ಸುದ್ದಿಮೂಲ ವಾರ್ತೆ ಬೆಂಗಳೂರು, ಅ.03:
ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಗ್ರೇೇಟರ್ ಬೆಂಗಳೂರು ವ್ಯಾಾಪ್ತಿಿಯಲ್ಲಿ ಅಕ್ಟೋೋಬರ್ 4ರಿಂದ ಆರಂಭವಾಗಲಿದೆ.
ಸಮೀಕ್ಷೆೆಗೆ ಅಗತ್ಯವಾದ ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ. ಶನಿವಾರದಿಂದ ಗಣತಿದಾರರು ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಲಿದ್ದಾರೆ ಎಂದು ಬಿಜೆಎ ಮುಖ್ಯ ಆಯುಕ್ತ ಮಹೇಶ್ವರ್ರಾವ್ ಹೇಳಿದರು.
ಜಿಬಿಎ ವ್ಯಾಾಪ್ತಿಿಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದಂತೆ ಶುಕ್ರವಾರ ವರ್ಚ್ಯುವಲ್ ಮೂಲಕ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಮೀಕ್ಷೆ ನಡೆಸಲು ವಿವಿಧ ಇಲಾಖೆಗಳಿಂದ ನಿಯೋಜಿಸಲ್ಪಟ್ಟ ಸಮೀಕ್ಷಾದಾರರಿಗೆ ಆಯಾ ನಗರ ಪಾಲಿಕೆಗಳಲ್ಲಿ ಎರಡು ಬಾರಿ ತರಬೇತಿ ನೀಡಲಾಗಿದೆ. ಎಲ್ಲರು ಶ್ರದ್ಧೆೆಯಿಂದ ಸಮೀಕ್ಷೆ ನಡೆಸಿ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಅವರು ಸೂಚನೆ ನೀಡಿದರು.
ಜಿಬಿಎ ವ್ಯಾಾಪ್ತಿಿಯ ಐದು ನಗರ ಪಾಲಿಕೆಗಳ ಆಯುಕ್ತರ ಮೇಲ್ವಿಿಚಾರಣೆಯಲ್ಲಿ ಸಮೀಕ್ಷಾ ಕಾರ್ಯ ಜರುಗಲಿದ್ದು, ಅಪರ ಆಯುಕ್ತರು, ಜಂಟಿ ಆಯುಕ್ತರು ಮತ್ತು ಉಪ ಆಯುಕ್ತರು ಸಮೀಕ್ಷಾ ಕಾರ್ಯದಲ್ಲಿ ಸಕ್ರಿಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.
ಕೆ.ಎ.ಎಸ್ ಅಧಿಕಾರಿಗಳ ನಿಯೋಜನೆ:
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆೆ ಒಬ್ಬರಂತೆ ಕೆ.ಎ.ಎಸ್ ಹಿರಿಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳೆಂದು ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಅದರಂತೆ ಒಟ್ಟು 34 ಕೆ.ಎ.ಎಸ್ ಅಧಿಕಾರಿಗಳು ಸಮೀಕ್ಷಾ ಕಾರ್ಯವನ್ನು ಸುಗಮವಾಗಿ ನಿರ್ವಹಿಸಲು, ಸಮೀಕ್ಷಾದಾರರು ಮತ್ತು ಸರ್ಕಾರದ ಮಧ್ಯೆೆ ಸಮನ್ವಯತೆಯನ್ನು ಕಾಪಾಡುವ ಹಿತದೃಷ್ಟಿಿಯಿಂದ ಕರ್ತವ್ಯ ನಿರ್ವಹಿಸಲಿದ್ದಾರೆ. ಪ್ರತಿ ವಾರ್ಡ್ಗೆ ಒಬ್ಬರಂತೆ ಗ್ರೂಪ್- ಎ ವೃಂದದ ಅಧಿಕಾರಿಗಳನ್ನು ವಾರ್ಡ್ ಮೇಲ್ವಿಿಚಾರಕರಾಗಿ, ಚಾರ್ಜ್ ಅಧಿಕಾರಿಗಳೆಂದು ನೇಮಿಸಲಾಗಿದ್ದು, ಅವರು ಆ ವಾರ್ಡ್ನ ಸಮೀಕ್ಷೆಯ ಸಂಪೂರ್ಣ ಮೇಲ್ವಿಿಚಾರಣೆಯನ್ನು ನಿರ್ವಹಿಸಲಿದ್ದಾರೆ.
300 ಮನೆಗಳಿಗೆ ಒಬ್ಬರಂತೆ ಸಮೀಕ್ಷಾದಾರರು
ಪ್ರತಿ ಸಮೀಕ್ಷೆ ನಡೆಸುವ 15 ರಿಂದ 20 ಸಮೀಕ್ಷಾದಾರರ ಕಾರ್ಯವನ್ನು ಪರಿಶೀಲಿಸಲು ಒಬ್ಬ ಉಪ ಮೇಲ್ವಿಿಚಾರಕರನ್ನು ನೇಮಿಸಲಾಗಿದೆ. ಪ್ರತಿ 300 ಮನೆಗಳಿಗೆ ಒಬ್ಬರಂತೆ ಸಮೀಕ್ಷಾದಾರರನ್ನು ನಿಯೋಜಿಸಲಾಗಿದೆ. ಅವರು ತಮ್ಮ ವ್ಯಾಾಪ್ತಿಿಯ ಮನೆಮನೆಗಳಿಗೆ ಭೇಟಿ ನೀಡಿ ಸಮೀಕ್ಷಾ ಕರ್ತವ್ಯವನ್ನು ನಿರ್ವಹಿಸಲಿದ್ದಾರೆ.
ಎರಡು ಸುತ್ತು ತರಬೇತಿ:
ಸಮೀಕ್ಷೆ ನಡೆಸಲು ಸರ್ಕಾರಿ ನೌಕರರು, ನಿಗಮ ಮಂಡಳಿಗಳ ಅಧಿಕಾರಿ, ನೌಕರರನ್ನು ನಿಯೋಜಿಸಲಾಗಿದೆ. 29 ಸೆಪ್ಟೆೆಂಬರ್ 2025ರಂದು ನಡೆದ ಮೊದಲನೇ ಸುತ್ತಿಿನಲ್ಲಿ 33 ತರಬೇತಿ ಕೇಂದ್ರಗಳಲ್ಲಿ 17,500 ಅಧಿಕಾರಿ, ನೌಕರರಿಗೆ ತರಬೇತಿ ನೀಡಲಾಗಿತ್ತು. ಇಂದು ಮತ್ತೊೊಂದು ಬಾರಿ ಸಮೀಕ್ಷಾದಾರರಿಗೆ ತರಬೇತಿ ನೀಡಿದ್ದು, ಪ್ರತೀ ಸಮೀಕ್ಷಾದಾರರಿಗೆ ಸಮೀಕ್ಷೆ ನಡೆಸಲು ವಾರ್ಡ್ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದರು.
ಸಮೀಕ್ಷಾದಾರರಿಗೆ ಕಿಟ್ ವಿತರಣೆ:
ಸಮೀಕ್ಷೆ ನಡೆಸುವ ಸಿಬ್ಬಂದಿಗೆ ಗುರುತಿನ ಚೀಟಿ, ಕ್ಯಾಾಪ್, ಬ್ಯಾಾಗ್, ಕೈಪಿಡಿ, ಸ್ವಯಂ ಘೋಷಣಾ ಪತ್ರ, ಮನೆಯಲ್ಲಿ ಯಾರು ಇಲ್ಲದಿದ್ದರೆ 2ನೇ ಬಾರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಂಟಿಸುವ ಚೀಟಿ ಹಾಗೂ ಇತರ ಸಾಮಗ್ರಿಿಗಳ ಕಿಟ್ ವಿತರಿಸಲಾಗಿದೆ.
ನಾಗರಿಕರು ಸಹಕರಿಸಲು ಮನವಿ:
ಜಿಬಿಎ ವ್ಯಾಾಪ್ತಿಿಯಲ್ಲಿ ಇಂದಿನಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯ ಆರಂಭವಾಗಲಿದ್ದು, ನಗರದ ಎಲ್ಲಾ ನಾಗರಿಕರು ಅಗತ್ಯ ದಾಖಲೆಗಳನ್ನು (ಆಧಾರ್ ಕಾರ್ಡ್/ರೇಷನ್ ಕಾರ್ಡ್ ಸೇರಿದಂತೆ ಇತರೆ ದಾಖಲೆಗಳು) ಇಟ್ಟುಕೊಂಡು ಸಮೀಕ್ಷಾದಾರರಿಗೆ ಸಹಕರಿಸಲು ಕೋರಿದೆ.
ಒಟ್ಟು 3,42,31,444 ಜನರ ಸಮೀಕ್ಷೆ ಪೂರ್ಣ
ರಾಜ್ಯದಲ್ಲಿ ಅಕ್ಟೋೋಬರ್ 2ರವರೆಗೆ 81,27,206 ಕುಟುಂಬಗಳ ಸಮೀಕ್ಷೆ ಪೂರ್ಣಗೊಳಿಸಲಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ತಿಳಿಸಿದೆ.
ಅ,.3ರಂದು 935044 ಕುಟುಂಬಗಳ ಸಮೀಕ್ಷೆ ನಡೆಸಲಾಗಿದೆ. ಇಲ್ಲಿವರೆಗೆ ಒಟ್ಟು 90,61,880 ಮನೆಗಳ ಸಮೀಕ್ಷೆ ನಡೆದಿದೆ. 3,42,31,444 ಜನರ ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸಲಾಗಿದೆ. ಶೇ.60.03ರಷ್ಟು ಪ್ರಗತಿಯಾಗಿದೆ ಎಂದು ಆಯೋಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

