ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರೇಷ್ಮೆ ಪಂಚೆ ಮತ್ತು ಶರ್ಟ್ನಲ್ಲಿ ಕಂಗೊಳಿಸಿದರು.
ಸಿದ್ದರಾಮಯ್ಯ ಸಾಮಾನ್ಯವಾಗಿ ಕಾಟನ್ ಪಂಚೆ-ಶರ್ಟ್ ಧರಿಸುತ್ತಾರೆ. ಆದರೆ, ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಗೋಲ್ಡನ್ ಶೇಡ್ ಹೊಂದಿದ್ದ ರೇಷ್ಮೆ ಪಂಚೆ ಮತ್ತು ಜುಬ್ಬಾ ಧರಿಸಿ ಮಿಂಚಿದರು.
ಅದೇ ರೀತಿ ಡಿ.ಕೆ. ಶಿವಕುಮಾರ್ ಸಹ ಗೋಲ್ಡನ್ ಶೆಡ್ ಹಾಗೂ ಕೆಂಪು ಪಟ್ಟಿ ಇದ್ದ ಪಂಚೆ ಮತ್ತು ಅರ್ಧ ತೋಲಿನ ಶರ್ಟ್ ಧರಿಸಿ ಮಿಂಚಿದರು.