ಸುದ್ದಿಮೂಲ ವಾರ್ತೆ
ಬೆಂಗಳೂರು, ಅ.13 : ದಸರಾ ಹಬ್ಬದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ರೈಲುಗಳ ಸಂಚಾರ ಇರಲಿದೆ. ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಕಡಿಮೆ ಮಾಡುವ ಸಲುವಾಗಿ ಮೈಸೂರು – ಬೆಂಗಳೂರು ಮತ್ತು ಮೈಸೂರು – ಚಾಮರಾಜನಗರ ನಿಲ್ದಾಣಗಳ ನಡುವೆ ವಿಶೇಷ ರೈಲುಗಳನ್ನು ಓಡಿಸಲು ನೈರುತ್ಯ ರೈಲ್ವೆ ವಲಯವು ನಿರ್ಧರಿಸಿದೆ. ಅ. 20 ರಿಂದ 24ರವರೆಗೆ ಹೆಚ್ಚುವರಿ ರೈಲುಗಳ ಸಂಚಾರ ಇರಲಿದೆ.
ರೈಲು ಸಂಖ್ಯೆ 06279/06280 ಮೈಸೂರು-ಕೆ.ಎಸ್.ಆರ್ ಬೆಂಗಳೂರು-ಮೈಸೂರು ಕಾಯ್ದಿರಿಸದ ವಿಶೇಷ ಇರಲಿದೆ. ಈ ವಿಶೇಷ ರೈಲು ಅ. 20 ರಿಂದ 24 ರವರೆಗೆ ಇರಲಿದೆ. ರಾತ್ರಿ 11:15 ಗಂಟೆಗೆ ಮೈಸೂರು ನಿಲ್ದಾಣದಿಂದ 2:30 ಗಂಟೆಗೆ ಕೆ.ಎಸ್.ಆರ್ ಬೆಂಗಳೂರು ನಿಲ್ದಾಣವನ್ನು ತಲುಪಲಿದೆ. ಪುನಃ ಕೆ.ಎಸ್.ಆರ್ ಬೆಂಗಳೂರು-ಮೈಸೂರು ವಿಶೇಷ ರೈಲು ಮುಂಜಾನೆ 3 ಗಂಟೆಗೆ ಕೆ.ಎಸ್.ಆರ್ ಬೆಂಗಳೂರು ನಿಲ್ದಾಣದಿಂದ ಹೊರಟು ಅದೇ ದಿನ ಬೆಳಗ್ಗೆ 6:15 ಗಂಟೆಗೆ ಮೈಸೂರು ತಲುಪಲಿದೆ.
ಈ ರೈಲುಗಳು ಎರಡೂ ದಿಕ್ಕುಗಳಲ್ಲಿ ನಾಗನಹಳ್ಳಿ, ಶ್ರೀರಂಗಪಟ್ಟಣ, ಪಾಂಡವಪುರ, ಚಂದ್ರಗಿರಿ, ಬ್ಯಾಡ್ರಹಳ್ಳಿ, ಯಲಿಯೂರು, ಮಂಡ್ಯ, ಹನಕೆರೆ, ಮದ್ದೂರು, ಶೆಟ್ಟಿಹಳ್ಳಿ, ಚನ್ನಪಟ್ಟಣ, ರಾಮನಗರ, ಬಿಡದಿ, ಹೆಜ್ಜಾಲ, ಕೆಂಗೇರಿ ಮತ್ತು ನಾಯಂಡಹಳ್ಳಿ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ. ಈ ವಿಶೇಷ ರೈಲುಗಳಲ್ಲಿ ಎಸಿ ಚೇರ್ ಕಾರ್ (1), ನಾನ್ ಎಸಿ ಚೇರ್ ಕಾರ್ (18) ಮತ್ತು 2ನೇ ದರ್ಜೆ ಲಗೇಜ್ ಕಮ್ ಬ್ರೇಕ್ ವ್ಯಾನ್, ಅಂಗವಿಕಲ ಸ್ನೇಹಿ ಕಂಪಾರ್ಟ್ಮೆಂಟ್ (2) ಸೇರಿದಂತೆ ಒಟ್ಟು 21 ಬೋಗಿಗಳು ಹೊಂದಿರುತ್ತವೆ.
ರೈಲು ಸಂಖ್ಯೆ 06597/06598 ಮೈಸೂರು-ಕೆ.ಎಸ್.ಆರ್ ಬೆಂಗಳೂರು-ಮೈಸೂರು ಕಾಯ್ದಿರಿಸದ ವಿಶೇಷ ರೈಲು ಸಂಖ್ಯೆ 06597 ಮೈಸೂರು-ಕೆ.ಎಸ್.ಆರ್ ಬೆಂಗಳೂರು ವಿಶೇಷ ರೈಲು ಮಧ್ಯಾಹ್ನ 12:15 ಗಂಟೆಗೆ ಮೈಸೂರು ನಿಲ್ದಾಣದಿಂದ ಹೊರಟು ಅದೇ ದಿನ ಮಧ್ಯಾಹ್ನ 03:30 ಗಂಟೆಗೆ ಕೆ.ಎಸ್.ಆರ್ ಬೆಂಗಳೂರು ನಿಲ್ದಾಣವನ್ನು ತಲುಪಲಿದೆ. ಪುನಃ ಬೆಂಗಳೂರಿನಿಂದ ಮಧ್ಯಾಹ್ನ 03:45 ಗಂಟೆಗೆ ಹೊರಟು ಅದೇ ದಿನ ಸಂಜೆ 07:20 ಗಂಟೆಗೆ ಮೈಸೂರು ನಿಲ್ದಾಣವನ್ನು ತಲುಪಲಿದೆ.