ಸುದ್ದಿಮೂಲ ವಾರ್ತೆ ರಾಯಚೂರು, ಡಿ.20;
ಪ್ರತಿಯೊಂದು ದತ್ತಾಾಂಶ ರಚನೆಯು ದತ್ತಾಾಂಶ ಸಂಗ್ರಹಿಸುವ ಮತ್ತು ಸಂಸ್ಕರಿಸುವ ತನ್ನದೇ ಆದ ವಿಶಿಷ್ಟ ವಿಧಾನವನ್ನು ಹೊಂದಿದೆ ಮತ್ತು ಪರಿಸ್ಥಿಿತಿಯ ಅಗತ್ಯಕ್ಕೆೆ ಅನುಗುಣವಾಗಿ ಬಳಸಲಾಗುತ್ತದೆ ಎಂದು ಕುವೆಂಪು ವಿಶ್ವವಿದ್ಯಾಾಲಯದ ಕಂಪ್ಯೂೂಟರ್ ಸೈನ್ಸ್ ವಿಭಾಗದ ಸಹ ಪ್ರಾಾಧ್ಯಾಾಪಕರಾದ ಡಾ.ಸುರೇಶ ಎಂ. ಅವರು ವಿಶೇಷ ಉಪನ್ಯಾಾಸ ನೀಡಿದರು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಾನಿಲಯದ ಕಂಪ್ಯೂೂಟರ್ ಸೈನ್ಸ್ ವಿಭಾಗದ ವತಿಯಿಂದ ಡೇಟಾ ಸ್ಟ್ರಕ್ಚರ್ ಯೂಸಿಂಗ್ ಸೀ ವಿಷಯ ಕುರಿತು ಇಂದು ವಿಶೇಷ ಉಪನ್ಯಾಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿ-ಯಲ್ಲಿನ ಡೇಟಾ ರಚನೆ ಎನ್ನುವುದು ಕಂಪ್ಯೂೂಟರ್ ಮೆಮೋರಿಯಲ್ಲಿ ದತ್ತಾಾಂಶವನ್ನು ಸಂಗ್ರಹಿಸುವ ಮತ್ತು ಸಂಘಟಿಸುವ ಒಂದು ವರ್ಗವಾಗಿದ್ದು, ಅದನ್ನು ಪರಿಣಾಮಕಾರಿಯಾಗಿ ಸಂಸ್ಕರಿಸಬಹುದು. ರೇಖೀಯ ದತ್ತಾಾಂಶ ರಚನೆಗಳು ಅರೇಗಳು, ಸ್ಟ್ಯಾಾಕ್ಗಳು, ಕ್ಯೂಗಳು, ಲಿಂಕ್ಡ್ಲೀಸ್ಟ್ನ್ನು ಒಳಗೊಂಡಿರುತ್ತವೆ ಮತ್ತು ರೇಖಾತ್ಮಕವಲ್ಲದ ದತ್ತಾಾಂಶ ರಚನೆಗಳು ಟ್ರೀೀಗಳು ಮತ್ತು ಗ್ರಾ್ಾಗಳನ್ನು ಒಳಗೊಂಡಿರುತ್ತದೆ. ಡೇಟಾ ಸ್ಟ್ರಕ್ಚರ್ ಕಲಿಕೆಯಿಂದ ಸುಲಭ ಮಾರ್ಗವಾಗಿ ಸ್ಟಾ ವೇರ್ನ್ನು ಅಭಿವೃದ್ಧಿಿಗೊಳಿಸಬಹುದು ಎಂದು ಅವರು ಹೇಳಿದರು.
ವಾಲ್ಮೀಕಿ ವಿವಿಯ ಕುಲಸಚಿವ ಡಾ.ಎ.ಚನ್ನಪ್ಪ ಕೆ.ಎ.ಎಸ್. ಮಾತನಾಡಿ ವಿಭಾಗದಲ್ಲಿ ಏರ್ಪಡಿಸುತ್ತಿಿರುವ ವಿಶೇಷ ಉಪನ್ಯಾಾಸ ಕಾರ್ಯಕ್ರಮಗಳನ್ನು ಅದರ ಜೊತೆಗೆ ವಿಶ್ವವಿದ್ಯಾಾಲಯದಲ್ಲಿ ಹಮ್ಮಿಿಕೊಳ್ಳುತ್ತಿಿರುವ ಶೈಕ್ಷಣಿಕ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಶುಭಾಶಯ ನುಡಿದರು.
ಡೀನರು ಹಾಗೂ ಮುಖ್ಯಸ್ಥರಾದ ಪ್ರೊೊ.ಪಿ.ಭಾಸ್ಕರ್ ಮಾತನಾಡಿ ಡೇಟಾ ಸ್ಟ್ರಕ್ಚರ್ ಯುಸಿಂಗ್ ಸೀ ಅಭ್ಯಾಾಸದಿಂದ ವಿವಿಧ ಆ್ಯಪ್ಗಳನ್ನು ಸೃಜಿಸಲು ಸಹಕಾರಿಯಾಗಬಲ್ಲದು ಎಂದು ಹೇಳಿದರು.
ಗಣಕ ವಿಜ್ಞಾಾನ ವಿಭಾಗದ ಅತಿಥಿ ಉಪನ್ಯಾಾಸಕರಾದ ಡಾ.ಮಹ್ಮದ್ ಇಲಿಯಾಸ್ ಅತಿಥಿಯನ್ನು ಪರಿಚಯಿಸಿ ನಿರೂಪಿಸಿದರು. ನಿಕತ್ ಸುಲ್ತಾಾನಾ ಸ್ವಾಾಗತಿಸಿದರೆ ದಿವ್ಯಾಾ ಡೋರ್ಕಸ್ ವಂದಿಸಿದರು. ವಿವಿಧ ವಿಭಾಗಗಳ ಉಪನ್ಯಾಾಸಕರು, ಬೋಧಕೇತರ ಸಿಬ್ಬಂದಿ ವರ್ಗ, ವಿದ್ಯಾಾರ್ಥಿಗಳು ಉಪಸ್ಥಿಿತರಿದ್ದರು.
ವಾಲ್ಮೀಕಿ ವಿವಿಯ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಡಾ.ಸುರೇಶ ಎಂ. ಅವರಿಂದ ವಿಶೇಷ ಉಪನ್ಯಾಸ

