ಸುದ್ದಿಮೂಲ ವಾರ್ತೆ ರಾಯಚೂರು, ೆ.12:
ನಗರದ ಜಿಲ್ಲಾಾ ಕಾರಾಗೃಹಕ್ಕೆೆ ದಿಢೀರ್ ಭೇಟಿ ನೀಡಿದ ಜಿಲ್ಲಾಾ ಪೊಲೀಸ್ ವರಿಷ್ಠಾಾಧಿಕಾರಿ ಅರುಣಾಂಗ್ಷು ಗಿರಿ ಅವರು ಕಾನೂನು ಬಾಹಿರ ಕೆಲಸಗಳು ಮಾಡದಂತೆ ಆರೋಪಿಗಳಿಗೆ ಸೂಚಿಸಿದರು.
ದಿಢೀರ್ ಜೈಲಿಗೆ ಭೇಟಿ ನೀಡಿದ ಅವರು, ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿ ಬಂಧಿಯಾಗಿರುವವರ ಮಾಹಿತಿ ಪಡೆದ ಅವರು, ಕಾನೂನು ಬಾಹಿರವಾಗಿ ಯಾವುದೆ ವಸ್ತುಗಳು ತಮ್ಮ ಬಳಿ ಇರಿಸಿಕೊಳ್ಳುವಂತಿಲ್ಲಘಿ ಸೇವಿಸಲೂ ಬಾರದು ಎಂದು ಸೂಚಿಸಿದರು.
ಒಂದೊಮ್ಮೆೆ ಆ ರೀತಿ ನಿಯಮ ಮೀರಿದರೆ ಮುಂದೆ ಕಾನೂನು ಮತ್ತಷ್ಟು ಬಿಗಿ ಕ್ರಮ ವಹಿಸಲಿದ್ದು ತಮ್ಮ ಪ್ರಕರಣದ ಮೇಲೆ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದರು.
ಅಪರಾಧಿಗಳ ಜೊತೆ ಸಂವಾದಿಸಿದ ಅವರು ಅವರ ಪೂರ್ವಾಪರ ಮಾಹಿತಿ ಪಡೆದರು. ಜೈಲಾಧಿಕಾರಿಗಳಿಗೆ ಈ ಬಗ್ಗೆೆ ನಿಗಾ ವಹಿಸಲು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಡಿಎಆರ್ನ ಡಿಎಸ್ಪಿ ಪ್ರಮಾನಂದ ಗೋಡ್ಕೆೆ ಇತರೆ ಅಧಿಕಾರಿ ಸಿಬ್ಬಂದಿಗಳಿದ್ದರು.
ಕಾರಾಗೃಹಕ್ಕೆ ಎಸ್ಪಿ ಭೇಟಿ; ಕಾನೂನು ಬಾಹಿರ ಕೆಲಸ ಮಾಡದಂತೆ ತಾಕೀತು

