ಸುದ್ದಿಮೂಲ ವಾರ್ತೆ ಸಿಂಧನೂರು, ಜ.12:
ವಸತಿ ನಿಲಯಕ್ಕೆೆ ಬಾಡಿಗೆ ನೀಡಿದ ಕಟ್ಟಡದ ಬಾಡಿಗೆ ಹಣ ನೀಡದ ಹಿನ್ನಲೆಯಲ್ಲಿ ನಗರದ ಸಮಾಜ ಕಲ್ಯಾಾಣ ಇಲಾಖೆ ಗ್ರೇೇಡ್-2 ಸಹಾಯಕ ನಿರ್ದೇಶಕರ ಕಚೇರಿಯ ಸಾಮಾಗ್ರಿಿ ಜಪ್ತಿಿ ಮಾಡಲು ನ್ಯಾಾಯಾಲಯ ಆದೇಶಿಸಿದೆ.
ಸೋಮವಾರ ಕಟ್ಟಡ ಮಾಲೀಕ ಖಾಜಾಸಾಬ್ ಶಂಶುಸಾಬ್ ಅವರು ವಕೀಲರು ಹಾಗೂ ಕೋರ್ಟ್ ಸಿಬ್ಬಂದಿಯೊಂದಿಗೆ ಕಛೇರಿಗೆ ಆಗಮಿಸಿ ಪೀಠೋಪಕರಣಗಳು, ಕಂಪ್ಯೂೂಟರ್ಗಳು ಮತ್ತಿಿತರ ವಸ್ತುಗಳನ್ನು ಹೊರಗೆ ಇಟ್ಟು, ಜಪ್ತಿಿಗೆ ಮುಂದಾದರು. 18 ತಿಂಗಳ ಬಾಡಿಗೆಯ 20 ಲಕ್ಷ ರೂ ಹಣ ನೀಡಿಲ್ಲ ಎಂದು ಕಟ್ಟಡದ ಮಾಲೀಕ ನ್ಯಾಾಯಾಲಯದ ಮೊರೆ ಹೋಗಿದ್ದರು.
ಈ ಹಿನ್ನಲೆಯಲ್ಲಿ ಇಲಾಖೆಗೆ ನೋಟಿಸ್ ಜಾರಿಗೊಳಿಸಿ ಹಣ ಪಾವತಿಗೆ ಹೇಳಿದಾಗ್ಯೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು, ಈ ಹಿನ್ನೆೆಲೆಯಲ್ಲಿ ಕಚೇರಿಯ ಪೀಠೋಪಕರಣ ಜಪ್ತಿಿಗೆ ಹಿರಿಯ ಶ್ರೇೇಣಿ ನ್ಯಾಾಯಾಧೀಶರಾದ ಲಕ್ಷ್ಮೀಕಾಂತ ಮಿಸ್ಕಿಿನ್ ಅವರು ಆದೇಶಿಸಿದ ಹಿನ್ನಲೆಯಲ್ಲಿ ಸಮಾಜ ಕಲ್ಯಾಾಣ ಇಲಾಖೆಯ ಕುರ್ಚಿಗಳು, ಮೇಜು, ಕಂಪ್ಯೂೂಟರ್ ಮತ್ತಿಿತರ ವಸ್ತುಗಳನ್ನು ಜಪ್ತಿಿ ಮಾಡಲಾಯಿತು.
ಈ ಸಂದರ್ಭದಲ್ಲಿ ವಕೀಲ ಎನ್. ರಾಮನಗೌಡ, ನ್ಯಾಾಯಾಲಯದ ಸಿಬ್ಬಂದಿಗಳಾದ ಬೂದಿಬಸವರಾಜ, ಬಸವರಾಜ, ಮಹಾಂತೇಶ, ಮನೋಹರ, ಸುಮಂಗಲಾ ಇದ್ದರು.
ಬಾಡಿಗೆ ಹಣ ನೀಡದ ಸಮಾಜ ಕಲ್ಯಾಣ ಇಲಾಖೆ ಕಚೇರಿ ಜಪ್ತಿ

