ಸುದ್ದಿಮೂಲವಾರ್ತೆ
ಕೊಪ್ಪಳ,ಜು.27: ಕೊಪ್ಪಳ ನಗರಸಭೆ ನವೀಕರಣ ಕಾಮಗಾರಿ ಸ್ಥಗಿತಗೊಳಿಸಲು ಸೂಚನೆ ನೀಡಿದ್ದರೂ ನಗರಸಭೆ ಪೌರಾಯುಕ್ತರು ಹಾಗು ಶಾಸಕ ಕೆ ರಾಘವೇಂದ್ರ ಹಿಟ್ನಾಳ ಕ್ಯಾರೆ ಎನ್ನುತ್ತಿಲ್ಲ ಎಂದು ನಗರಸಭೆ ಸದಸ್ಯ ಸೋಮಣ್ಣ ಹಳ್ಳಿ ಹೇಳಿದ್ದಾರೆ.
ಅವರು ಇಂದು ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ ನಗರಸಭೆಯ ಸಭೆಯಲ್ಲಿ ಅನುಮೋದನೆ ತೆಗೆದುಕೊಂಡಿಲ್ಲ. ಕೇವಲ 30 ಲಕ್ಷ ರೂಪಾಯಿ ಯೋಜನೆಗೆ ಅನುಮೋದನೆ ಪಡೆದಿದ್ದಾರೆ. ಆದರೆ ಅಲ್ಲಿ ಕೋಟಿಗಟ್ಟಲೆ ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದೆ.
ನಗರಸಭೆಯ ಅಧ್ಯಕ್ಷರು ಹಾಗು ಪೌರಾಯುಕ್ತರ ಹಣ ಹೊಡೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ನಗರಸಭೆಯ ನವೀಕರಣ ಮಾಡಬಾರದು. ನಗರದಲ್ಲಿ ಸಮಸ್ಯೆ ಇವೆ. ನಗರಸಭೆ ಉತ್ತಮವಾಗಿದೆ. ಈ ಸಂದರ್ಭದಲ್ಲಿ ನವೀಕರಣ ಮಾಡದೆ ಇದೇ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿ ತೆಗೆದುಕೊಳ್ಳಬೇಕು ಎಂದರು.
ಕೊಪ್ಪಳದಲ್ಲಿ ಶಾಸಕರು ಮಗುವನ್ನು ಚಿವುಟತ್ತಾರೆ. ಅವರೇ ತೊಟ್ಟಿಲು ತೂಗುತ್ತಾರೆ. ಈಗಲೂ ಸಹ ಕಾಮಗಾರಿ ಈ ಕುರಿತು ಪೌರಾಡಳಿತ ಸಚಿವರಿಗೆ ಮನವಿ ಮಾಡಲಾಗುವುದು ಎಂದರು.
ನಗರಸಭೆಯಲ್ಲಿ ಕಾಮಗಾರಿ ಮಾಡುತ್ತಿದ್ದು ಅಲ್ಲಿ ಕುಳಿತಕೊಳ್ಳಲು ಆಗುತ್ತಿಲ್ಲ. ಹೀಗಾಗಿ ನಗರಸಭೆಗೆ ದನ ಹೋಗಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ರಮೇಶ ಇದ್ದರು.