ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ,ಅ.15: ತಾಲ್ಲೂಕಿನ ಮಳ್ಳೂರು ಸಮೀಪದ ಭಟ್ರೇನಹಳ್ಳಿಯ ಶ್ರೀ ಸಾಯಿನಾಥ ಜ್ಞಾನ ಮಂದಿರದಲ್ಲಿ ನವರಾತ್ರಿಯ ಮೊದಲನೇ ದಿನದ ಅಂಗವಾಗಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಅಪ್ಪಾಜಿ, ಭಗವಂತ ಕೇವಲ ಪೂಜಿಸುವ ವಸ್ತುವಲ್ಲ. ಪ್ರತಿ ಸ್ಪರ್ಧಿಸುವ ಮಹಾ ಚೈತನ್ಯ. ದೇವರನ್ನು ಪೂಜಿಸಲು ಶ್ರದ್ದೆ, ಭಕ್ತಿ, ಶಿಸ್ತು ಮುಖ್ಯ.
ಭಟ್ರೇನಹಳ್ಳಿಯ ಶ್ರೀ ಸಾಯಿನಾಥ ಜ್ಞಾನ ಮಂದಿರವೂ ಅಪಾರ ಭಕ್ತ ಜನರನ್ನು ಹೊಂದಿದೆ. ಈ ಮಂದಿರವೂ ಶಿರಡಿ ಮಾದರಿಯಲ್ಲಿ ಸ್ಥಾಪಿಸಿದ್ದು. ಮುಂದಿನ ದಿನಗಳಲ್ಲಿ ಈ ದೇವಾಲಯ ಧಾರ್ಮಿಕ ಪುಣ್ಯ ಕ್ಷೇತ್ರವಾಗಿ ಬಹು ಏತ್ತರಕ್ಕೆ ಬೆಳೆಯಲಿದೆ ಎಂದು ಹೇಳಿದರು.
ಈ ದೇವಾಲಯವೂ ಆದ್ಯಾತ್ಮಿಕವಾಗಿ ತನ್ನದೇ ಆದ ಶೈಲಿಯನ್ನು ಹೊಂದಿದೆ. ಬಾಬಾ ರವರ ಅಗಾಧವಾದ ಗುಣಾತ್ಮಕ ಶಕ್ತಿ ಇಲ್ಲಿ ಅಡಗಿದೆ ಎಂದು ಭವಿಷ್ಯ ನುಡಿದರು.
ಬೆಳಗ್ಗೆ ಇಂದಲೇ ದೇವಾಲಯದಲ್ಲಿ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಅಪ್ಪಾಜಿ ಅವರ ನೇತೃತ್ವದಲ್ಲಿ ವಿಶೇಷ ಶ್ರೀ ಚಕ್ರ ಪೂಜೆ ಸೇರಿದಂತೆ ಲಲಿತಾ ಸಹಸ್ರನಾಮ, ಕುಂಕುಮ ಅರ್ಚನೆಯನ್ನು ಮಾಡಲಾಯಿತು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ಮತ್ತು ದೇವಿ ಸ್ವರೂಪಿ ಅಪ್ಪಾಜಿರವರ ದರ್ಶನ ಪಡೆದರು.