ಸುದ್ದಿಮೂಲ ವಾರ್ತೆ ಕೊಪ್ಪಳ, ಜ.07:
ರಾಜ್ಯದಲ್ಲಿ ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರು ದೇವರಾಜ ಅರಸು ಅವರಿಗಿಂತ ಹೆಚ್ಚು ಕಾಲ ಆಡಳಿತ ನಡೆಸಿ ದಾಖಲೆ ಮಾಡಿರುವ ವಿಚಾರಕ್ಕಿಿಂತ ಸಿದ್ದರಾಮಯ್ಯ ಅವರು ಜನಪರ ಆಡಳಿತ ನೀಡಿರುವುದು ಮುಖ್ಯವಾಗಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿಿ ಅವರು ಹೇಳಿದರು.
ನಾನು ಸಿಎಂ ದಾಖಲೆಯ ಬಗ್ಗೆೆ ಮಾತನಾಡುವುದಿಲ್ಲ. ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರೂ ಸಹ ಇದೇ ಮಾತನ್ನು ಹೇಳಿದ್ದಾಾರೆ. ಯಾರು ಎಷ್ಟು ದಿನ ಅಧಿಕಾರದಲ್ಲಿರುತ್ತಾಾರೆ ಎಂಬುದು ಮುಖ್ಯವಲ್ಲ, ಅವರು ಇದ್ದಾಾಗ ಏನು ಮಾಡಿದ್ದಾಾರೆ ಎನ್ನುವುದೇ ಮುಖ್ಯವಾಗುತ್ತದೆ. ದೇವರಾಜ ಅರಸು ಅವರು ಅತ್ಯಂತ ಹೆಚ್ಚು ಕಾಲ ಆಡಳಿತ ನಡೆಸಿದವರು ಮಾತ್ರವಲ್ಲದೆ, ಜನಸಾಮಾನ್ಯರು, ಬಡವರು ಹಾಗೂ ಹಿಂದುಳಿದ ವರ್ಗಗಳಿಗಾಗಿ ಐತಿಹಾಸಿಕ ಕೆಲಸ ಮಾಡಿದ ನಾಯಕರು. ಅವರು ಒಬ್ಬ ಜನಪ್ರಿಿಯ ನಾಯಕ ಆಗಿದ್ದರು. ನಿಜಲಿಂಗಪ್ಪ ಹಾಗೂ ರಾಮಕೃಷ್ಣ ಹೆಗಡೆ ಅವರು ಸಹ ದೀರ್ಘಕಾಲ ಆಡಳಿತ ನಡೆಸಿ ಜನಪರ ಕೆಲಸ ಮಾಡಿದವರು ಎಂದು ಹೇಳಿದರು.
ತಮಗೂ ಹಾಗೂ ಸಿದ್ದರಾಮಯ್ಯ ಅವರಿಗೂ ಆಡಳಿತದಲ್ಲಿ ಸುಮಾರು ಒಂದೂವರೆ ವರ್ಷದ ವ್ಯತ್ಯಾಾಸವಿದೆ. ಆದರೆ ಅವರು ಅತ್ಯಂತ ಸರಳ ವ್ಯಕ್ತಿಿತ್ವದವರು. ಇದೇ ಕಾರಣಕ್ಕೆೆ ಅವರು ಮೊದಲಿನಿಂದಲೂ ನನಗೆ ಆಕರ್ಷಣೀಯ ವ್ಯಕ್ತಿಿಯಾಗಿದ್ದಾಾರೆ. ಆದ್ದರಿಂದಲೇ ನಾನು ಅವರ ಅಭಿಮಾನಿಯಾಗಿದ್ದೇನೆ ಎಂದು ರಾಯರೆಡ್ಡಿಿ ಹೇಳಿದರು.
ಜನಪರ ವ್ಯಕ್ತಿಿತ್ವ ಇರುವ ಕಾರಣಕ್ಕೆೆ ಸಿದ್ದರಾಮಯ್ಯ ಅವರು ಒಬ್ಬ ಶಕ್ತಿಿಶಾಲಿ ನಾಯಕನಾಗಿ ಹೊರಹೊಮ್ಮಿಿದ್ದಾಾರೆ. ಅವರ 75ನೇ ಜನ್ಮದಿನಾಚರಣೆ ನಾವು ಆಚರಿಸಿದ್ದು, ಕಾಂಗ್ರೆೆಸ್ ಪಕ್ಷಕ್ಕೆೆ ಹೆಚ್ಚಿಿನ ಜನಬೆಂಬಲ ಸಿಗಲಿ ಎಂಬ ಉದ್ದೇಶದಿಂದ ಎಂದು ಸ್ಪಷ್ಟಪಡಿಸಿದರು.
ಬಳ್ಳಾಾರಿ ಗಲಾಟೆ ಪ್ರಕರಣ ತಪ್ಪಿಿತಸ್ಥರ ಮೇಲೆ ಕ್ರಮ : ಬಳ್ಳಾಾರಿ ಗಲಾಟೆ ಪ್ರಕರಣದಲ್ಲಿ ಎರಡು ಕಡೆಯವರು ಶಾಂತಿಯಿಂದ ವರ್ತಿಸಬೇಕಿತ್ತು. ಬ್ಯಾಾನರ್ ನಗರಸಭೆ ಜಾಗದಲ್ಲಿ ಹಾಕಲಾಗಿತ್ತು, ಅದು ಜನಾರ್ಧನ ರೆಡ್ಡಿಿ ಅವರ ಜಾಗವಲ್ಲ. ಬ್ಯಾಾನರ್ ಹರಿದು ಹಾಕಿರುವುದು ಅವರ ಬೆಂಬಲಿಗರು. ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಬ್ಯಾಾನರ್ ಹರಿದಾಗ ಪೊಲೀಸ್ಗೆ ದೂರು ನೀಡಬಹುದಿತ್ತು ಎಂದು ಹೇಳಿದರು.
ಬಳ್ಳಾಾರಿಯಲ್ಲಿ ತಾಳ್ಮೆೆಯ ಕೊರತೆ, ದ್ವೇಷ ರಾಜಕೀಯದಿಂದ ಗಲಾಟೆ ನಡೆದಿದೆ. ಜನಾರ್ಧನ ರೆಡ್ಡಿಿ ಹಿರಿಯರು, ರಾಮುಲು ಹಿರಿಯರು. ಅವರು ತಾಳ್ಮೆೆಯಿಂದ ಯುವಕರಿಗೆ ಬುದ್ಧಿಿ ಹೇಳಬೇಕಿತ್ತು. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ತಪ್ಪಿಿಸಿಕೊಂಡು ಹೋಗಲು ಸಾಧ್ಯವಿಲ್ಲ ಎಂದು ಬಸವರಾಜ್ ರಾಯರೆಡ್ಡಿಿ ಎಚ್ಚರಿಸಿದರು.
ದಾಖಲೆಗಿಂತ ಸಿದ್ದು ಜನಪರ ಆಡಳಿತ ಮುಖ್ಯ : ರಾಯರೆಡ್ಡಿ

