ಸುದ್ದಿಮೂಲ ವಾರ್ತೆ ಸಿರವಾರ, ಜ.19:
ತಾಲೂಕಿನ ಪರಿಶಿಷ್ಟ ಜಾತಿ ಪರಿಶಿಷ್ಟ ಬುಡಕಟ್ಟು, ಪಂಗಡ ಜನಾಂಗದ ಕಾಲೋನಿ ಅಭಿವೃದ್ಧಿಿ ಕಾರ್ಯ ಹಾಗೂ ವಿವಿಧ ಯೋಜನೆ ಸಂಪೂರ್ಣ ಮಾಹಿತಿ ಹಾಗೂ ಅಭಿವೃದ್ಧಿಿ ಕಾರ್ಯ ಪ್ರಗತಿ ಪರಿಶೀಲನೆಯ ಪ್ರಥಮ ಸಭೆ ತಾ.ಪಂ.ಇಓ ಶಶಿಧರಸ್ವಾಾಮಿ ಮಠದ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಜರುಗಿತು.
ತೋಟಗಾರಿಕೆ ಇಲಾಖೆಯ ಹಾಗೂ ಉದ್ಯೋೋಗ ಖಾತ್ರಿಿ ಯೋಜನೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆೆ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಾಣ ಇಲಾಖೆಯ ಬಗ್ಗೆೆ ಸಮಾಜ ಕಲ್ಯಾಾಣ ಇಲಾಖೆಯ ಮೀಸಲು ಅನುದಾನವನ್ನು ಮಾರ್ಚ್ ತಿಂಗಳಲ್ಲಿ ಸಂಪೂರ್ಣವಾಗಿ ಕಾಮಗಾರಿ ಮಾಡುವ ಮೂಲಕ ಅಂತ್ಯಗೊಳಿಸಲು ಮಾನ್ವಿಿ ಸಹಾಯಕ ನಿರ್ದೇಶಕರಾದ ವಿಜಯ, ಎಸ್.ಕೆ. ತಿಳಿಸಿದರು.
ಈ ಸಂದರ್ಭದಲ್ಲಿ ಬಿಸಿಎಂ ಭಾಗಯ್ಯ ನಾಯಕ, ಜೆಸ್ಕಾಾಂ ಮೋಹನ್ ಸಿಂಗ್, ಪಶು ಇಲಾಖೆ ರಾಜು ಕಾಂಬ್ಳೆೆ, ಸಿಡಿಪಿಓ ಗೋಕುಲ್ ಸಾಬ್, ಪ.ಪಂ. ಜೆಇ ಹುಸೇನ್ ಸಾಬ್, ಸಿರ್ಆ ಪಿ ಮಹೇಶ, ಕೃಷಿ, ರೇಷ್ಮೆೆ ತೋಟಗಾರಿಕೆ ಯೇಸುಮಿತ್ರ ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿ ವರ್ಗ ಇದ್ದರು.
ಸಿರವಾರ: ಸಮಾಜ ಕಲ್ಯಾಣ ಇಲಾಖೆ ಸಭೆ ಎಸ್ಸಿ, ಎಸ್ಟಿ ಜನಾಂಗದ ಅಭಿವೃದ್ಧಿ ಯೋಜನೆಯ ಚರ್ಚೆ

