ಸುದ್ದಿಮೂಲ ವಾರ್ತೆ
ದೇವನಹಳ್ಳಿ,ಸೆ.25: ತಾಲೂಕಿನ ಮಿನಿ ವಿಧಾನಸೌಧದ 2 ನೇ ಮಹಡಿಯಲ್ಲಿರುವ ಉಪನೋಂದಣಾಧಿಕಾರಿಗಳ ಕಚೇರಿಯನ್ನು ನೆಲಹಮಡಿಗೆ ಸ್ಥಳಾಂತರಿಸಿ ವಯೋವೃದ್ದರು, ಅಂಗವಿಕಲರಿಗೆ ಅನುಕೂಲಮಾಡಿಕೊಡಬೇಕು ಎಂದು ಬಿದಲೂರು ಗ್ರಾಮಪಂಚಾಯತಿ ಅಧ್ಯಕ್ಷ ಎಸ್.ಪಿ.ಮುನಿರಾಜು ಒತ್ತಾಯಿಸಿದ್ದಾರೆ.
ಬಳಿಕ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕಿನಾದ್ಯಂತ ಅತಿ ಹೆಚ್ಚು ನೊಂದಣಿ ಶುಲ್ಕ ಸಂಗ್ರಹವಾಗುವ ದೇವನಹಳ್ಳಿ ಉಪ ನೋಂದಣಿ ಕಛೇರಿಗೆ ಪ್ರತಿನಿತ್ಯ ನೂರಾರು ಜನ ನೋಂದಣಿಗೆ ಬರುತ್ತಾರೆ. ಆದರೆ, ಬರುವರು ವಯೋವೃದ್ದರು, ವಿಶೇಷಚೇತನರು ಎರಡನೇ ಮಹಡಿ ಹತ್ತಿಲಿಕ್ಕಾಗದೆ ಪೋಷಕರು ವಯೋವೃದ್ದರು ಹಾಗೂ ವಿಕಲಚೇತನರನ್ನು ಎತ್ತು ತಂದು ನೋಂದಣೆ ಮಾಡುವ ಪರಿಸ್ಥಿತಿ ಬಂದಿದೆ.
ಅಂಗವಿಕಲರಿಗೆ ವೀಲ್ ಚೇರ್ ವ್ಯವಸ್ಥೆ ಮಾಡಬೇಕು ಹಾಗೂ ಕಚೇರಿಯ ಹೊರಭಾಗದಲ್ಲಿ ಕುಳಿತುಕೊಳ್ಳಲು ಸರಿಯಾದ ಆಸನದ ವ್ಯವಸ್ಥೆ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸಹ ಇಲ್ಲದೆ ಪರದಾಡುವಂತಾಗಿದೆ. ಈಗಿರುವ ಉಪನೋಂದನಾಣಾಧಿಕಾರಿಗಳ ಕಚೇರಿಯನ್ನು ನೆಲಮಹಡಿಗೆ ಸ್ಥಳಾಂತರಿಸಿ ಇಲ್ಲವೆ ಎರಡನೆ ಮಹಡಿಗೆ ಲಿಪ್ಟ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.