ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.13:
ಭಾರತದ ವೈವಿಧ್ಯತೆಗೆ ಅನುಗುಣವಾಗಿ ನಡೆಯುವ ಅನೇಕ ಹಬ್ಬಗಳು, ಪ್ರಾಾದೇಶಿಕ ಆಚರಣೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕ್ಯಾಾಲೆಂಡರ್ ಒಳಗೊಂಡಿದ್ದು, ಗ್ರಾಾಹಕರಿಗೆ ತುಂಬಾ ಉಪಯುಕ್ತವಾಗಿದೆ ಎಂದು ವಿಕಾಸ ಬ್ಯಾಾಂಕಿನ ಅಧ್ಯಕ್ಷ ವಿಶ್ವನಾಥ ಚ.ಹಿರೇಮಠ ಹೇಳಿದರು.
ಸಿಂಧನೂರು ನಗರದ ಬಸವ ಸರ್ಕಲ್ ಹತ್ತಿಿರದ ಶ್ರೀ ಜಗದ್ಗುರು ಪಂಚಾಚಾರ್ಯ ಸೌಹಾರ್ದ ಸಹಕಾರಿಯ 2026 ನೂತನ ಕ್ಯಾಾಲೆಂಡರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ನಾಡಿನ ಹಬ್ಬ ಹರಿದಿನಗಳು, ಜಾತ್ರೆೆಗಳು, ಗಣರಾಜ್ಯೋೋತ್ಸವ, ಸ್ವಾಾತಂತ್ರ್ಯ ದಿನಾಚರಣೆ, ಗಾಂಧಿ ಜಯಂತಿ, ಕ್ರಿಿಸ್ಮಸ್, ಸರ್ಕಾರಿ ರಜೆ ದಿನಗಳ ಮಾಹಿತಿ, ದಾರ್ಶನಿಕರ ಜಯಂತಿಗಳು, ಇವುಗಳ ದಿನಾಂಕ ಮೊದಲೇ ನಿಗದಿಪಡಿಸಿರುವುದರಿಂದ ದೀರ್ಘ ವಾರಾಂತ್ಯಗಳು ಅಥವಾ ಹಬ್ಬದ ರಜಾ ದಿನಗಳಲ್ಲಿ ರಜೆಗಳು, ಪ್ರವಾಸಗಳು ಅಥವಾ ಕುಟುಂಬ ಕಾರ್ಯಕ್ರಮಗಳನ್ನು ಯೋಜಿಸಬಹುದಾಗಿದೆ.
ಮುಂಜಾಗ್ರತೆ ಪಡೆಯಲು ಮತ್ತು ತಿಳಿಯಲು ಕ್ಯಾಾಲೆಂಡರ್ ಮತ್ತು ಪಂಚಾಂಗಗಳು ಪ್ರತಿಯೊಬ್ಬರ ಬದುಕಿನಲ್ಲಿ ಅತ್ಯಾಾವಶ್ಯಕವಾಗಿವೆ. 2026 ನೂತನ ಹೊಸ ವರ್ಷ ಸರ್ವರಿಗೂ ಸುಖ ಶಾಂತಿ ಸಮೃದ್ಧಿಿ ತರಲಿ ಎಂದರು.
ಈ ಸಂದರ್ಭದಲ್ಲಿ ಸಹಕಾರಿಯ ಅಧ್ಯಕ್ಷ ಎಸ್.ಎಸ್.ಹಿರೇಮಠ, ಉಪಾಧ್ಯಕ್ಷ ಬಸವರಾಜ ಸಣ್ಣಜಿನ್, ಸದಸ್ಯರಾದ ಸೈಯ್ಯದ್ ಖಲೀಲ್ ಅಹ್ಮದ್, ಆನಂದ ಹಿರೇಮಠ, ಲಿಂಗರಾಜ ಕರಡಕಲ್ಲ, ಸಹನಾ ಹಿರೇಮಠ, ಕವಿತಾ ಹಿರೇಮಠ, ಸಿಇಓ ಲಿಂಗನಗೌಡ, ಸಿಬ್ಬಂದಿ ಅಕ್ಷಯ ಕುಮಾರ ಕುಲಕರ್ಣಿ, ಶೇಖರಪ್ಪ ಬಾಲಿ ಮತ್ತಿಿತರರು ಇದ್ದರು.
ಶ್ರೀ ಜಗದ್ಗುರು ಪಂಚಾಚಾರ್ಯ ಸೌಹಾರ್ದ ಸಹಕಾರಿಯ ಕ್ಯಾಲೆಂಡರ್ ಬಿಡುಗಡೆ ಗ್ರಾಹಕರಿಗೆ ಉಪಯುಕ್ತವಾದ ಕ್ಯಾಲೆಂಡರ್ : ವಿಶ್ವನಾಥ ಹಿರೇಮಠ

