ಸುದ್ದಿಮೂಲ ವಾರ್ತೆ ಕಲಬುರಗಿ, ಅ.17
ಜಿಲ್ಲೆಯ ಆಳಂದ ಮತಕ್ಷೇತ್ರದ ವ್ಯಾಾಪ್ತಿಿಯಲ್ಲಿ ಮತಗಳ್ಳತನದ ಪ್ರಕರಣಕ್ಕೆೆ ಸಂಬಂಧಿಸಿದಂತೆ ಎಸ್ಐಟಿ ಕಳೆದ ಮೂರು ದಿನಗಳಿಂದ ತನ್ನ ಶೋಧ ಕಾರ್ಯ ಮುಂದುವರೆಸಿದ್ದು, ಎಸ್ಐಟಿ ಎಸ್ಪಿ ಶುಭನ್ವಿಿತಾ ನೇತೃತ್ವದಲ್ಲಿ ನಗರದ ಮೂರು ಕಡೆಗಳಲ್ಲಿ ಸ್ಥಳೀಯ ಪೊಲೀಸರ ಸಹಕಾರದಿಂದ ದಾಳಿ ನಡೆಸಿ,ದಾಖಲೆಗಳ ಪರಿಶೀಲನೆ ಕಾರ್ಯ ನಡೆದಿದೆ.
ಎಸ್ಐಟಿ ಅಧಿಕಾರಿಗಳ ತಂಡ ಆಳಂದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ ಅವರ ಗುಬ್ಬಿಿ ಕಾಲೋನಿಯ ಮನೆಯ ಮೇಲೆ ಶೋಧ ಕಾರ್ಯ ನಡೆಸಿ,ಸುಮಾರು ನಾಲ್ಕೈದು ಗಂಟೆಗೂ ಅಧಿಕ ಸಮಯ ವಿಚಾರಣೆ ನಡೆಸಿ,ಮಹತ್ವದ ದಾಖಲೆ ಕಲೆ ಹಾಕಿದ್ದಾರೆ. ಸುಮಾರು 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಗರದ ಗುಬ್ಬಿಿ ಕಾಲೋನಿ, ವಸಂತ ನಗರ, ಹಾಗೂ ಖುಬಾ ಬಡಾವಣೆಯ ವಿವೇಕಾನಂದ ನಗರದಲ್ಲಿ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಎಸ್ಐಟಿ ತನಿಖೆಗೆ ಸಂಪೂರ್ಣ ಸಹಕಾರ:
ರಾಜ್ಯದಲ್ಲಿ ಅಭಿವೃದ್ಧಿಿ ನಿಂತ ನೀರಾಗಿದೆ. ಸರ್ಕಾರದ ಬಳಿ ಅಭಿವೃದ್ಧಿಿ ಕೆಲಸಗಳಿಗೆ ಹಣವಿಲ್ಲ ಜನರ ಗಮನ ಬೇರೆಡೆ ಸೆಳೆಯಲು ಆರ್ಎಸ್ ಎಸ್ ಬ್ಯಾಾನ್, ಮತಕಳ್ಳತನ ಸೇರಿದಂತೆ ಅನೇಕ ವಿಷಯ ಪ್ರಸ್ತಾಾಪಿಸಿ ಅಭಿವೃದ್ಧಿಿ ವಿಚಾರ ಮರೆ ಮಾಚಲಾಗುತ್ತಿಿದೆ. ಈ ಹಿಂದೆ ನನ್ನ ಮೇಲೆ ಅನೇಕ ಷಡ್ಯಂತ್ರ ರೂಪಿಸಲಾಗಿತ್ತು. ಆಳಂದ ಕ್ಷೇತ್ರದಲ್ಲಿ ಶಾಸಕ ಬಿ. ಆರ್. ಪಾಟೀಲ್ ಅವರ ಪ್ರಭಾವ ತಗ್ಗಿಿದೆ. ಹಳ್ಳಿಿಗಳಲ್ಲಿ ಜನ ಛೀಮಾರಿ ಹಾಕುತ್ತಿಿದ್ದಾರೆ. ಈಗ ಮತ್ತೆೆ ಸುಳ್ಳು ಆರೋಪ ಹೊರಿಸಿ ಮುಂದಿನ ಚುನಾವಣೆ ಗೆಲ್ಲುವ ತಂತ್ರ ಹೂಡುತ್ತಿಿದ್ದಾರೆ. ತನಿಖೆ ನಡೆಯಲಿ. ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಮಾಜಿ ಶಾಸಕ ಸುಭಾಷ್ ಗುತ್ತೇದಾರ ಹೇಳಿದರು.