ಸುದ್ದಿಮೂಲ ವಾರ್ತೆ ಕವಿತಾಳ, ೆ.12:
ವಿವಿಧ ಶಾಲೆಗಳ ಮಕ್ಕಳನ್ನು ಸೇರಿಸಿ ಕಲಿಕಾ ಹಬ್ಬದಂತ ಕಾರ್ಯಕ್ರಮ ಮಾಡುವುದರಿಂದ ಮಕ್ಕಳಲ್ಲಿ ಬೌದ್ಧಿಿಕ ಮತ್ತು ಶಿಕ್ಷಣ ಮಟ್ಟ ಹೆಚ್ಚುತ್ತದೆ ಕಲಿಕೆಯಲ್ಲಿ ಹಿಂದುಳಿದಂತ ಮಕ್ಕಳಿಗೆ ಸಹಕಾರಿಯಾಗುತ್ತದೆ ಎಂದು ಸಿ ಆರ್. ಪಿ ಸೌಮ್ಯಶ್ರೀ ಹೇಳಿದರು.
ಸಮೀಪದ ಹಿರೇಹಣಗಿ ಗ್ರಾಾಮದ ಸರ್ಕಾರಿ ಉನ್ನತಿಕರಿಸಿದ ಶಾಲೆಯಲ್ಲಿ ಕವಿತಾಳ ವಲಯ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಉದ್ಘಾಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಾಥಮಿಕ 11 ಶಾಲೆಗಳ ಮಕ್ಕಳು ಭಾಗವಹಿಸಿದ್ದು ಪ್ರತಿ ಶಾಲೆಯಿಂದ 10 ಮಕ್ಕಳಂತೆ 110 ವಿದ್ಯಾಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊೊಂಡಿದ್ದಾರೆ. ಕಾರ್ಯಕ್ರಮವು ಎ್ ಎಲ್ ಎನ್ ವಿದ್ಯಾಾರ್ಥಿಗಳ ಕಲಿಕಾ ಸಾಧನೆಯ ಹಬ್ಬವಾಗಿದ್ದು ಶಿಕ್ಷಕ ವೃಂದವು ತಾರತಮ್ಯ ಮಾಡದೆ ಅತಿ ಸಂತೋಷದಿಂದ ಯಶಸ್ವಿಿಗೊಳಿಸಿ ಎಂದರು.
ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಬೀರಪ್ಪ, ಶಿಕ್ಷಕರಾದ ಅಮರೇಶ ಪಾಟೀಲ, ಮಹಾಂತೇಶ ಕರ್ಲಟ್ಟಿಿ, ಅನಂತರಾಜ, ರಂಜಿತಾ, ಸವಿತಾ, ಮಲ್ಲಮ್ಮ, ಭಾರತಿ, ಬುಡ್ಡಪ್ಪ, ವಸಂತಕುಮಾರ, ಚನ್ನಬಸವರಾಜ, ನರೇಂದ್ರ, ನರಸಪ್ಪ, ಚೌರಪ್ಪ, ಪ್ರವೀಣಕುಮಾರ, ಮಂಜುಳಾ, ಸಂಪ್ರಿಿತಾ, ಅಯ್ಯನಗೌಡ,
ಹುಲ್ಲಪ್ಪ ಘಂಟಿ, ಸಂಜೀವ, ಮಂಜುನಾಥ ಮತ್ತು ಯಲ್ಲ ಶಾಲೆಯ ಮುಖ್ಯ ಗುರುಗಳು, ಶಿಕ್ಷಕರು, ಎಸ್ಡಿಎಂಸಿ ಸದಸ್ಯರು ಹಾಗೂ ವಿದ್ಯಾಾರ್ಥಿಗಳು ಇದ್ದರು.
ಮಕ್ಕಳ ಕಲಿಕೆಗೆ ಮಕ್ಕಳಾ ಕಲಿಕಾ ಹಬ್ಬ ಸಹಕಾರಿ – ಸೌಮ್ಯಶ್ರೀ

