ಸುದ್ದಿಮೂಲ ವಾರ್ತೆ ಸಿರವಾರ, ಡಿ.09:
ಪಟ್ಟಣದ ಸಾರಿಗೆ ಇಲಾಖೆಯ ನೂತನ ಬಸ್ ನಿಲ್ದಾಾಣದ ಸಾರ್ವಜನಿಕ ಶೌಚಾಲಯ ನೀರು ಸರಬರಾಜು ಸರಿಯಾಗಿ ಇಲ್ಲದೆ, ಚರಂಡಿ ತುಂಬಿ ಕಳೆದ ಒಂದು ವಾರದಿಂದ ಬಂದ್ ಆಗಿದ್ದರಿಂದ ಮಹಿಳೆಯರು, ವಿದ್ಯಾಾರ್ಥಿಗಳು, ವಯೋ ವೃದ್ಧರು, ಪರದಾಡುವಂತಾಗಿದೆ.
ನೂತನ ಬಸ್ ನಿಲ್ದಾಾಣಕ್ಕೆೆ ರಕ್ಷಣೆ ಗೋಡೆ ಶೌಚಾಲಯಕ್ಕೆೆ ನಿರ್ಮಾಣ ಮಾಡಲಾಗಿದೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮನೆಗಳು ಇದ್ದು, ರಾಜ್ಯ ಹೆದ್ದಾರಿ ಹೊಂದಿಕೊಂಡಿದೆ. ಆಂಧ್ರ ಪ್ರದೇಶ, ತೆಲಂಗಾಣ, ಗೋವಾ ಹೊರ ರಾಜ್ಯ ಸೇರಿದಂತೆ ಬೆಳಗಾವಿ, ಹುಬ್ಬಳ್ಳಿಿ, ಬೆಂಗಳೂರು ವಿವಿಧ ನಗರ ಪ್ರದೇಶಗಳಿಗೆ ನಿತ್ಯ ಓಡಾಡುವ ಬಸ್ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗಿದೆ, ಸಾರಿಗೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆೆ ಪ್ರಯಾಣಿಕರು ಹಿಡಿ ಶಾಪ ಹಾಕುವಂತೆ ಆಗಿದೆ.
ಹೊಸ ಬಸ್ ಬಸ್ ನಿಲ್ದಾಾಣ ಆದರೂ ಸಾರ್ವಜನಿಕ ಕನಿಷ್ಠ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಕುಡಿಯುವ ನೀರು, ಉಪಾಹಾರ ಗೃಹ, ವಿಶ್ರಾಾಂತಿ ಪಡೆಯಲು ಆಸನಗಳ ಕೊರತೆ ಇದೆ.
ಸರಿಯಾದ ಸಮಯಕ್ಕೆೆ ಬಸ್ ಗಳ ಸೌಲಭ್ಯ ಇಲ್ಲ, ವಿದ್ಯಾಾರ್ಥಿಗಳು, ಪುರುಷರು ಬಸ್ಗಾಗಿ ಗಂಟೆಗಟ್ಟಲೆ ಕಾಯಬೇಕಾಗಿದೆ. ಇನ್ನಾಾದರು ಸಾರಿಗೆ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಗಮನಹರಿಸಿ ಸಿರವಾರ ಬಸ್ ನಿಲ್ದಾಾಣದ ಸಮಸ್ಯೆೆಗಳ ಪರಿಹರಿಸಲು ಮುಂದಾಗ ಬೇಕು ಎಂದು ಪ್ರಯಾಣಿಕರು ಒತ್ತಾಾಯಿಸಿದ್ದಾಾರೆ.
ಸಿರವಾರ: ಬಸ್ ನಿಲ್ದಾಣ ಶೌಚಾಲಯ ಬಂದ್, ಪ್ರಯಾಣಿಕರ ಪರದಾಟ…!

