ಸುದ್ದಿಮೂಲ ವಾರ್ತೆ ಸಿರವಾರ, ಜ.12:
ಸತ್ಸಂಗದಲ್ಲಿ ಸಿಗುವ ಆಧ್ಯಾಾತ್ಮಿಿಕ ಜ್ಞಾನದಿಂದ, ಜೀವನದ ಅನುಭವ ತಿಳಿಯಲು ಸಾಧ್ಯ ಎಂದು ವೀರಶೈವ ಲಿಂಗಾಯತ ಸಮಾಜದ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ ಪಾಟೀಲ ಮಿರ್ಜಾಪುರ ಹೇಳಿದರು.
ಅವರು ರವಿವಾರ ಪಟ್ಟಣದ ಸಜ್ಜಲಶ್ರೀ ಶಾಖಾ ಮಠದಲ್ಲಿ 60ನೇ ತ್ರೈಮಾಸಿಕ ಶಿವಾನುಭವ ಗೋಷ್ಠಿಿಯಲ್ಲಿ ಮಾತನಾಡಿದರು.
ಗುರುವಿನಲ್ಲಿ ಭಕ್ತಿಿ ಇಡಬೇಕು, ನಮ್ಮ ಕಷ್ಟಗಳು ಕರಗಿ ಹೋಗುತ್ತದೆ, ಗುರುಸೇವೆ ಮಾಡಬೇಕು, ಸಜ್ಜಲಶ್ರೀ ಮಠದ ಲಿಂ.ಶರಣಮ್ಮ ತಾಯಿ ಅವರ ಜೀವನ ಚರಿತ್ರೆೆ ಅರಿತುಕೊಂಡು ತಿಳಿಯಬೇಕು ಎಂದರು.
ನಂತರ ವೇ.ದೊಡ್ಡ ಬಸವರಾಜ ಶಾಸೀಗಳಿಂದ ತಮ್ಮ ಅನುಭವದ ನುಡಿಯಲ್ಲಿ ನಮ್ಮ ಜೀವನದ ಸಾರ ಅರಿತವರು ಶರಣರಾಗುತ್ತಾಾರೆ, ಸರಳ ಜೀವನ ಶರಣರದು ಆಡಂಬರದ ಜೀವನ ಅಲ್ಲ ಸಮಾಜದ ಚಿಂತನೆ ಮಾಡುವವರು, ತ್ಯಾಾಗಮಯ ಜೀವನ ನಡೆಸಿದವರು ಶರಣರಾಗುತ್ತಾಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಂ.ಗುಡದೂರು ಬಸವಾರ್ಯ ತಾತನವರ ಸಂಗೀತ ಪಾಠ ಶಾಲೆಯ ವಿದ್ಯಾಾರ್ಥಿಗಳು ಸಂಗೀತ ನಡೆಸಿಕೊಟ್ಟರು. ಪರಮ ಪೂಜ್ಯ ಶ್ರೀ ದೊಡ್ಡ ಬಸವಾರ್ಯ ತಾತನವರು ದಿವ್ಯಸಾನಿಧ್ಯ ವಹಿಸಿದ್ದರು. ಇದರಲ್ಲಿ ಪ.ಪಂ.ಮಾಜಿ ಅಧ್ಯಕ್ಷ ವೈ.ಭೂಪನಗೌಡ, ಜಿ.ವೀರೇಶ, ಈಶಪ್ಪ ಹೂಗಾರ, ಸುರೇಶ ಗಲಗ, ಎಂ.ರುದ್ರಗೌಡ, ಚನ್ನಪ್ಪ ಚನ್ನೂರು, ಅಮರೇಶ ಸಾಹುಕಾರ್ ಚಾಗಭಾವಿ, ಸಿರವಾರ, ಆಲೂಡ್, ಗಣದಿನ್ನಿಿ, ಚಾಗಭಾವಿ ಸೇರಿದಂತೆ ವಿವಿಧ ಗ್ರಾಾಮದ ಮಹಿಳೆಯರು, ಮಕ್ಕಳು ಅನೇಕ ಭಕ್ತರು ಭಾಗವಹಿಸಿದ್ದರು.
ಸಿರವಾರ : 60ನೇ ಶಿವಾನುಭವ ಗೋಷ್ಠಿ ಸತ್ಸಂಗದಿಂದ ಜೀವನದ ಅನುಭವ – ಮಿರ್ಜಾಪುರ

