ಸುದ್ದಿಮೂಲ ವಾರ್ತೆ ಹರಪನಹಳ್ಳಿ, ಡಿ.29:
ಅಣ್ಣಪ್ಪನವರು ಶ್ರೀಮಂತರಿದ್ದರೂ ಸಹ ಬಡವ, ದೀನ, ದಲಿತರ ಪಕ್ಷಾತೀತವಾಗಿ, ಜಾತ್ಯತೀತವಾಗಿ ಎಲ್ಲರಿಗೂ ಯಾವುದೇ ಬೇಧಭಾವವಿಲ್ಲದೇ ಸಹಕಾರ ನೀಡುತ್ತಾಾ ಬಂದಿದ್ದಾರೆ, ಇಡೀ ತಾಲ್ಲೂಕಿನಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಸ್ಪಂದಿಸಿ, ಸಮಾಜಮುಖಿ ಕಾರ್ಯಕ್ರಮ ಗಳನ್ನು ಮಾಡಿಕೊಂಡು ಬರುತ್ತಿಿದ್ದಾರೆ, ಇಂದು ಇವರ ಹುಟ್ಟುಹಬ್ಬ, ದೇವರು ಆರೋಗ್ಯ ವನ್ನು ಕೊಟ್ಟು ಕಾಪಾಡಲಿ ಎಂದು ಕೂಡಲಶಾಂತೇಶ್ವರ ಮಠದ ಶಾಂತಲಿಂಗ ದೇಶಿಕೇಂದ್ರ ಮಹಾಸ್ವಾಾಮಿಗಳು ಶುಭ ಹಾರೈಸಿದರು.
ಆವರು ತಾಲ್ಲೂಕಿನ ಅರಸೀಕೆರೆ ಗ್ರಾಾಮದ ಬಿ.ಡಿ.ಸಿ.ಸಿ. ಬ್ಯಾಾಂಕ್ ನಿರ್ದೇಶಕರಾದ ವೈ.ಡಿ.ಅಣ್ಣಪ್ಪ ರವರ 46ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಹಮ್ಮಿಿಕೊಂಡ ವಿವಿಧ ಕಾರ್ಯಕ್ರಮಗಳ ಸಾನಿಧ್ಯ ವಹಿಸಿ ಮಾತನಾಡಿದ ಅವರು ವೈ.ಡಿ.ಅಣ್ಣಪ್ಪನವರಿಗೆ ಅವರ ತಂದೆ ತಾಯಿ ಕೊಟ್ಟ ಸಂಸ್ಕಾಾರದಿಂದ ಸಮಾಜದಲ್ಲಿ ಒಬ್ಬ ಉತ್ತಮ ವ್ಯಕ್ತಿಿಯಾಗಿದ್ದಾರೆ. ದೇವೇಂದ್ರಪ್ಪ ನವರಿಗೆ ಅವರ ತಾಯಿ ಗಂಗಮ್ಮ ನವರು ಹಾಕಿ ಕೊಟ್ಟ ಮಾರ್ಗದರ್ಶ ನದಲ್ಲಿ ಕುಟುಂಬವನ್ನು ನಡೆಸಿಕೊಂಡು ಬಂದಿದ್ದಾರೆ, ಅಜ್ಜಿಿಯ ಭಕ್ತಿಿ, ಶ್ರದ್ದೆಯಿಂದ ಅಣ್ಣಪ್ಪನವರು ನಡೆದುಕೊಂಡು ಬಂದಿದ್ದಾರೆ ಎಂದು ಹೇಳಿದರು.
ನೀಲಗುಂದದ ಚನ್ನಬಸವ ಶಿವಯೋಗಿಗಳು ಮಾತನಾಡಿ ದೇವೇಂದ್ರಪ್ಪನವರ ಆಚಾರ ವಿಚಾರಗಳನ್ನು ಮಗನಾದ ಅಣ್ಣಪ್ಪನವರು ನಡೆಸಿಕೊಂಡು ಬರುತ್ತಿಿದ್ದಾರೆ, ಇಡೀ ಹರಪನಹಳ್ಳಿಿ ತಾಲೂಕಿನಲ್ಲಿ ಬಡವರ,ಶ್ರೀಮಂತರ ಯಾರ ಕಾರ್ಯಕ್ರಮವೇ ಇರಲಿ ಅದರಲ್ಲಿ ಪಾಲ್ಗೊೊಂಡು ಹಸನ್ಮುಖಿಯಾಗಿ ಸ್ಫೂರ್ತಿ ತುಂಬುತ್ತಾಾರೆ.ಈಗಾಗಲೇ ಅಣ್ಣಪ್ಪನವರು ಎಲ್ಲರ ಹೃದಯವನ್ನು ಗೆದ್ದಿದ್ದಾರೆ, ಮುಂದೊಂದು ದಿನ ಸಮಾಜ ಸೇವೆ ಮಾಡಲಿಕ್ಕೆೆ ಒಬ್ಬ ಯೋಗ್ಯ ವ್ಯಕ್ತಿಿ ಬೇಕು, ಆ ವ್ಯಕ್ತಿಿ ಅಣ್ಣಪ್ಪರೇ ಅಗಲಿ ಎಂಬ ಅಸೆ ಎಲ್ಲರ ಮನಸಿನಲ್ಲಿದೆ, ಅದು ಈಡೇರಬೇಕು, ಇಂದು ಅಣ್ಣಪ್ಪರ ಜನ್ಮದಿನ, ಇವರಿಗೆ ದೇವರು ಆಯುಷ್ಯ, ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕೊಟ್ಟೂರಿನ ಶಿವಯೋಗಿ ರಾಜೇಂದ್ರ ಮಹಾ ಸ್ವಾಾಮಿಗಳು, ವೈ. ದೇವೇಂದ್ರಪ್ಪ, ಯರಬಳ್ಳಿಿ ಉಮಾಪತಿ, ಅಣ್ಣಪ್ಪನವರ ಮಕ್ಕಳಾದ ಚಂದನ, ಸಾನ್ವಿಿ ಮಾತನಾಡಿದರು.ಅಣ್ಣಪ್ಪನವರ ಭಾವಚಿತ್ರವಿರುವ 2026ನೇ ವರ್ಷದ ಕ್ಯಾಾಲೆಂಡರನ್ನು ಬಿಡುಗಡೆ ಮಾಡಲಾಯಿತು.
ಇಡೀ ಹರಪನಹಳ್ಳಿಿ ತಾಲ್ಲೂಕಿನ ಸ್ನೇಹಿತರು, ಅಭಿಮಾನಿ ಬಳಗದವರು, ಹಿತೈಷಿಗಳು, ಎಲ್ಲಾ ಸಮಾಜದ ಮುಖಂಡರು, ಕಾರ್ಯಕರ್ತರು ವೈ.ಡಿ.ಅಣ್ಣಪ್ಪ ನವರಿಗೆ ಸನ್ಮಾಾನಿಸಿ, ಶುಭಾಶಯಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ವೈ. ದೇವೇಂದ್ರಪ್ಪ ಸುಶೀಲಮ್ಮ, ಎಚ್ ಕೆ ಹಾಲೇಶ್ ವಕೀಲರು. ಯರಬಳ್ಳಿಿ ಉಮಾಪತಿ, ಪ್ರಶಾಂತ್ ಪಾಟೀಲ್, ಲಕ್ಷ್ಮಿಿದೇವಿ ಅಣ್ಣಪ್ಪ, ನಂಜನಗೌಡ, ಮುತ್ತಗಿವಾಗೀಶ್. ಬನಶಂಕರಿ ಮಂಜಣ್ಣ. ಣಿಯಾಪುರದ ಲಿಂಗರಾಜ್, ಯರಬಳ್ಳಿಿ ವಿಜಯ್ ಕುಮಾರ್, ಅರಸೀಕೆರೆಯ ಬಿ.ರಾಮಣ್ಣ, ಪೂಜಾರ ಮರಿಯಪ್ಪ. ಎ.ಮಿಂಚು, ವೈ.ಎ. ಪ್ರೀೀತಮ್, ಪರಶುರಾಮ್, ಶ್ರೀನಿವಾಸ್, ನಿಚ್ಚವ್ವನಹಳ್ಳಿಿ ಸುರೇಶ್, ಪತ್ರಕರ್ತರು, ತಾಲ್ಲೂಕಿನ ಎಲ್ಲಾ ಸಹಕಾರಿ ಸಂಘಗಳ ಸದಸ್ಯರು ಸಿಬ್ಬಂದಿಗಳು ಹಾಗು ಎಲ್ಲಾ ಪಕ್ಷದ ಮುಖಂಡರು ಹಾಗೂ ಗ್ರಾಾಮಸ್ಥರು ಶುಭ ಕೋರಿದರು.
ಸಮಾಜಮುಖಿ ಚಿಂತನೆಯುಳ್ಳ ನಾಯಕ ವೈ.ಡಿ.ಅಣ್ಣಪ್ಪ : ಶ್ರೀಗಳು

