ಸುದ್ದಿಮೂಲವಾರ್ತೆ
ಕೊಪ್ಪಳ ಏ ೦೫: ಸಹಾಯ ಧನ ಬಿಡುಗಡೆಗಾಗಿ ವ್ಯಕ್ತಿಯೊಬ್ಬರಿಂದ ಲಂಚರೂಪವಾಗಿ ೫ ಸಾವಿರ ರೂಪಾಯಿ ಪಡೆಯುವಾಗ ಲೋಕಾಯುಕ್ತರ ಬಲಿಗೆ ಬಿದ್ದ ಘಟನೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ನಡೆದಿದೆ.
ವೆಂಕಟೇಶ ಪೂಜಾರ ಎಂಬ ದ್ವಿತೀಯ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಯಲಬುರ್ಗಾ ತಾಲೂಕಿನ ಬಸಪ್ಪ ಗುನ್ನಾಳ ಎಂಬುವವರಿAದ ಲಂಚ ಪಡೆಯುವಾಗ ಬಲೆಗೆ ಬಿದ್ದಿದ್ದಾರೆ. ಬಸಪ್ಪ ದೇವದಾಸಿ ಮಹಿಳೆಯ ಮಗಳನ್ನು ಮದುವೆಯಾಗಿದ್ದಕ್ಕೆ ಸಹಾಯಧನ ಕ್ಕಾಗಿ ೫೦ ಸಾವಿರಕ್ಕೆ ವೆಂಕಟೇಶ ಬೇಡಿಕೆ ಇಟ್ಟಿದ್ದ ಇದರ ಮುಂಗಡವಾಗಿ ೫ ಸಾವಿರ ರುಪಾಯಿ ಲಂಚ ಸ್ವೀಕರಿಸುವಾಗ ಬಲೆಗೆ ಬಿದ್ದಿದ್ದಾರೆ.
ಖವಾಯ್ ಎಸ್ಪಿ ಸಲೀಂ ಪಾಷಾರ ನೇತ್ರತ್ವದ ಲೋಕಾಯುಕ್ತರು ಪೊಲೀಸರು ದಾಳಿ ನಡೆಸಿ ವೆಂಕಟೇಶರನ್ನು ಹಣ ಸಮೇತವಾಗಿ ಹಿಡಿದಿದ್ದಾರೆ. ವೆಂಕಟೇಶ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.