ಸುದ್ದಿಮೂಲ ವಾರ್ತೆ ರಾಯಚೂರು, ಜ.10:
ಜೀವನ ಯೋಜನೆಗೆ ಅರ್ಥಶಾಸದ ಅನ್ವಯ ಮುಖ್ಯ ಪಾತ್ರವಹಿಸುತ್ತದೆ. ನಮ್ಮ ಸೀಮಿತ ಸಂಪನ್ಮೂಲಗಳಾದ ಹಣ, ಸಮಯ, ಶ್ರಮಗಳನ್ನು ಬಳಸಿಕೊಂಡು ಜೀವನ ಗುರಿಗಳನ್ನು ಮತ್ತು ಕನಸುಗಳನ್ನು ಸಾಧಿಸಲು ವೈಯಕ್ತಿಿಕ, ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ಒಳಗೊಂಡಿದ್ದು, ಹಣಕಾಸು ಭವಿಷ್ಯದ ಭದ್ರತೆಗೆ ಅತ್ಯಗತ್ಯವಾಗಿದೆ ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಾನಿಲಯದ ಕುಲಪತಿ ಪ್ರೊೊ.ಶಿವಾನಂದ ಕೆಳಗಿನಮನಿ ಹೇಳಿದರು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಾನಿಲಯದ ಸಭಾಂಗಣದಲ್ಲಿ ಅರ್ಥಶಾಸ ವಿಭಾಗದಿಂದ ಶುಕ್ರವಾರ ಆಯೋಜಿಸಲಾಗಿದ್ದ ಮೂಲ ಅರ್ಥಮಾಪನಶಾಸ್ತ ಪರಿಚಯ’ ಎನ್ನುವ ವಿಷಯ ಕುರಿತ ವಿಶೇಷ ಉಪನ್ಯಾಾಸ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದ ಅವರು, ಅರ್ಥಶಾಸವು ಹಣಕಾಸು ನಿರ್ವಹಣೆಯಿಂದ ಹಿಡಿದು ರಾಷ್ಟಿಿಥಯ, ಜಾಗತಿಕ ಮಟ್ಟದ ನೀತಿಗಳವರೆಗೆ ನಮ್ಮ ಜೀವನದ ಪ್ರತಿ ಹಂತದಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಜಾಗತೀಕರಣ ಮತ್ತು ತಾಂತ್ರಿಿಕ ಪ್ರಗತಿಯನ್ನು ತಿಳಿಸುವ ಆಧುನಿಕ ವಿಧಾನಗಳವರೆಗೆ ವಿಕಸಗೊಂಡಿರುವ ಅರ್ಥಶಾಸ್ತ ನೀತಿಗಳನ್ನು ರೂಪಿಸುವಲ್ಲಿ ಮತ್ತು ಬಡತನ, ಹಣದುಬ್ಬರ ಹಾಗೂ ನಿರುದ್ಯೋೋಗದಂತಹ ಸಮಕಾಲೀನ ಸವಾಲುಗಳನ್ನು ಪರಿಹರಿಸುತ್ತದೆ ಎಂದು ಹೇಳಿದರು.
ದಾವಣಗರೆ ವಿಶ್ವವಿದ್ಯಾಾಲಯದ ಶಿವಗಂಗೋತ್ರಿಿಯ ಅರ್ಥಶಾಸ ವಿಭಾಗದ ಹಿರಿಯ ಪ್ರಾಾಧ್ಯಾಾಪಕ ಪ್ರೊೊ.ರಂಗಪ್ಪ ಕೆ.ಬಿ.ಅವರು ತಮ್ಮ ಉಪನ್ಯಾಾಸ ಮಂಡಿಸುತ್ತಾಾ, ನಮ್ಮ ಯುವಜನರ ಬದುಕನ್ನು ನಿರುದ್ಯೋೋಗದ ಸಮಸ್ಯೆೆ ತುಂಬಾ ಕಾಡುತ್ತಿಿದೆ. ತೀವ್ರಗತಿಯಲ್ಲಿ ಏರಿಕೆಯಾಗುತ್ತಿಿರುವ ಹಣದುಬ್ಬರವು ಆರ್ಥಿಕತೆ ದುರ್ಬಲಗೊಳಿಸುತ್ತಿಿದೆ. ಕೌಶಲ್ಯ ಬೇಡಿಕೆ ಕೊರತೆಯಿಂದ ಉದ್ದಿಮೆ ರಂಗದಲ್ಲಿ ಉತ್ಪಾಾದನೆ ಕುಸಿದಿದೆ. ಬೋಧನೆಯ ಜೊತೆಗೆ ವಿದ್ಯಾಾರ್ಥಿಗಳಲ್ಲಿ ಸೃಜಶೀಲ ಕೌಶಲ್ಯಗಳನ್ನು ಬೆಳಸುವುದು ಮುಖ್ಯವಾಗಿದೆ. ಆರ್ಥಿಕ ಸಿದ್ಧಾಾಂತಗಳನ್ನು ಪರೀಕ್ಷಿಸಲು ಗಣಿತಶಾಸ ಮತ್ತು ಸಂಖ್ಯಾಾಶಾಸ್ತದ ವಿಧಾನಗಳನ್ನು ಬಳಸುವ ಒಂದು ಶಾಖೆ ಅರ್ಥಮಾಪನಶಾಸವಾಗಿದ್ದು. ಆರ್ಥಿಕ ದತ್ತಾಾಂಶವನ್ನು ವಿಶ್ಲೇಷಿಸಿ, ನೈಜ ಪ್ರಪಂಚದ ಆರ್ಥಿಕ ವಿದ್ಯಾಾಮಾನಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದರು.
ಡೀನರು ಹಾಗೂ ಹಿರಿಯ ಪ್ರಾಾಧ್ಯಾಾಪಕರುಗಳಾದ ಪ್ರೊೊ. ಪಿ.ಭಾಸ್ಕರ, ಅಧ್ಯಕ್ಷೀಯ ನುಡಿಗಳನ್ನಾಾಡಿದರು, ಪ್ರೊೊ.ಪಾರ್ವತಿ ಸಿ.ಎಸ್., ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಂಥಪಾಲಕ ಡಾ.ಜಿ.ಎಸ್.ಬಿರಾದರ, ವಿಭಾಗದ ಉಪನ್ಯಾಾಸಕ ಡಾ.ಶಂಕರಾನಂದ ಜಿ, ದುರುಗಪ್ಪ ಗಣೇಕಲ್ ಹಾಗೂ ಶಿವರಾಜ ಹರವಿ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾಾರ್ಥಿಗಳು ಉಪಸ್ಥಿಿತರಿದ್ದರು.
ಡಾ.ನಾಗರಾಜ ಕೆ. ಅತಿಥಿಗಳನ್ನು ಪರಿಚಯಿಸಿದರು, ರಾಮಚಂದ್ರಪ್ಪ ಪ್ರಾಾಸ್ತಾಾವಿಕ ನುಡಿಗಳನ್ನಾಾಡಿದರು, ವಿಭಾಗದ ವಿದ್ಯಾಾರ್ಥಿಗಳಾದ ನರಸಮ್ಮ ಪ್ರಾಾರ್ಥಿಸಿದರು, ರಾಮಾಂಜನೇಯ ಸ್ವಾಾಗತಿಸಿದರು, ಸಂಗೀತಾ ನಿರೂಪಿಸಿದರು,ಮಹೇಂದ್ರ ಕುಮಾರ ವಂದಿಸಿದರು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದಲ್ಲಿ ವಿಶೇಷ ಉಪನ್ಯಾಸ ಅರ್ಥವ್ಯವಸ್ಥೆ ಭವಿಷ್ಯದ ಭದ್ರತೆಗೆ ಅತ್ಯಗತ್ಯ : ಪ್ರೊ.ಶಿವಾನಂದ ಕೆಳಗಿನಮನಿ

