ಸುದ್ದಿಮೂಲ ವಾರ್ತೆ
ಬೆಂಗಳೂರು,ನ.5:ಆಶಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಾರ್ಷಿಕ ಕ್ರೀಡಾಕೂಟ ಹಾಗೂ 2ಕೆ ಮ್ಯಾರಥಾನ್ ನಡಿಗೆ ಹಮ್ಮಿಕೊಳ್ಳಲಾಗಿತ್ತು. ಶಾಸಕ ಕೆ. ಗೋಪಾಲಯ್ಯ ಕ್ರೀಡಾಕೂಟ ಹಾಗೂ ಮ್ಯಾರಥಾನ್ ನಡಿಗೆ ಜಾಥಾಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಕೆ.ಗೋಪಾಲಯ್ಯ, ವಿಶೇಷಚೇತನ ಮಕ್ಕಳಲ್ಲಿ ವಿಶೇಷ ಪ್ರತಿಭೆ ಹಾಗೂ ಬುದ್ಧಿವಂತಿಕೆ ಇರಲಿದ್ದು, ಯಾರು ಕೂಡ ಪೋಷಕರು ಎದೆಗುಂದಬಾರದು. ಯಾವುದೇ ನೂನ್ಯತೆ ಇಲ್ಲದೇ ಎಲ್ಲಾ ರೀತಿಯಲ್ಲೂ ಚೆನ್ನಾಗಿರುವ ಮಕ್ಕಳಿಗೆ ಚಂಚಲತೆ ಇರುತ್ತದೆ. ಆದರೆ, ವಿಶೇಷ ಚೇತನ ಮಕ್ಕಳಿಗೆ ಯಾವುದೇ ರೀತಿಯ ಚಂಚಲತೆ ಇಲ್ಲದ ಕಾರಣ ವಿಶೇಷ ಪ್ರತಿಭೆ ಹಾಗೂ ಜಾಣ ತಲೆ ಇರುತ್ತದೆ. ಆದ್ದರಿಂದ ಇದರ ಸದುಪಯೋಗ ಪಡೆದುಕೊಂಡು ಸಾಧನೆ ಮಾಡಬೇಕೆಂದು ಕಿವಿಮಾತು ಹೇಳಿದರು.
ನಮ್ಮ ಕ್ಷೇತ್ರದಲ್ಲಿ ಕೂಡ ವಿಕಲಚೇತನರಿಗೆ ಎಲ್ಲ ರೀತಿಯ ತ್ರಿಚಕ್ರ ವಾಹನ, ಆರೋಗ್ಯ ಪ್ರತಿ ವರ್ಷ ವಿಶೇಷ ಮಕ್ಕಳ ಶೈಕ್ಷಣಿಕ ಬೆಳವಣಿಗೆಗಾಗಿ ವಯಕ್ತಿಕವಾಗಿ 1 ಲಕ್ಷ ರೂಪಾಯಿ ನೀಡುತ್ತೇನೆ ಎಂದು ಗೋಪಾಲಯ್ಯ ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರುಗಳಾದ ಶ್ರೀನಿವಾಸ್ ಬಿಡಿ, ಬಿಎಂ, ಆರ್ ಮಂಜುನಾಥ್, ಶ್ರೀನಿವಾಸ್ ಬಿಡಿ ಚಿಕ್ಕಸ್ವಾಮಿ ಹಿರಿಯ ಪೊಲೀಸ್ ಅಧಿಕಾರಿಗಳು ಬಸವೇಶ್ವರ ನಗರ, ದುರ್ಗಾ ಕೆ ಪಿ ಎಸ್, ಸಂಚಾರಿ ಇನ್ಸಪೆಕ್ಟರ್ ಬೆಂಗಳೂರು ನಗರ, ಸುಚಿತ್ರ ಸೋಮಶೇಖರ್,ಸಂಸ್ಥಾಪಕರು ಸೃಷ್ಠಿ ಅಕಾಡಮಿ, ಆಶಾ ಚಾರಿಟೇಬಲ್ ಟ್ರಸ್ಟ್ ನ ನಿರ್ದೇಶಕ ಜಯಶ್ರೀ ರಮೇಶ್ ಸೇರಿದಂತೆ ವಿಶೇಷ ಚೇತನ ಮಕ್ಕಳು ಹಾಗೂ ಪೋಷಕರು ಭಾಗವಹಿಸಿದ್ದರು.