ಗುರುಸ್ವಾಾಮಿ ಬೊಮ್ಮನಾಳ ಅರಕೇರಾ, ಡಿ.09:
ಸಾಮಾನ್ಯವಾಗಿ ರಸ್ತೆೆ ಗುಂಡಿ ಮುಚ್ಚಲು ಮರಂ, ಜಲ್ಲಿ ಕಲ್ಲು ಹಾಗೂ ಕಲ್ಲಿನ ಪುಡಿಯನ್ನು ಬಳಸಲಾಗುತ್ತದೆ. ಆದರೆ ಅರಕೇರಾ ಪಟ್ಟಣದಲ್ಲಿ ಆಸ್ಪತ್ರೆೆಯಿಂದ ಬಿಸಾಡಲಾದ ವೈದ್ಯಕೀಯ ತ್ಯಾಾಜ್ಯವನ್ನು ಬಳಿಸಿ ತಗ್ಗು, ಗುಂಡಿಗಳನ್ನು ಮುಚ್ಚಿಿದ್ದು ಸಾರ್ವಜನಿಕರ ಆಕ್ರೋೋಶಕ್ಕೆೆ ಕಾರಣವಾಗಿದೆ.
ಶಂಕರನಾರಾಯಣ ಕಂಪನಿ ವತಿಯಿಂದ ಕೈಗೊಂಡ ‘‘ಜಲಧಾರೆ’’ ಯೋಜನೆಗಾಗಿ ಪಟ್ಟಣದಲ್ಲಿ 1.5 ಕಿಮೀ ಮಾರ್ಗದ ಪ್ರಮುಖ ರಸ್ತೆೆಯ ಮಧ್ಯಭಾಗವನ್ನು ಅಗೆಯಲಾಗಿದೆ. 5 ರಿಂದ 6 ಅಡಿ ಆಳದಲ್ಲಿ ಬೃಹತ್ ಗಾತ್ರದ ಪೈಪ್ಗಳನ್ನು ಅಳವಡಿಸಿ ಅರೆ ಬರೆಯಾಗಿ ಗುಂಡಿಗಳನ್ನು ಮುಚ್ಚಿಿದ್ದರಿಂದ ವಾಹನಗಳ ಸಂಚಾರಕ್ಕೆೆ ತೀವ್ರ ತೊಂದರೆ ಉಂಟಾಗಿದೆ.
ಈ ಕುರಿತು ದಿನಾಂಕ 06-12-2025 ರಂದು ಸುದ್ದಿಮೂಲ ಪತ್ರಿಿಕೆಯು ‘‘ರಸ್ತೆೆ ದುರಸ್ಥಿಿಗಿಲ್ಲ ಆಸಕ್ತಿಿ ಗಾಢ ನಿದ್ರೆೆಗೆ ಜಾರಿದ ಲೋಕೋಪಯೋಗಿ ಇಲಾಖೆ’’ ಎಂಬ ವರದಿಯನ್ನು ಪ್ರಕಟಿಸಿದೆ. ವರದಿ ಗಮನಿಸಿದ ಇಲಾಖೆ ಗುಂಡಿ ಮುಚ್ಚುವಂತೆ ಎಸ್ಎನ್ಸಿ ಕಂಪನಿಗೆ ಸೂಚಿಸಿದೆ. ಆದರೇ ಕಂಪನಿ ಮಾಡಿದ್ದೇನು…? ರಸ್ತೆೆ ಗುಂಡಿ ಮುಚ್ಚಲು ಮರಂ ಬಳಕೆ ಮಾಡದೆ ರಸ್ತೆೆಯ ಅಕ್ಕ ಪಕ್ಕದಲ್ಲಿ ಬಿದ್ದಿರುವ ಮಣ್ಣು ಹಾಗೂ ಮೆಡಿಕಲ್ ತ್ಯಾಾಜ್ಯದಿಂದ ಗುಂಡಿ ಮುಚ್ಚಿಿದ್ದು ಎಷ್ಟರಮಟ್ಟಿಿಗೆ ಸಮಂಜಸ..? ಹಾಗಾದರೆ ರಸ್ತೆೆ ಅಗೆದು ಪೈಪ್ಲೈನ್ ಅಳವಡಿಸಲು ಅನುಮತಿ ನೀಡಿದ ಲೋಕೋಪಯೋಗಿ ಇಲಾಖೆಯ ಪಾತ್ರವೇನು.? ಇಲಾಖೆ ನೀಡಿದ ಮಾರ್ಗಸೂಚಿಗಳು ಯಾಕೆ ಪಾಲನೆಯಾಗುತ್ತಿಿಲ್ಲ, ಮೊದಲಿನಂತೆ ರಸ್ತೆೆ ನಿರ್ಮಿಸಲು ಹಿಂದೇಟು ಹಾಕುತ್ತಿಿರುವುದಾದರು ಯಾಕೆ ಎನ್ನುವುದೇ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಾಸವಾಗುತ್ತಿಿದೆ.
ಪಾದಚಾರಿಗಳಿಗೆ ಸಂಕಷ್ಟ: ಆಸ್ಪತ್ರೆೆಯಲ್ಲಿ ರೋಗಿಗಳಿಗೆ ಬಳಸಲಾದ ಸಿರಿಂಜ್ಗಳು, ನೀಡಲ್ಗಳು, ಡ್ರೆೆಸ್ಸಿಿಂಗ್ ಕಾಟನ್, ಇಂಜೆಕ್ಷನ್ ವಾಯಿಲ್ಗಳು, ಖಾಲಿ ಔಷಧಿ ಬಾಟಲಿಗಳು ಸೇರಿ ಇನ್ನಿಿತರ ತ್ಯಾಾಜ್ಯಗಳಿಂದ ರಸ್ತೆೆಯ ಗುಂಡಿಗಳನ್ನು ಮುಚ್ಚಲಾಗಿದೆ. ತ್ಯಾಾಜ್ಯಗಳಿಂದ ಬೆರೆತ ಸಿರಿಂಜ್, ನೀಡಲ್ಗಳು ತುಂಬಾನೆ ಅಪಾಯಕಾರಿ ಪರಿಣಾಮಗಳನ್ನು ಬೀರುತ್ತದೆ. ಪಾದಾಚಾರಿಗಳು, ಚಿಂದಿ ಆಯುವವರ ಕಾಲಿಗೆ ಚುಚ್ಚುವ ಹಾಗೂ ದನಕರುಗಳ ಬಾಯಿಗೆ ಚುಚ್ಚುವ ಸಾಧ್ಯತೆ ಇದೆ. ಹೆಚ್ಚಾಾಗಿ ಪಾದಾಚಾರಿಗಳು ಇದೇ ಮಾರ್ಗವನ್ನು ಅವಲಂಬಿಸಿದ್ದು ಏನಾದರೂ ಅಪಾಯ ಸಂಭವಿಸುವ ಮೊದಲು ಅಸಡ್ಡೆೆ ವರ್ತನೆಗೆ ಜಾರಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಎಚ್ಚೆೆತ್ತು ಸಾರ್ವಜನಿಕರ ಹಿತ ಕಾಪಾಡಬೇಕಿದೆ.
09 ಅರಕೇರಾ 01 : ಪಟ್ಟಣದ ಮುಖ್ಯ ರಸ್ತೆೆಯಲ್ಲಿ ವೈದ್ಯಕೀಯ ತ್ಯಾಾಜ್ಯದಿಂದ ಗುಂಡಿ ಮುಚ್ಚಿಿರುವುದು.
ರಸ್ತೆೆ ಗುಂಡಿಗೆ ಚಿಕಿತ್ಸೆೆ ನೀಡಿದ ಎಸ್ಎನ್ಸಿ ಕಂಪನಿ ಸಿರಿಂಜ್, ನೀಡಲ್, ಡ್ರೆೆಸಿಂಗ್ ಕಾಟನ್, ಇಂಜೆಕ್ಷನ್ ವಾಯಿಲ್ಗಳಿಂದ ರಸ್ತೆೆ ದುರಸ್ಥಿಿ….!

