ಸುದ್ದಿಮೂಲ ವಾರ್ತೆ ರಾಯಚೂರು, ಜ.06:
ರಾಜ್ಯದ ದೀರ್ಘಾವಧಿ ಮುಖ್ಯಮಂತ್ರಿಿಯಾಗಿ ದಾಖಲೆ ಮಾಡಿದ ಸಿಎಂ ಸಿದ್ದರಾಮಯ್ಯ ಅವರ ಒಳಿತಿಗಾಗಿ ಯುವ ಕುರುಬರ ಜಿಲ್ಲಾಾ ಸಂಘದಿಂದ ಶ್ರೀ ಸಾಯಿಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಇಂದು ಬೆಳಿಗ್ಗೆೆ ನಗರದ ಉದ್ಯಾಾನವನದ ಆವರಣದಲ್ಲಿರುವ ಶ್ರೀ ಸಾಯಿ ಧ್ಯಾಾನಮಂದಿರದಲ್ಲಿ ಕರ್ನಾಟಕ ಪ್ರದೇಶ ಯುವ ಕುರುಬರ ರಾಯಚೂರು ಸಂಘದ ಪದಾಧಿಕಾರಿಗಳು ವಿಶೇಷ ಪೂಜೆ ಸಲ್ಲಿಸಿದರು.
ಕರ್ನಾಟಕದಲ್ಲಿ ಉತ್ತಮ ಆಡಳಿತ ನೀಡಿ ದುರ್ಬಲ ವರ್ಗದವರಿಗಾಗಿ ಅನ್ನಭಾಗ್ಯ, ಶಕ್ತಿಿ ಸೇರಿ ಪಂಚಗ್ಯಾಾರಂಟಿ ಯೋಜನೆ ತರುವ ಮೂಲಕ ಜನಮಾನಸದಲ್ಲಿ ಉಳಿಯುವಲ್ಲಿ ಮುಖ್ಯಮಂತ್ರಿಿ ಸಿದ್ದರಾಮಯ್ಯ ದಾಖಲೆಯೂ ಬರೆದಿದ್ದಾಾರೆ ಎಂದು ಯುವ ಘಟಕದ ಜಿಲ್ಲಾಾಧ್ಯಕ್ಷ ರಮೇಶ ಮೂಡಲದಿನ್ನಿಿ ಹರ್ಷ ವ್ಯಕ್ತಪಡಿಸಿದರು.
ಅವರ ಮುಂದಿನ ಅಧಿಕಾರ, ಆಡಳಿತದಲ್ಲಿ ಮತ್ತಷ್ಟು ಕ್ರಿಿಯಾಶೀಲವಾಗಿ ಸೇವೆ ಮಾಡಲು ವಿಶೇಷ ಪೂಜೆ ಮಾಡುವ ಮೂಲಕ ದೈವದ ಆಶೀರ್ವಾದ ಸಿಎಂ ಸಿದ್ದರಾಮಯ್ಯರಿಗೆ ಸಿಗಲಿ ಎಂದು ಪ್ರಾಾರ್ಥಿಸಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಸಾನಿಧ್ಯವನ್ನು ಟ್ರಸ್ಟ್ನ ಮುಖ್ಯಸ್ಥ ಸಾಯಿ ಕಿರಣ ಆದೋನಿ ವಹಿಸಿದ್ದರು. ಪ್ರ.ಕಾರ್ಯದರ್ಶಿ ಕೆ.ನರಸಣ್ಣ ಶಾಸಿ, ಕಾರ್ಯಾಧ್ಯಕ್ಷ ಕೆ.ತಿಮ್ಮಪ್ಪ ಮರ್ಚಟಹಾಳ, ತಾಲೂಕಾಧ್ಯಕ್ಷ ಕೆ.ವೀರೇಶ್, ಡಿ.ರಾಂಪುರು, ಮುಖಂಡರಾದ ಹನುಮೇಶ ಮರ್ಚಟಹಾಳ, ಗೂಳಪ್ಪ ವಿಷ್ಣು ಬೊಮ್ಮನಾಳ, ಗುರು ಪ್ರತಾಪ್, ಎಂ ಕೆ ಮಲ್ಲಿಕಾರ್ಜುನ್, ಶ್ಯಾಾಮಮೂರ್ತಿ, ನವೀನ್ ಕುಮಾರ, ಲಕ್ಷ್ಮಣ ಮೈಲಾರಿ, ಅಂಬರೀಶ ಗಧಾರ, ಈರಣ್ಣ ಜೆ ಮಲ್ಲಪೂರು, ಮಲ್ಲರೆಡ್ಡಿಿಗೌಡ ಮರ್ಚೆಟ್ಹಾಾಳ, ವೆಂಕಟೇಶ ಮರ್ಚೆಟ್ಹಾಾಳ ಸೇರಿ ಹಲವರಿದ್ದರು.
ಯುವಕುರುಬರ ಸಂಘದಿಂದ ಶ್ರೀ ಸಾಯಿಮಂದಿರದಲ್ಲಿ ವಿಶೇಷ ಪೂಜೆ ಸುದೀರ್ಘ ಸಿದ್ದರಾಮಯ್ಯ ಸಿಎಂ ದಾಖಲೆಗೆ ಹರ್ಷ

