ಸುದ್ದಿಮೂಲ ವಾರ್ತೆ ಬೆಂಗಳೂರು, ಜ.29:
ಮನರೇಗಾ ಯೋಜನೆಯಿಂದ ಮಹಾತ್ಮಗಾಂಧಿ ಅವರ ಹೆಸರನ್ನು ತೆಗೆದಿರುವುದು ಸರಿಯಲ್ಲ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಆಕ್ಷೇಪ ವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ಅವರು ನಮ್ಮ ದೇಶಕ್ಕೆೆ ಸ್ವಾಾತಂತ್ರ್ಯ ತಂದುಕೊಟ್ಟವರು ಯಾರು ಎಂದು ಒಂದು ಸಣ್ಣ ಮಗುವನ್ನು ಕೇಳಿದರೂ ಮಹಾತ್ಮಾಾಗಾಂಧಿ ಎಂದು ಹೇಳುತ್ತದೆ. ಅಂತಹ ಮಹಾತ್ಮನ ಹೆಸರನ್ನು ತೆಗೆದು ಹಾಕಿದ್ದು ಕೇಂದ್ರ ಸರ್ಕಾರದ ಕೆಟ್ಟ ನಿರ್ಧಾರ ಎಂದರು.
ಯುದ್ಧ ಮಾಡುವಷ್ಟು ನಮ್ಮಲ್ಲಿ ಶಸಾಸಗಳಿಲ್ಲದ ಸಮಯದಲ್ಲಿ ಸುಮಾರು 200 ವರ್ಷದ ದಾಸ್ಯತ್ವದಿಂದ ನಮಗೆ ಬಿಡುಗಡೆ ಕೊಡಿಸಿದ ಅವರ ಹೆಸರು ತೆಗೆದಿರುವುದನ್ನು ಜನರು ಮೆಚ್ಚುವುದಿಲ್ಲ. ಯೋಜನೆಯ ಕಾಯಿದೆಯಲ್ಲಿ ಏನಾದರೂ ನ್ಯೂನತೆಗಳಿದ್ದರೆ ಅದನ್ನು ಬೇಕಾದರೆ ಸರಿಪಡಿಸಬಹುದಿತ್ತು. ಆದರೆ ಯೋಜನೆಯ ಹೆಸರಿನಲ್ಲಿ ಗಾಂಧೀಜಿಯವರ ಹೆಸರನ್ನು ತೆಗೆಯಬಾರದಿತ್ತು ಎಂದರು.
ರಾಜ್ಯಕ್ಕೆೆ ಕೇಂದ್ರ ಸರ್ಕಾರವು ಅನುದಾನ ನೀಡುವಲ್ಲಿ ಅನ್ಯಾಾಯ ಮಾಡುವ ಮೂಲಕ ಹೇಗೆ ಮಲತಾಯಿ ಧೋರಣೆ ಮಾಡುತ್ತಿಿದೆ ಎಂಬುದನ್ನು ಅಂಕಿ ಅಂಶಗಳ ಮೂಲಕ ಮಾಹಿತಿ ನೀಡಿದರು.
ಇನ್ನು ಬಳ್ಳಾಾರಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ ಅಂಗವಾಗಿ ಕಟ್ಟಲಾಗುತ್ತಿಿದ್ದ ಬ್ಯಾಾನರ್ ತೆಗೆಸಲು ಹೊರಟಿದ್ದು ವಿರೋಧ ಪಕ್ಷದ ಸದಸ್ಯರ ನಡೆ ಸರಿಯಾದುದಲ್ಲ. ಅದು ಮಹಾನ್ ಪುರುಷ ವಾಲ್ಮೀಕಿ ಅವರಿಗೆ ತೋರಿದ ಅಗೌರವ ಎಂದರು.
ಮನರೇಗಾ ಯೋಜನೆ ಹೆಸರು ಬದಲಾವಣೆಗೆ ಶಿವಲಿಂಗೇಗೌಡ ಆಕ್ಷೇಪ

