ಸುದ್ದಿಮೂಲ ವಾರ್ತೆ ಸಿರವಾರ, ನ.12:
ಪಟ್ಟಣದ ರಾಜ್ಯ ಹೆದ್ದಾರಿಯ ರಸ್ತೆೆಯ ಬದಿಯಲ್ಲಿ ಅಕ್ರಮವಾಗಿ ಇಟ್ಟುಕೊಂಡಿದ್ದ ಡಬ್ಬಾಾ ಅಂಗಡಿಗಳ ತೆರವು ಕಾರ್ಯ ಬುಧವಾರ ಬೆಳಗಿನ ಜಾವದಿಂದ ಸಂಜೆಯ ವರೆಗೆ ಜರುಗಿತು.
ಸ್ಥಳೀಯ ಪಟ್ಟಣ ಪಂಚಾಯತಿ ಹಾಗೂ ತಾಲ್ಲೂಕು ಆಡಳಿತದಿಂದ ತಹಶೀಲ್ದಾಾರ ಅಶೋಕ ಪವಾರ, ಜಿಲ್ಲಾ ವಕ್ಫ್ ಅಧಿಕಾರಿಗಳು, ಸಿಪಿಐ ಶಶಿಕಾಂತ, ಪ.ಪಂ.ಮುಖ್ಯಾಾಧಿಕಾರಿ ಸುರೇಶ ಶೆಟ್ಟಿಿ ಅವರ ನೇತೃತ್ವದಲ್ಲಿ ರಸ್ತೆೆಯ ಪುಟಪಾತ್ ತೆರವು ಕಾರ್ಯ ನಡೆಯಿತು.
ರಸ್ತೆೆ ಅತಿಕ್ರಮಣ ಮಾಡುವ ಮೂಲಕ ಶಾಲಾ ಕಾಲೇಜುಗಳ, ಸಾರ್ವಜನಿಕರ ಓಡಾಟಕ್ಕೆೆ ತುಂಬಾ ತೊಂದರೆ ಉಂಟಾಗಿತ್ತು ಆದರೂ ತೆರವು ಮಾಡುವಲ್ಲಿ ನಿರ್ಲಕ್ಷಿಸಿದ ಕಾರಣ ಪಟ್ಟಣ ಪಂಚಾಯತಿ ಆಡಳಿತ ಮಂಡಳಿ ಹಾಗೂ ಸರ್ವ ಸದಸ್ಯರು ಒಪ್ಪಿಿಗೆ ಸೂಚಿಸಿ ಸಾರ್ವಜನಿಕರಿಗೆ ಸೂಚನೆ, ಎಚ್ಚರಿಕೆ ನೀಡಿ ಅಂಗಡಿ ಮುಂಗಟ್ಟು ತೆರವು ಮಾಡಲಾಯಿತು.ಈ ಮಧ್ಯೆೆ ವ್ಯಾಾಪಾರ ಮಾಡಿಕೊಂಡು ಉಪಜೀವನ ಮಾಡುವ ವ್ಯಾಾಪಾರಿಗಳು ಪರದಾಟ, ಗೋಳಾಟ, ವೇದನೆ ಕಂಡುಬಂತು.
ನೀರಾವರಿ ಇಲಾಖೆಯ ಕಚೇರಿಯ ಮುಂದೆ ಹಾಗೂ ಇಂದಿರಾ ಕ್ಯಾಾಂಟೀನ್ ಮುಂದೆ ಇದ್ದ ಎಲ್ಲಾ ಅಂಗಡಿಗಳು ತೆರವು ಮಾಡಿದರು. ಬಸ್ ನಿಲ್ದಾಾಣದ ಮುಂದೆ 6 ಡಬ್ಬಾಾ ಅಂಗಡಿಗಳು ತೆರವು ಮಾಡದಂತೆ ಜಾಗದ ಮಾಲೀಕರು ತಕರಾರು ಮಾಡಿ ಬಸ್ ನಿಲ್ದಾಾಣ ಕಟ್ಟಡಕ್ಕೆೆ ನಮ್ಮ ಹಿರಿಯರು ಸ್ಥಳ ಮಾಡಿದ್ದಾರೆ, ಈ ನಮ್ಮ ಹೆಸರಿಗೆ ಇದೆ ಎಂದು ಪಟ್ಟುಹಿಡಿದ ಕಾರಣ, ಸಾರಿಗೆ ಘಟಕದ ಜಿಲ್ಲಾ ವ್ಯವಸ್ಥಾಾಪಕರು ಬಂದು ಸ್ಥಳದ ಬಗ್ಗೆೆ ಮಾಹಿತಿ ನೀಡಲಿ ಎಂದು ಪಟ್ಟು ಹಿಡದರು ತೆರವು ಸ್ಥಗಿತಗೊಂಡಿದೆ, ಉಳಿದಂತೆ ಮಸೀದಿ ಮಂದೆ ವಕ್ಫ್ ಹೆಸರಿನ ಸ್ಥಳ ಗೋರಿಗಳ ಮೇಲೆ ಯಾವುದೇ ಅಂಗಡಿಗಳು ಇಡದಂತೆ ತೆರವು ಮಾಡಲಾಯಿತು. 3 ಜೆಸಿಬಿ, 4ಟ್ಯಾಾಕ್ಟರ್, ನೂರಾರು ಪೊಲೀಸ್ ಸಿಬ್ಬಂದಿ, ಪ.ಪಂ. ಕಂದಾಯ, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.
ಪಟ್ಟಣದಲ್ಲಿ ಬೆಳಗ್ಗೆೆಯಿಂದ ಗಲಿಬಿಲಿ ವಾತಾವರಣ ಕಂಡು ಬಂತು . ಗುಂಪು ಗುಂಪಾಗಿ ಯುವಕರು ಸ್ಥಳದಲ್ಲಿ ಜಮಾಯಿಸಿದರು. ಅಂಗಡಿಗಳ ಮಾಲೀಕರು ಕೆಲಸಗಾರರು ಬಡವರಿಗೆ ಒಂದು ನ್ಯಾಾಯ, ಉಳ್ಳವರಿಗೆ ಒಂದು ನ್ಯಾಾಯ ಮಾಡಬಾರದು, ಎಲ್ಲಾಾ ಅಂಗಡಿಗಳು ತೆರವು ಮಾಡಬೇಕು ವಾಗ್ವಾಾದಕ್ಕೆೆ ಇಳಿದ ಘಟನೆಗಳು ಕಂಡುಬಂದವು.
ಸಿರವಾರ: ಪುಟ್ಪಾತ್ ತೆರವು , ಅಂಗಡಿ -ಮುಂಗಟ್ಟುಗಳ ಮಾಲೀಕರ ಪರದಾಟ

