಮಠ ಸಂಸ್ಥಾಾನದ ಕಾರ್ಯದರ್ಶಿ ಮಹಾಲಿಂಗ ಸ್ವಾಾಮೀಜಿ ಸಮ್ಮುಖ ವಹಿಸಿದ್ದರು.
ಈ ಸಂದರ್ಭದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ, ಸಂಸ್ಥೆೆಯ ಆಡಳಿತಾಧಿಕಾರಿ ಮೋಹನ ರೆಡ್ಡಿಿ, ಪ್ರಾಾಚಾರ್ಯ ಬಸವರಾಜ ಮೊಳಕೀರೆ, ಉಪಪ್ರಾಾಚಾರ್ಯ ಸಿದ್ರಾಾಮ ಗೊಗ್ಗಾಾ ಸೇರಿದಂತೆ ಶಿಕ್ಷಕರು, ವಿದ್ಯಾಾರ್ಥಿಗಳು ಹಾಜರಿದ್ದರು.
ಮಕ್ಕಳಿಗೆ ಸಂಕ್ರಾಾಂತಿ ವಿಶ್ :
ಸಂಕ್ರಾಾಂತಿ ಹಬ್ಬದ ನಿಮಿತ್ತ ಮಕ್ಕಳಿಗೆ ಇಳಕಲ್, ಭಾಲ್ಕಿ ಶ್ರೀಗಳು ಮಕ್ಕಳಿಗೆ ಸಂಕ್ರಾಾಂತಿ ಹಬ್ಬದ ಶುಭ ಕೋರಿದರು. ಚನ್ನಬಸವೇಶ್ವರ ಗುರುಕುಲದಲ್ಲಿ ವ್ಯಾಾಸಂಗ ಮಾಡುತ್ತಿರುವ ಸಾವಿರಾರು ಮಕ್ಕಳಿಗೆ ಉಭಯ ಪೂಜ್ಯರು ಎಳ್ಳು, ಬೆಲ್ಲ ವಿತರಿಸಿ ಆಶೀರ್ವದಿಸಿದರು.
ಬಸವೇಶ್ವರ ಪುತ್ಥಳಿ ಅನಾವರಣ : ಕಾಯಕಕ್ಕೆೆ ಮಹತ್ವ ನೀಡಿದ ಸಿದ್ಧರಾಮೇಶ್ವರರು

