ಜೇವರ್ಗಿ ೧೨ : ಫೆ ೧೬ ಕ್ಕೆ ಜೇವರ್ಗಿ ತಾಲೂಕಿನ ೬ ಶರಣ ಸಾಹಿತ್ಯ ಸಮ್ಮೇಳನ ಅದ್ದುರಿಯಾಗಿ ನಡೆಯಲಿದೆ ಎಂದು ಚನ್ನಮಲ್ಲಯ್ಯ ಹಿರೇಮಠ ತಿಳಿಸಿದರು.
ಪಟ್ಟಣದ ಗುರುಕುಲ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಪಟ್ಟಣದ ಹಳೇ ತಹಸಿಲ್ ಕಚೇರಿ ಆವರಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲೂಕ ಘಟಕದ ವತಿಯಿಂದ ೧೬.೦೨.೨೦೨೩ ಗುರುವಾರ ದಂದು ತಾಲೂಕ ಆರನೆಯ ಶರಣ ಸಾಹಿತ್ಯ ಸಮ್ಮೇಳನ ಜರುಗುವುದು. ಸಮ್ಮೇಳನದ ಅಧ್ಯಕ್ಷತೆ ಪೂಜ್ಯಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ವಿರಕ್ತಮಠ ನೆಲೋಗಿ ವಹಿಸಲಿದ್ದಾರೆ. ಹಾಗೂ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು, ರಾಜಕಿಯ ಮುಖಂಡರು, ಸಂಘಟನೆಯವರು ಈ ಕಾರ್ಯಕ್ರಮದಲ್ಲಿ ಬಾಗವಹಿಸಲಿದ್ದಾರೆ ಎಂದು ಚನ್ನಮಲ್ಲಯ್ಯ ಹಿರೇಮಠ ತಿಳಿಸಿದರು.
ಗುರುಕುಲ ಶಾಲೆಯ ಆವರಣದಲ್ಲಿ ಜೇವರ್ಗಿ ತಾಲೂಕ ೬ನೇ ಶರಣ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಪರಮಪೂಜ್ಯ ಮುನಿ ಪ್ರ ಡಾ. ಶಿವಾನಂದ ಮಹಾಸ್ವಾಮಿಗಳು ವಿರಕ್ತಮಠ ಸೋನ್ನ ಬಿಡುಗಡೆಗೊಳಿಸಿ ಮಾತನಾಡಿದರು, ಶರಣ ಸಾಹಿತ್ಯ ಸಮ್ಮೇಳನಕ್ಕೆ ಸರ್ವರು ಆಗಮಿಸಬೇಕು. ಶರಣರ ಬಗ್ಗೆ ಅವರ ಸಾಹಿತ್ಯದ ಬಗ್ಗೆ ಅರಿಯಬೇಕು. ಪ್ರಮುಖವಾಗಿ ಯುವ ಶಕ್ತ ಈ ಕಾರ್ಯಕ್ರಮದಲ್ಲಿ ಬಾಗವಹಿಸಬೇಕು. ಶರಣ ಸಾಹಿತ್ಯದ ಬಗ್ಗೆ ತಿಳಿದುಕೊಳಬೇಕು. ನಮ್ಮ ಸಂಸ್ಕೃತಿಯನ್ನು ಅರಿಯಬೇಕು ಎಂದರು.
ಈ ಸಂದರ್ಭದಲ್ಲಿ ಬಸವ ರತ್ನ ಶ್ರೀ ಕಲ್ಯಾಣ ಕುಮಾರ ಸಂಗವಿ, ಎಸ್ ಕೆ ಬಿರೇದಾರ, ಬಿಜಿ ಹೂಗಾರ, ಚಂದ್ರಶೇಖರ್ ತುಂಬಿಗಿ, ಭೀಮರಾಯ ನಗನೂರ, ಸೋಮಶೇಖರ ಪಾಟೀಲ್ ಗುಡೂರ, ಎಸ್ ಟಿ ಬಿರೇದಾರ, ಧನರಾಜ್ ರಾಥೋಡ್, ಸುರೇಶ್ ಹಿರೇಮಠ್, ಶರಣು ಟಿ ಬೂತಪೂರ್, ನಾಗಣ್ಣ ಹಡಪದ, ರಾಜು ಗೂಡುರ, ಜೇಗದಿಶ ಉಕನಾಳ, ಭಾರತಿ ಎಂ. ನೆಲೋಗಿ, ದುರ್ಗಮ್ಮ ಗೌನಳ್ಳಿ ಮಂತಾದವರು ಉಪಸತಿದರು.