ಸುದ್ದಿಮೂಲ ವಾರ್ತೆ
ಸಿರುಗುಪ್ಪ: ಏ-08: ತಾಲೂಕಿನ ಸಿರಿಗೇರಿ ಗ್ರಾಮ ಸರ್ಕಾರಿ ಬಾಲಕರ ನಿಲಯದ ಹಿಂಭಾಗ ಸಿದ್ದಾರ್ಥ ನಗರ ನಿವಾಸಿ ಹೆಚ್.ಕೃಷ್ಣಪ್ಪ ತಾಯಿ ಚಂದ್ರಮ್ಮ ಇವರಿಗೆ ಸೇರಿದ ಮನೆ ಶನಿವಾರ ಬೆಳ್ಳಂ ಬೆಳಿಗ್ಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು ಕೆಲ ಕ್ಷಣಗಳಲ್ಲಿಯೇ ಸಂಪೂರ್ಣ ಗುಡಿಸಲು ಭಸ್ಮವಾಗಿದೆ.
ಬೆಂಕಿ ಆವರಿಸುತ್ತಿದ್ದಂತೆ ಮನೆಯಲ್ಲಿರುವವರು ಎದ್ದು ಹೊರಗಡೆ ಓಡಿ ಬಂದು ಪ್ರಾಣ ಉಳಿಸಿ ಕೊಂಡಿದ್ದಾರೆ. ಸುತ್ತಲಿನವರು ಧಾವಿಸಿ ಬೆಂಕಿ ನಂದಿಸುವಲ್ಲಿ ಪ್ರಯತ್ನಿಸಿದರು. ಕೆಲ ಸಮಯಕ್ಕೆ ಕುರುಗೋಡಿನ ಅಗ್ನಿ ಶಾಮಕದಳ ಮತ್ತು ಸ್ಥಳೀಯ ಪೋಲೀಸ್ ಸಿಬ್ಬಂದಿ ಆಗಮಿಸಿ ಪರಿಶೀಲನೆ ಮಾಡಿದ್ದಾರೆ. ಮನೆಯಲ್ಲಿದ್ದ ಬಂಗಾರ, ಆಹಾರ ಧಾನ್ಯ ಬಟ್ಟೆ, ನಗದು ಹಣ, ಟಿ.ವಿ, ದಾಖಲಾತಿಗಳು, ಪಾತ್ರೆ ಸಾಮಾನು ಸೇರಿದಂತೆ ಒಟ್ಟು 3 ಲಕ್ಷದ 38 ಸಾವಿರದ ಬೆಲೆಬಾಳುವ ವಸ್ತುಗಳು ಬೆಂಕಿಗಾಹುತಿ ಆಗಿರುವ ಬಗ್ಗೆ ವಿವರ ನೀಡಿದ್ದಾರೆ. ಬೆಂಕಿಗೆ ಪ್ರಮುಖ ಕಾರಣ ತಿಳಿದು ಬರಬೇಕಿದೆ
ಪ್ರಕರಣವು ಸಿರಿಗೇರಿ ಠಾಣೆಯಲ್ಲಿ ದಾಖಲಾಗಿದೆ.ಸ್ಥಳಕ್ಕೆ ಪ್ರಮುಖರಾದ ಎಂ.ಎಸ್ .ಸಿದ್ದಪ್ಪ, ಕೆಆರ್ಪಿಪಿಯ ಧರಪ್ಪ ನಾಯಕ, ತಹಿಶಿಲ್ದಾರ್ ಎನ್,ಆರ್. ಮಂಜುನಾಥ ಸ್ವಾಮಿ, ಪಿಡಿಒ ಶಿವಕುಮಾರ್ ಕೋರಿ, ವಿ.ಎ.ನಾಗರಾಜ ಸ್ಥಳೀಯ ಗ್ರಾಮಸ್ಥರು ಕುಟುಂಬಕ್ಕೆ ಸಾಂತ್ವಾನ ಹೇಳಿ ನೈತಿಕ ದೈರ್ಯ ತುಂಬಿದ್ದಾರೆ.