ಸುದ್ದಿಮೂಲ ವಾರ್ತೆ
ಆನೇಕಲ್, ಜು 21 : ಭಾರತದ ಅಭಿವೃದ್ಧಿಗೆ ಕ್ರೀಡಾಪಟುಗಳ ಕೊಡುಗೆ ಅಪಾರ ಎಂದು ಕನ್ನಡ ಸಾಹಿತ್ಯ ಪರಿಷತ್ ಆನೇಕಲ್ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಆದೂರು ಪ್ರಕಾಶ್ ಹೇಳಿದರು.
ಅಂತಾರಾಷ್ಟ್ರೀಯ ಕ್ರೀಡಾಪಟು ರೇಣುಕಾ ಶ್ರೀನಿವಾಸ್ ರವರು ಮಲೇಷ್ಯಾದ ಕೌಲಾಲಂಪುರ ಪ್ಯಾರಾ ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವುದನ್ನು ಪ್ರೋತ್ಸಾಹಿಸುವ ಸಲುವಾಗಿ ಏರ್ಪಡಿಸಿದ್ದು ಬೀಳ್ಕೊಡುಗೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಸಮಾಜದಲ್ಲಿ ಅನೇಕ ರೀತಿಯ ಪ್ರತಿಭಾನ್ವಿತರು ಎಲೆಮರೆಕಾಯಿಯಂತೆ ಇದ್ದಾರೆ. ಅಂತಹ ಪ್ರತಿಭೆಗಳಿಗೆಲ್ಲ ಅವಕಾಶದ ಕೊರತೆ ಉಂಟಾಗಿರುವುದು ಬಹಳ ದುಃಖಕರವಾದ ವಿಚಾರ ಇವರೆಲ್ಲಾ ಸೂಕ್ತ ಅವಕಾಶಗಳನ್ನು ಕಲ್ಪಿಸುವಲ್ಲಿ ಸಮಾಜ ಮುಖ್ಯ ಪಾತ್ರವನ್ನು ವಹಿಸಬೇಕಾಗಿದೆ ಎಂದು ತಿಳಿಸಿದರು.
ಅಂತಾರಾಷ್ಟ್ರೀಯ ಕ್ರೀಡಾಪಟು ಸರಸ್ವತಿ ಮಾತನಾಡಿ, ಎಲ್ಲಾ ಅಂಗಾಗಳು ಸರಿಯಿದ್ದು ಮಾಡುವ ಸಾಧನೆ ದೊಡ್ಡದಲ್ಲ ವಿಶೇಷ ಚೇತನ ಅವಕಾಶ ಪಡೆದು ಮಾಡುವ ಸಾಧನೆ ದೊಡ್ಡದು. ಇಂತಹ ಸಾಧಕರನ್ನು ಇಡೀ ಸಮಾಜ ಗೌರವಿಸಿ ಅವರನ್ನು ಆರ್ಥಿಕವಾಗಿ ಸಾಮಾಜಿಕವಾಗಿ ಪ್ರೋತ್ಸಾಹಿಸಿದರೆ ಅವರು ಯಾರಿಗೂ ಕಡಿಮೆಯಿಲ್ಲ ಎಂದು ತಿಳಿಸಿದರು
ಅಂತಾರಾಷ್ಟ್ರೀಯ ಕ್ರೀಡಾಪಟು ರೇಣುಕಾ ಶ್ರೀನಿವಾಸ್ ಮಾತನಾಡಿ, ಕುಟುಂಬವನ್ನು ನಡೆಸುವುದು ಕಷ್ಟಕರವಾಗಿರುವ ಸಂದರ್ಭದಲ್ಲಿ ದೇಶ ವಿದೇಶಗಳಲ್ಲಿ ಪ್ಯಾರಾ ಥ್ರೋಬಾಲ್ ಪಂದ್ಯಾವಳಿ ಗಳಲ್ಲಿ ಭಾಗವಹಿಸಿ ಗೆಲ್ಲುವುದೆಂದರೆ ಬಹಳ ಕಷ್ಟದ ವಿಷಯ. ಜೊತೆಗೆ ಆನೇಕಲ್ ತಾಲೂಕಿನ ಜನರ ಪ್ರೋತ್ಸಾಹ ಎಂದೂ ಮರೆಯಲು ಸಾಧ್ಯವಿಲ್ಲ ಎಂದು ಭಾವುಕರಾದರು.
ಕಾರ್ಯಕ್ರಮದಲ್ಲಿ ಸಮಂದೂರು ಚಿನ್ನಪ್ಪ, ವ್ಯಾಪಾರಿ ನಾರಾಯಣ್, ತಬಲಾ ಮಂಜು, ಲಕ್ಷ್ಮಣ, ಮಾದರ್, ಹರೀಶ್, ಶಿವಣ್ಣನವರ್, ಲಕ್ಷ್ಮಣ್ ಪತಗಿರಿ, ಮಾದೇಶ್, ರಾಮಣ್ಣ, ನಾಗರಾಜ್, ಅನ್ನಪೂರ್ಣೇಶ್ವರಿ, ಭಾಗ್ಯಮ್ಮ, ರಾಮಕೃಷ್ಣಪ್ಪ, ಕಿರಣ್, ಮುನಿಯಮ್ಮ, ಮುನಿರತ್ನಮ್ಮ, ಗೌರಿ ಕಸಾಪ, ಚುಟುಕುಶಂಕರ್ ಭಾಗವಹಿಸಿದ್ದರು.