ಸುದ್ದಿಮೂಲವಾರ್ತೆ
ಕೊಪ್ಪಳ ಮೇ 20: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಪ್ಪಳ ಜಿಲ್ಲೆ ಸೇರಿ ಉತ್ತರ ಕರ್ನಾಟಕದ ಯಾವುದೇ ಜಿಲ್ಲೆಗೆ ಬಂದರೂ ಅಲ್ಲಿ ಅವರ ವಾಹನ ಚಾಲನೆ ಮಾಡೋದು ಕೊಪ್ಪಳದ ವೆಂಕಟೇಶ. ಮೂಲತಃ ಶಾಸಕ ಕೆ ರಾಘವೇಂದ್ರ ಹಿಟ್ನಾಳರ ಚಾಲಕನಾಗಿರುವ ವೆಂಕಟೇಶ ಸಿದ್ದರಾಮಯ್ಯ ವಿಪಕ್ಷ ನಾಯಕನಾಗಿರುವಾಗ ಅವರ ಖಾಸಗಿ ವಾಹನಕ್ಕೆ ಚಾಲನೆ ಮಾಡೋದು ಇದೇ ವೆಂಕಟೇಶ.
ಇಂದು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಹಿನ್ನಲೆ ಅವರ ಅಭಿಮಾನಿ ಚಾಲಕನಿಗೆ ಖುಷಿ. ಕೊಪ್ಪಳದಲ್ಲಿ ಸಿದ್ದರಾಮಯ್ಯ ಅವರ ಅಚ್ಚು ಮೆಚ್ಚಿನ ಡ್ರೈವರ್ ಎಂದರೆ ಅದು ವೆಂಕಟೇಶ್ ಎನ್ನುವಂತಾಗಿದೆ. ವೆಂಕಟೇಶ ಕೊಪ್ಪಳ ತಾಲೂಕಿನ ಗುಳದಳ್ಳಿ ಗ್ರಾಮಸ್ಥನಾಗಿರುವ ವೆಂಕಟೇಶ ವೆಂಕಟಗಿರಿ.ಕಳೆದ 5 ವರ್ಷಗಳಿಂದ ಸಿದ್ದರಾಮಯ್ಯ ನೆಚ್ಚಿನ ಚಾಲಕನಾಗಿದ್ದಾರೆ.
ಸಿದ್ದರಾಮಯ್ಯ ಉತ್ತರ ಕರ್ನಾಟಕದ ಯಾವುದೇ ಜಿಲ್ಲೆಗೆ ಬಂದರೂ ವೆಂಕಟೇಶ್ ನೇ ಡ್ರೈವರ್ ಫಿಕ್ಸ್ ಎನ್ನುವುದು ವಾಡಿಕೆ.ಬೆಂಜ್ ಕಾರು ಚಲಾಯಿಸುವ ಆತ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಕಾರು ಚಾಲಕನಾಗಿ ಕೆಲಸಕ್ಕೆ ಸೇರಿದ್ದಾನೆ. ಐದು ವರ್ಷದ ಹಿಂದೆ ಸಿದ್ದರಾಮಯ್ಯ ರಾಘವೇಂದ್ರ ಹಿಟ್ನಾಳ್ ಅವರ ಕಾರು ಚಲಾಯಿಸಿದ್ದನ್ನು ನೋಡಿ ವೆಂಕಟೇಶ್ ಡ್ರೈವಿಂಗ್ ಇಷ್ಟಪಟ್ಟಿದ್ದಾರೆ.ಈ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಉತ್ತರ ಕರ್ನಾಟಕದ ಪ್ರವಾಸದ ಖಾಯಂ ಚಾಲಕನಾಗಿರುವ ವೆಂಕಟೇಶ್ ಇರಲೇಬೇಕು ಎನ್ನುವಂತೆ ಇದೆ. ವೆಂಕಟೇಶ ಡ್ರೈವಿಂಗ್ ಅಂದರೆ ಸಿದ್ದರಾಮಯ್ಯ ಗೆ ಅಚ್ಚುಮೆಚ್ಚು
ಈ ಹಿನ್ನಲೆಯಲ್ಲಿ 5 ವರ್ಷಗಳಿಂದ ಸಿದ್ದರಾಮಯ್ಯ ಉ.ಕ ಪ್ರವಾಸದ ಖಾಯಂ ಚಾಲಕನಾಗಿರುವ ವೆಂಕಟೇಶ್.ಸಿದ್ದರಾಮಯ್ಯ ಅವರ ಉತ್ತರ ಕರ್ನಾಟಕದ ಪ್ರವಾಸದ ವೇಳೆ ವೆಂಕಟೇಶ್ ಡ್ರೈವಿಂಗ್ ಇರಲೇಬೇಕು. ಈಗ ಸಿದ್ದರಾಮಯ್ಯ ಸಿಎಂ ಆಗುತ್ತಿರುವುದಕ್ಕೆ ಸಂತಸ ವ್ಯಕ್ಯಪಡಿಸುತ್ತಿದ್ದಾರೆ ವೆಂಕಟೇಶ.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕೆ ರಾಘವೇಂದ್ರ ಹಿಟ್ನಾಳ ಸಹ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕ ಭಾಗಕ್ಕೆ ಸಿದ್ದರಾಮಯ್ಯ ಬಂದರೆ ಅಲ್ಲಿ ಕೆ ರಾಘವೇಂದ್ರ ಇರುತ್ತಿದ್ದರು. ಆಪ್ತರಾಗಿರುವ ರಾಘವೇಂದ್ರರ ವಾಹನ ಚಾಲಕನ ವಾಹನ ಚಾಲನೆಯ ಕಸರತ್ತು ನೋಡಿದ ಸಿದ್ದರಾಮಯ್ಯ ಆಗಿನಿಂದಲೇ ವೆಂಕಟೇಶನ ವಾಹನ ಚಾಲನೆಯ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿದ್ದಾರೆ.
ಈ ಮಧ್ಯೆ ವಿಪಕ್ಷ ನಾಯಕರಾಗಿದ್ದಾಗ ಸಿದ್ದರಾಮಯ್ಯ ಸಾಮಾನ್ಯವಾಗಿ ಉತ್ತರ ಕರ್ನಾಟಕದ ಪ್ರವಾಸವನ್ನು ವಿಮಾನ ಅಥವಾ ಹೆಲಿಕ್ಯಾಪ್ಟರ್ ಮೂಲಕ ಮಾಡುತ್ತಾರೆ. ಹುಬ್ಬಳ್ಳಿ, ಕಲಬುರಗಿ, ಜಿಂದಾಲ, ಎಂಎಸ್ ಪಿಎಲ್ ವಿಮಾನ ನಿಲ್ದಾಣ ಹಾಗು ವಿವಿಧ ಸ್ಥಳಗಳಲ್ಲಿ ಹೆಲಿಕ್ಯಾಪ್ಟರ್ ಮೂಲಕ ಬರುವ ಸಿದ್ದರಾಮಯ್ಯ ರನ್ನು ಆತ್ಮೀಯವಾಗಿ ಬರಮಾಡಿಕೊಂಡು ತನ್ನ ವಾಹನದಲ್ಲಿ ಸುರಕ್ಷಿತವಾಗಿ ಸಂಚರಿಸುವ ವೆಂಕಟೇಶ ಸಿದ್ದರಾಮಯ್ಯರ ಉತ್ತರ ಕರ್ನಾಟಕದ ಡ್ರೈವರ್ ಎನ್ನುವ ಮಾತು ಸಾಮಾನ್ಯವಾಗಿದೆ.
ಸಿದ್ದರಾಮಯ್ಯ ಎಲ್ಲಿಯೇ ಹೋಗಿ ಜನರ ಹಿಂಡು, ಸಾಕಷ್ಟು ವಾಹನಗಳ ದಂಡು. ಜನಸಂದಣಿ, ಗ್ರಾಮೀಣ ರಸ್ತೆಯಲ್ಲಿಯೂ ಸುರಕ್ಷಿತವಾಗಿ ವಾಹನ ಮಾಡುತ್ತಾರೆ. ಎಷ್ಟೆ ಗದ್ದಲ, ಗೊಜಲುಗಳು. ಕಷ್ಟದ ಹಾದಿ ಇದ್ದರೂ ವಾಹನದಲ್ಲಿರುವ ಸಿದ್ದರಾಮಯ್ಯ ರಿಗೆ ಏನು ತೊಂದರೆಯಾಗದಂತೆ ಕರೆದುಕೊಂಡು ಹೋಗುತ್ತಾರೆ.
ಸಾಮಾನ್ಯವಾಗಿ ವಾಹನ ಚಾಲಕ ಚೆನ್ನಾಗಿದ್ದರೆ ವಾಹನದೊಳಗೆ ಕುಳಿತವರು ನಿರಮ್ಮಳಾಗಿ ಸಂಚರಿಸಬಹುದು. ಚಾಲಕ ಅವಸರ, ಬವಸರವಾಗಿದ್ದರೆ ವಾಹನವನ್ನು ಏನು ಮಾಡುತ್ತಾನೊ ಎಂಬ ಭಯವಿರುತ್ತೆ. ಆದರೆ ವೆಂಕಟೇಶ ಶಿಸ್ತಿನಿಂದ ಚಕಾಚಕತೆಯಿಂದ ವಾಹನ ಚಾಲನೆ ಮಾಡುತ್ತಿದ್ದು. ಇದೇ ಕಾರಣಕ್ಕಾಗಿ ಸಿದ್ದರಾಮಯ್ಯ ರಿಗೆ ವೆಂಕಟೇಶ ನೆಚ್ಚಿನ ಚಾಲಕನಾಗಿದ್ದಾರೆ.