ಸುದ್ದಿಮೂಲ ವಾರ್ತೆ ಕಲಬುರಗಿ, ಅ.16:
ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಪ್ರಕರಣದ ತನಿಖೆಯ ಎಸ್ಐಟಿ ತಂಡ ನಗರದ ಐದು ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.
ಪ್ರಕರಣದ ವಿಚಾರಣೆ ನಡೆಸುತ್ತಿಿರುವ ಎಸ್ಐಟಿ ತಂಡದ 20ಕ್ಕೂ ಹೆಚ್ಚಿಿನ ಅಧಿಕಾರಿಗಳು ನಗರದ ಐದು ಕಡೆ ಏಕಕಾಲಕ್ಕೆೆ ದಾಳಿ ನಡೆಸಿದ್ದಾರೆ. ರೋಜಾ ಬಡಾವಣೆ ಅಷ್ಟಾಾಕ್, ಜುಂಜುಂ ಕಾಲೊನಿಯ ನದೀಂ ಹಾಗೂ ಅಕ್ರಂ, ರಾಮನಗರ ಬಡಾವಣೆಯ ಅಸ್ಲಂ ಹಾಗೂ ಯದುಲ್ಲಾ ಕಾಲೊನಿಯ ಮೊಹಮ್ಮದ ಜುನೈದ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದು, ಈ ವೇಳೆ ಹಲವು ದಾಖಲೆಗಳನ್ನು ಕೂಡ ಸಂಗ್ರಹಿಸಿದೆ ಎಂದು ಮೂಲಗಳು ತಿಳಿಸಿವೆ.
ವಿಧಾನಸಭೆ ಚುನಾವಣೆಗೂ ಮುನ್ನ ಆಳಂದ ಕ್ಷೇತ್ರದಲ್ಲಿ ಮತಗಳ್ಳತನ ಆಗಿದೆ ಎಂದು ಶಾಸಕ ಬಿ.ಆರ್.ಪಾಟೀಲ್ ರಾಜ್ಯ ಚುನಾವಣಾ ಆಯೋಗಕ್ಕೆೆ ದೂರು ನೀಡಿದ್ದರು. ಅಲ್ಲದೆ ಆ ವೇಳೆ ಚುನಾವಣಾ ಅಧಿಕಾರಿ ಆಳಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕೆಲವು ದಿನಗಳ ಹಿಂದೆ ರಾಜ್ಯ ಸರಕಾರ ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸಿತ್ತು.