ಸುದ್ದಿಮೂಲ ವಾರ್ತೆ
ತಿಪಟೂರು, ಜು 12 : ಜೈನ ಮುನಿಗಳ ಹತ್ಯೆ ಖಂಡಿಸಿ ಸಕಲ ಜೈನ ಸಂಘ ತಾಲೂಕು ಘಟಕದ ವತಿಯಿಂದ ನಗರದ ಶ್ರೀರಾಮ ಮಂದಿರದಿಂದ ಉಪವಿಭಾಗಾಧಿಕಾರಿಗಳವರ ಕಚೇರಿಯವರೆಗೂ ಮೌನ ಪ್ರತಿಭಟನಾ
ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಬಳಿಕ ತಹಸೀಲ್ದಾರ್ ಪವನ್ಕುಮಾರ್ರವರಿಗೆ ಮನವಿ ಪತ್ರ ಸಲ್ಲಿಸಿದರು.
ಜೈನ ಸಂಘದ ಟ್ರಸ್ಟಿ ಲಲಿತ್ ಶಾಹ ಮಾತನಾಡಿ, ನಮ್ಮ ಜೈನ ಮುನಿಗಳನ್ನು ತೀವ್ರ ಹಿಂಸಾತ್ಮಕ ರೀತಿಯಲ್ಲಿ ಕೊಲೆ ಮಾಡಿರುವುದು ಅತ್ಯಂತ ಖಂಡನೀಯ. ಇಂತಹ ಅಹಿತಕರ ಘಟನೆಗಳು ನಾಗರೀಕ ಸಮಾಜದ ಮೇಲೆ ಅತ್ಯಂತ ಕೆಟ್ಟ ದುಷ್ಪರಿಣಾಮವನ್ನು ಬೀರುತ್ತದೆ. ಆರೋಪಿಗಳನ್ನ ಕೆಲವು ಪ್ರಭಾವಶಾಲಿ ವ್ಯಕ್ತಿಗಳು ಕಾಪಾಡುವ ಹುನ್ನಾರದಲ್ಲಿದ್ದಾರೆ. ಸರ್ಕಾರ ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ಜೈನ ಮುಖಂಡ ರಾಜೇಂದ್ರ ಪ್ರಸಾದ್ ಮಾತನಾಡಿ, ಆಧ್ಯಾತ್ಮ ಪ್ರವರ್ತಕರು, ಶಾಂತಿ
ಮತ್ತು ಅಹಿಂಸೆಯ ಪ್ರತಿಪಾದಕರು ಆಗಿರುವ ಜೈನ ಮುನಿಗಳಿಗೆ ಮುಂದೆ ಇಂತಹ ಅಹಿತಕರ ಘಟನೆಗಳಿಂದ ತೊಂದರೆಯಾಗದಂತೆ ಸೂಕ್ತ ಭದ್ರತೆಯನ್ನು ಸರ್ಕಾರ ನೀಡಬೇಕು. ಈ ನಿಟ್ಟಿನಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕು ಎಂದರು.
ಮೌನ ಪ್ರತಿಭಟನೆಯಲ್ಲಿ ಜೈನ ಮುಖಂಡರುಗಳಾದ ಭರತ್ ಜೈನ್, ಪ್ರಕಾಶ್ ಜೈನ್,ಮಹಾವೀರ್ ಜೈನ್, ಮುಖೇಶ್ ಜೈನ್, ರಾಹುಲ್ಜೈನ್, ಶಾಖಿಲ್ ಜೈನ್, ಸಹನ್ಜೈನ್, ಬಾಟಿಕ್ಜೈನ್ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಜೈನ ಮುಖಂಡರು,ಮಹಿಳೆಯರುಭಾಗವಹಿಸಿದ್ದರು.