ಸುದ್ದಿಮೂಲ ವಾರ್ತೆ ಚಿಂಚೋಳಿ, ೆ.06:
ತಾಲೂಕು ಗಡಿಭಾಗವಿರುವುದರಿಂದ ಅಪರಾಧ ಪ್ರಕರಣಗಳು,ಅಕ್ರಮ ಚಟುವಟಿಕೆಗಳು,ಕಳ್ಳತನಗಳು ಪತ್ತೆೆ ಹಚ್ಚಲು ಸಿಸಿ ಕ್ಯಾಾಮೆರಾಗಳು ಪೊಲೀಸರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದು ಜಿಲ್ಲಾ ಪೋಲೀಸ್ ವರಿಷ್ಠಾಾಧಿಕಾರಿ ಅದ್ದೂರು ಶ್ರೀನಿವಾಸಲು ಹೇಳಿದರು.
ಪಟ್ಟಣದ ಪುರಸಭೆ ವ್ಯಾಾಪ್ತಿಿಯ ಪ್ರಮುಖ ಸ್ಥಳಗಳು ಮತ್ತು ಜನನಿಬಿಡ ಪ್ರದೇಶಗಳಲ್ಲಿ, ಪ್ರಮುಖ ವೃತ್ತಗಳು ಗುರುತಿಸಿ ಓಟ್ಟಾಾರೆ 10ಕಡೆಗಳಲ್ಲಿ 36ಸಿಸಿ ಕ್ಯಾಾಮರಾಗಳು ಅಳವಡಿಕೆ ಪ್ರಗತಿ ಕಾಮಗಾರಿಗಳು ಪರೀಶೀಲಿಸಿ ಸುದ್ದಿಗಾರರೊಂದಿಗೆ ಮತನಾಡಿದ ಅವರು, ಗಹ ಇಲಾಖೆ ವತಿಯಿಂದ
(ಸಿಟಿಆರ್ಎಸ್) ಅಡಿಯಲ್ಲಿ ಸಿಸಿ ಕ್ಯಾಾಮೆರಾ ಕಾಮಗಾರಿ ಪ್ರಗತಿಯಲ್ಲಿದೆ.
ಪಟ್ಟಣದ ವ್ಯಾಾಪ್ತಿಿಯಲ್ಲಿ ಪ್ರಮುಖ ಸ್ಥಳಗಳು ಗುರುತಿಸಿ ನೂತನ ತಾಂತ್ರಿಿಕವುಳ್ಳ ಡೇ-ನೈಟ್ ಸ್ವಚ್ಚವಾಗಿ ಕಾಣುವ ಹೈ ಕ್ವಾಾಲಿಟಿವುಳ್ಳ ಸಿಸಿ ಕ್ಯಾಾಮರಾಗಳು ಅಂದಾಜು 100-200ಮೀಟರ್ವರೆಗೆ ಸ್ವಷ್ಟವಾಗಿ ಕಾಣುವ ಕ್ಯಾಾಮರಾಗಳು ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದೆ.
ಎತ್ತರ ಹೆಚ್ಚಿಿಸಬೇಕು ಕಡಿಮೆ ಮಾಡಬೇಕು ಎಂಬುವುದು ಮತ್ತು ಸಿಸಿ ಕ್ಯಾಾಮೆರಾಗಳಲ್ಲಿ ರಸ್ತೆೆಗೆ ಹೋಗುವ ವಾಹನಗಳ ನಂಬರ್ ಪ್ಲೇಟ್ ಚೆನ್ನಾಾಗಿ ಕಾಣುವಂತೆ ಕಾಮಗಾರಿ ನಡೆಸುವಂತೆ ಈಗಾಗಲೇ ಕಾಮಗಾರಿ ವೀಕ್ಷಿಸಿ ನಿರ್ದೇಶನ ನೀಡಿದ್ದೇನೆ ಎಂದು ಹೇಳಿದರು.
ಡಿವೈಎಸ್ಪಿಿ ಸಂಗಮನಾಥ ಹಿರೇಮಠ, ಸಿ ಪಿ ಐ ಕಪಿಲದೇವ,ಪಿಎಸ್ಐ ಗಂಗಮ್ಮ ಜೀನಕೇರಿ,ಪಿಎಸ್ಐ ಅಮರ ಕುಲಕರ್ಣಿ ಮತ್ತು ಶಿವಶಂಕರ ಸುಭೇದಾರ, ಮಿರಿಯಾಣ ಪಿಎಸ್ಐ ಮಡಿವಾಳಪ್ಪ ಬಾಗೋಡಿ, ಮಲ್ಲಿಕಾರ್ಜುನ ಕಲಬುರ್ಗಿ ಸೇರಿದಂತೆ ಪೋಲಿಸರು ಸಿಬ್ಬಂದಿಗಳು ಇದ್ದರು.
ಅಕ್ರಮ ಚಟುವಟಿಕೆ ಮತ್ತು ಕಳ್ಳತನ ಪತ್ತೆ ಹಚ್ಚಲು ಸಿಸಿ ಕ್ಯಾಾಮೆರಾ ಪೊಲೀಸರಿಗೆ ಅನುಕೂಲ ; ಎಸ್.ಪಿ ಅದ್ದೂರು ಶ್ರೀನಿವಾಸಲು

