ಸುದ್ದಿಮೂಲ ವಾರ್ತೆ ರಾಯಚೂರು, ಜ.04:
ಗಜಲ್ಗಳು ಒಂದೇ ವಿಷಯ ಒಂದೇ ತರಹದ ದೃಷ್ಟಿಿಕೋನ ಇಟ್ಟುಕೊಂಡು ಮಾತನಾಡದೆ ಸಾವಿರಾರು ಚಿಂತನೆಗಳಿಂದ ಹತ್ತು ಹಲವು ವಿಚಾರಗಳನ್ನು ಪ್ರತಿಪಾದಿಸುತ್ತವೆ ಎಂದು ಕಲಬುರ್ಗಿಯ ಗುಲ್ಬರ್ಗಾ ವಿಶ್ವವಿದ್ಯಾಾಲಯದ ಉರ್ದು ಅಧ್ಯಯನ ವಿಭಾಗದ ಮುಖ್ಯಸ್ಥರು ಮತ್ತು ಹಿರಿಯ ಪ್ರಾಾಧ್ಯಾಾಪಕ ಪ್ರೊೊ.ಅಬ್ದುಲ್ರಬ್ ಉಸ್ತಾಾದ ಅವರು ಹೇಳಿದರು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಾನಿಲಯದ ಸಭಾಂಗಣದಲ್ಲಿ ಉರ್ದು ಮತ್ತು ಪರ್ಶಿಯನ್ ವಿಭಾಗದ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ಉರ್ದು ಶಾಯರಿ ಕುರಿತು ವಿದ್ವತ್ ಪೂರ್ಣವಾಗಿ ವಿಶೇಷ ಉಪನ್ಯಾಾಸ ಪ್ರಸ್ತುತಪಡಿಸಿದ ಅವರು, ಬದುಕಿನ ಎಲ್ಲಾಾ ರಂಗಗಳ ಹೂರಣದಿಂದ ಸಾಮಾಜಿಕ ಕಳಕಳಿ ಮತ್ತು ವಿಶ್ವ ಮಾನವತೆಯ ತುಡಿತದಿಂದ ಭೂತ ಭವಿಷತ್ವ ವರ್ತಮಾನಗಳ ಬೆಳಕಿನಿಂದ ಗಜಲ್ಗಳು ಮಾತನಾಡುತ್ತವೆ. ಗಜಲ್ ಎಂದರೆ ಆಳವಾದ ಭಾವನೆ, ಪ್ರೇೇಮಿಗಳ ಸಂವಾದ, ಭಾವುಕ ಜೀವಿಗಳ ಸೂಕ್ಷ್ಮ ಸಂವೇದನೆ, ವಿರಹ ವೇದನೆ ಪ್ರೇೇಮ ನಿವೇದನೆ ಮತ್ತು ಪ್ರೀೀತಿಸುವ ಹೃದಯಗಳ ಚಡಪಡಿಕೆ. ಮಿರ್ಜಾಗಾಲಿಬ್, ಇಕ್ಬಾಾಲ್, ಗುಲ್ಜಾಾರ್, ರೂಮಿ ಆಘಾ ಶಾಹಿದ್ ಅಲಿ ಮುಂತಾದ ಕವಿಗಳು ಗಜಲ್ ಕಾವ್ಯದಲ್ಲಿ ಸಾಕಷ್ಟು ಕೊಡುಗೆಗೈದಿದ್ದಾಾರೆ ಇವರು ರಚಿಸಿದ ಕೆಲವು ಗಜಲ್ ಕಾವ್ಯಗಳನ್ನು ಶಾಯರಿಗಳನ್ನು ಹಾಡುವ ಮೂಲಕ ವಿಶ್ಲೇಷಿಸಿದರು. ಇಂದಿನ ವೇಗದ ಜೀವನದಲ್ಲಿ ಮಾನಸಿಕ ಶಾಂತಿ ನೆಮ್ಮದಿ ಹುಡುಕುವವರೆಗೆ ಗಜಲ್ ಒಂದು ಉತ್ತಮ ಮಾರ್ಗವಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉರ್ದು ವಿಭಾಗದ ಮುಖ್ಯಸ್ಥರಾದ ಪ್ರೊೊ.ಪಾರ್ವತಿ ಸಿ.ಎಸ್ ಮಾತನಾಡಿ, ಗಜಲ್ ಇಂದಿಗೂ ತನ್ನ ಕಾವ್ಯ ಸೌಂದರ್ಯದಿಂದಾಗಿ ನಮ್ಮ ಜೀವನದಲ್ಲಿ ಭಾವನಾತ್ಮಕವಾಗಿ ಕಾವ್ಯದ ಮೂಲಕ ಸಂಪರ್ಕಿಸಿ ಮನಸ್ಸಿಿಗೆ ಮುದ ನೀಡುತ್ತವೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಕುಲಸಚಿವರು(ಮೌಲ್ಯಮಾಪನ) ಪ್ರೊೊ.ಜ್ಯೋೋತಿ ಧಮ್ಮ ಪ್ರಕಾಶ್, ಉಪಕುಲಸಚಿವರು ಡಾ.ಕೆ.ವೆಂಕಟೇಶ, ಎನ್ಎಸ್ಎಸ್ ಅಧಿಕಾರಿ ಡಾ.ಜಿ.ಎಸ್.ಬಿರಾದಾರ, ಉರ್ದು ವಿಭಾಗದ ಅತಿಥಿ ಉಪನ್ಯಾಾಸಕರಾದ ಡಾ.ಜೋಹರಾ ಜಬೀನ, ಡಾ.ಹಬೀಬ ಖಾನ್ ಹಾಗೂ ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಉಪನ್ಯಾಾಸಕರು, ವಿದ್ಯಾಾರ್ಥಿಗಳು ಉಪಸ್ಥಿಿತರಿದ್ದರು.
ವಿಭಾಗದ ಸಂಯೋಜಕರಾದ ಸಾವಿತ್ರಿಿ ಕಟ್ನಳಿ ಪ್ರಾಾಸ್ತಾಾವಿಕ ಮಾತನಾಡಿದರು, ವಿದ್ಯಾಾರ್ಥಿಗಳಾದ ಜವೇರಿಯಾ ಪ್ರಾಾರ್ಥಿಸಿದರು, ನಫೀಸ್ ಬೇಗಂ ಸ್ವಾಾಗತಿಸಿದರು, ಆಸಿಯಾ ಬೇಗಂ ನಿರೂಪಿಸಿದರು, ಸೈಯದಾರಿಂಶಾ ಅತಿಥಿಯನ್ನು ಪರಿಚಯಿಸಿದರು, ಅಪ್ರೋೋಜಸುಲ್ತಾಾನ ವಂದಿಸಿದರು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿವಿ : ಉರ್ದು ವಿಭಾಗದಲ್ಲಿ ಉರ್ದು ಶಾಯರಿ ಕುರಿತು ವಿಶೇಷ ಉಪನ್ಯಾಾಸ ಮಾನಸಿಕ ನೆಮ್ಮದಿಗಾಗಿ ಗಜಲ್ ಉತ್ತಮ ಮಾರ್ಗವಾಗಿದೆ : ಪ್ರೊ.ಅಬ್ದುಲ್ರಬ್ ಉಸ್ತಾಾದ

