ಸುದ್ದಿಮೂಲ ವಾರ್ತೆ ಲಿಂಗಸೂಗೂರು, ಅ.14:
ಜಿಲ್ಲೆೆಯ ಎಲ್ಲ ತಾಲೂಕುಗಳಲ್ಲಿ ಮೂಲಭೂತ ಸೌಕರ್ಯಗಳ ಅಗತ್ಯತೆ ಕುರಿತು ಜಿಲ್ಲಾಾಡಳಿತದಿಂದ ಮಾಹಿತಿ ಪಡೆದು ಸರ್ಕಾರಕ್ಕೆೆ ಈಗಾಗಲೇ ವರದಿ ಸಲ್ಲಿಸಿ ಸಮಸ್ಯೆೆ ಪರಿಹರಿಸುವ ಉದ್ದೇಶದಿಂದ ಜಿಲ್ಲೆೆಯಾದ್ಯಂತ ಭೇಟಿ ನೀಡುತ್ತಿಿರುವುದಾಗಿ ರಾಜ್ಯ ಹಣಕಾಸು ಇಲಾಖೆ ಕಾರ್ಯದರ್ಶಿ ಹಾಗೂ ಜಿಲ್ಲಾಾ ಉಸ್ತುವಾರಿ ಕಾರ್ಯದರ್ಶಿ ರಿತೇಶ ಕುಮಾರ ಸಿಂಗ್ ಹೇಳಿದರು.
ಸ್ಥಳೀಯ ತಾಪಂ ಕಚೇರಿ ಆವರಣದಲ್ಲಿ ಹಳೆಯ ಕಟ್ಟಡಗಳ ಪರಿಶೀಲನೆ ನಡೆಸಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಪ್ರತಿ ಜಿಲ್ಲೆೆಗೆ ಜಿಲ್ಲಾಾ ಉಸ್ತುವಾರಿ ಕಾರ್ಯದರ್ಶಿಗಳಿರುತ್ತಾಾರೆ ನಾನು ರಾಯಚೂರು ಜಿಲ್ಲಾಾ ಉಸ್ತುವಾರಿ ಕಾರ್ಯದರ್ಶಿಯಾಗಿ ಜಿಲ್ಲೆೆಯಲ್ಲಿ ಅತಿವೃಷ್ಟಿಿಯಿಂದ ರೈತರ ಬೆಳೆಗಳು ಮತ್ತು ರಸ್ತೆೆಗಳು ಹಾನಿಗೀಡಾದ ಕುರಿತು ವರದಿ ಪಡೆದಿರುವೆ. ಜಿಲ್ಲೆೆಯಲ್ಲಿ ಕಲ್ಯಾಾಣ ಕರ್ನಾಟಕ ಪ್ರದೇಶಾಭಿವೃದ್ಧಿಿ ಮಂಡಳಿ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳ ಕಳಪೆ ಬಗ್ಗೆೆ ದೂರುಗಳಿವೆ. ಗುಣಮಟ್ಟ ಕಾಯ್ದುಕೊಳ್ಳುವಂತೆ ಕೆಆರ್ಐಡಿಎಲ್, ಜಿಪಂ, ಪಿಡಬ್ಲ್ಯೂಡಿ ಸೇರಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿಿನ ಎಚ್ಚರಿಕೆ ನೀಡಲಾಗಿದೆ ಎಂದರು. ವಸತಿ ನಿಲಯಗಳಲ್ಲಿ ಸ್ಥಳೀಯವಾಗಿ ಅಡುಗೆ ಸಾಮಗ್ರಿಿಗಳ ಖರೀದಿಯಿಂದ ಗುಣಮಟ್ಟ ಇಲ್ಲವೆಂಬ ದೂರುಗಳ ಕುರಿತು ಸುದ್ದಿಗಾರರ ಪ್ರಶ್ನೆೆಗೆ ಉತ್ತರಿಸಿದ ಅವರು, ಜಿಲ್ಲಾಾಡಳಿತದ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಜಿಲ್ಲಾಾಡಳಿತ ಈಬಗ್ಗೆೆ ಕ್ರಮ ಕೈಗೊಳ್ಳಲಿದೆ ಎಂದರು.
ತಾಲೂಕಿನ ಕೃಷ್ಣಾಾ ನದಿ ತೀರದ ನಡುಗಡ್ಡೆೆ ಪ್ರದೇಶದ ಮ್ಯಾಾದರಗಡ್ಡಿಿ, ಕರಕಲಗಡ್ಡಿಿ ಮತ್ತು ವೆಂಕಮ್ಮನಗಡ್ಡಿಿಯ ರೈತಾಪಿ ಕುಟುಂಬಗಳ ಶಾಶ್ವತ ಸ್ಥಳಾಂತರ ಕುರಿತು ಈಗಾಗಲೇ ತಾಲೂಕು ಆಡಳಿತದಿಂದ ವರದಿ ತಯ್ಯಾಾರಿಸಲಾಗಿದೆ. ನಡುಗಡ್ಡೆೆಯಲ್ಲಿನ ರೈತರ 66ಎಕರೆ ಭೂಮಿ ಪಡೆದು ಬೇರೆಡೆ ಭೂಮಿ ಕೊಡಿಸಲು ಒಂದೆ ಭಾಗದಲ್ಲಿ ಅಷ್ಟೊೊಂದು ಸರ್ಕಾರಿ ಭೂಮಿ ಸಿಗುತ್ತಿಿಲ್ಲ. ಸರ್ಕಾರದ ಮಟ್ಟದಲ್ಲಿ ಸಮಸ್ಯೆೆಗೆ ಪರಿಹಾರ ಕಂಡುಕೊಳ್ಳಲಾಗುವುದು. ಅತಿವೃಷ್ಟಿಿಯಿಂದ ಹಾಳಾದ ರಸ್ತೆೆಗಳ ದುರಸ್ತಿಿಗೆ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಾಧಿಕಾರಿ ಕೆ.ನಿತೀಶ್ ಹೇಳಿದರು. ಸಿಇಒ ಈಶ್ವರ ಕಾಂದು, ತಾಪಂ ಇಒ ಉಮೇಶ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳು ಇದ್ದರು.
ಜಿಲ್ಲಾಾ ಉಸ್ತುವಾರಿ ಕಾರ್ಯದರ್ಶಿ ರಿತೇಶ ಕುಮಾರಸಿಂಗ್ ತಾಲೂಕಿನ ಹಟ್ಟಿಿ ಚಿನ್ನದಗಣಿ ಹಾಗೂ ವ್ಯಾಾಪ್ತಿಿ ಪ್ರದೇಶ ಲಿಂಗಸಗೂರಿನ ಹಲವು ಭಾಗದಲ್ಲಿ ಸಂಚರಿಸಿ ಈಚನಾಳ ರೋಡಲಬಂಡಾ ಗ್ರಾಾ.ಪಂ,ಗಳತ್ತ ತೆರಳಿದರು. ತಾ.ಪಂ, ಇಓ ನಾನಾ ಇಲಾಖೆ ಅಧಿಕಾರಿಗಳಿದ್ದರು.
ೆಟೋ: 14ಎಲ್ಎನ್ಜಿ02 ಅಲ್ಪಸಂಖ್ಯಾಾತ ಮೊರಾರ್ಜಿ ವಸತಿಶಾಲೆ ಗೃಹಗಳ ನಿರ್ಮಾಣಕ್ಕೆೆ ಮಾನಪ್ಪ ವಜ್ಜಲ್ ಭೂಮಿಪೂಜೆ ನಡೆಸಿದರು.