ಸುದ್ದಿಮೂಲ ವಾರ್ತೆ
ಜು,30:ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ ಇಂಟರ್ನ್ಯಾಷನಲ್ ಅಕ್ರೆಡಿಟೇಶನ್ ಸಂಸ್ಥೆಯು ಜ್ಯೋತಿಷ್ಯ ಮತ್ತು ಸಾಮಾಜಿಕ ಸೇವೆಯ ವರ್ಗಕ್ಕೆ ಕೊಡಮಾಡಲ್ಪಡುವ ಈ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿ ಡಾಕ್ಟರೇಟ್ ಎನಿಸಿಕೊಂಡಿದ್ದಾರೆ.
ತಮ್ಮ ಸುಧೀರ್ಘ ಜ್ಯೋತಿಷ್ಯ ಶಾಸ್ತ್ರದ ಸಾಧನೆಗಳ ಜೊತೆಗೆ ಅನೇಕ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ಸಮಾಜ ಸೇವೆ ಮೂಲಕ ತೊಡಗಿಕೊಂಡು ಸರ್ಕಾರದ ಯೋಜನೆಗಳನ್ನು ಕಾಲ ಕಾಲಕ್ಕೆ ತಲುಪಿಸುವ ಸೇವಾಕಾರ್ಯಗಳನ್ನು ಗುರುತಿಸಿ ಈ ಪದವಿ ಪ್ರದಾನ ಮಾಡಲಾಗಿದೆ ಎಂದು ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿಯು ಪ್ರಶಂಸನಾ ಪತ್ರದಲ್ಲಿ ತಿಳಿಸಿದೆ.
ಇವರ ಪ್ರೊಫೈಲ್ ಅನ್ನು ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ಅಕಾಡೆಮಿ (ASIA ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ) ಆಡಳಿತವು ಅನುಮೋದಿಸಿ ಪದವಿ ನೀಡಿದೆ
ಗೌರವ ಡಾಕ್ಟರೇಟ್ ಪದವಿಯನ್ನು ನೆರೆ ರಾಜ್ಯದ ತಮಿಳುನಾಡು ಹೊಸೂರಿನ ಕ್ಲರೆಸ್ಟಾ ಹೋಟೆಲ್ಲುಗಳ ಸಮುಚ್ಛಾಯದ ಸಭಾಂಗಣದಲ್ಲಿ 2023 ಜೂಲೈ 29 ರಂದು ಗಣ್ಯಾತಿಗಣ್ಯರಾದ ಅಕಾಡೆಮಿಯ ಸಂಸ್ಥಾಪಕ ವಿ ಬಾಬು ವಿಜಯನ್, ಮಾಜಿ ಶಾಸಕ ಡಾ. ಮನೋಕರನ್, ಡಾ ಎಸ್. ನಾರಾಯಣನ್, ಆರ್, ಸಿಬಿಡಿಎ ಸಂಸ್ಥಾಪಕ ಆರ್ ಬಾಲಾಜಿ, ಡಾ ರವಿಚಂದ್ರನ್, ಡಾ ಎಂ. ಪವನ ಕಲ್ಯಾಣನ್, ಜಾನ್ ಮಾರ್ಟಿನ್, ಡಾ ಬಸವ ಯೋಗಿ ಗುರೂಜಿ, ಶ್ರೀ ಶಿವಕುಮಾರ ಆರ್ ಎಂ ಕುಂಬಾರ್ ಸೇರಿದಂತೆ ಅನೇಕ ಸಮ್ಮುಖದಲ್ಲಿ ಪದವಿ ಪ್ರಧಾನ ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ನೀಡಲಾಯಿತು
ಜೆ ಶ್ರೀನಿವಾಸ ಮೂರ್ತಿ ತಮ್ಮ ಕುಟುಂಬದೊಂದಿಗೆ ತೆರಳಿ ಪದವಿ ಸ್ವೀಕರಿಸುತ್ತಿದ್ದಂತೆ ಬಂಧು ಮಿತ್ರ ವರ್ಗದವರಲ್ಲಿ ಅತ್ಯಂತ ಸಂತಸದ ಕ್ಷಣಗಳು ಕಂಡು ಬಂದವು
ಈ ವೇಳೆ ಡಾಕ್ಟರೇಟ್ ಪದವಿಗೆ ಭಾಜನರಾದ ಜೆ ಶ್ರೀನಿವಾಸ ಮೂರ್ತಿ ಮಾತನಾಡಿ ಈ ಪದವಿಯಿಂದಾಗಿ ನನ್ನ ಜವಾಬ್ದಾರಿ ಹೆಚ್ಚಾಗಿದೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೊನೆ ಎಂಬುದೇ ಇಲ್ಲ. ಹೆಚ್ಚಿನ ಸಾಧನೆ ಮಾಡುತ್ತಲೇ ಇದ್ದೇನೆ. ಇತರರಿಗೆ ಒಳಿತು ಮಾಡುವ ಮೂಲಕ ಸಮಾಜ ಸೇವೆ ಮಾಡುವುದು ನನಗೆ ಆತ್ಮ ಸಂತೃಪ್ತಿ ನೀಡುತ್ತದೆ ಎಂದರು.