ಸುದ್ದಿಮೂಲ ವಾರ್ತೆ ಕಲಬುರಗಿ, ಜ.19:
ಕನ್ನಡದಲ್ಲಿ ಸರ್ವಜ್ಞ, ತಮಿಳಿನಲ್ಲಿ ತಿರುವಳ್ಳುವರ್ ಅವರಂತೆ ತೆಲುಗಿಗೆ ಶ್ರೀ ಮಹಾಯೋಗಿ ವೇಮನರು ವಚನಕಾರರರಾಗಿದ್ದು, ಲೋಕಕಲ್ಯಾಾಣಕ್ಕಾಾಗಿ ಶ್ರಮಿಸಿದ ಮಹಾನ್ ದಾರ್ಶನಿಕರಾಗಿದ್ದಾರೆ ಎಂದು ಶಾಸಕ ಅಲ್ಲಮಪ್ರಭು ಪಾಟೀಲ ತಿಳಿಸಿದರು.
ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಕಲಬುರಗಿ ಇವರುಗಳ ಸಂಯುಕ್ತಾಾಶ್ರಯದಲ್ಲಿ ಆಯೋಜಿಸಿದ ಶ್ರೀ ಮಹಾಯೋಗಿ ವೇಮನ ಅವರ ಭಾವಚಿತ್ರಕ್ಕೆೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದ ಅವರು, 14 ಮತ್ತು 15ನೇ ಶತಮಾನದಲ್ಲಿ ಸಮ ಸಮಾಜ ನಿರ್ಮಾಣಕ್ಕೆೆ ವೇಮನರು ಶ್ರಮಿಸಿದ್ದಾರೆ.
ಹೇಮರಡ್ಡಿಿ ಮಲ್ಲಮ್ಮನ ಪ್ರೇೇರಣೆಯ ಮಾತಿನಿಂದ ಮನ ಪರಿವರ್ತನೆಗೊಂಡು ಮುಂದೆ ಯೋಗಿಯಾಗಿ ಸುಮಾರು 4,000 ವಚನಗಳನ್ನು ಬರೆಯುವ ಮೂಲಕ ವಚನ ಸಾಹಿತ್ಯಕ್ಕೆೆ ತಮ್ಮದೇಯಾದ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಬಸವಣ್ಣನವರ ಮಾರ್ಗದಲ್ಲಿ ಸಾಗಿದ ವೇಮನರು ವಚನಗಳ ಮೂಲಕ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿ ಬದುಕಿಗೆ ದಾರಿ ತೋರಿಸಿದ್ದಾರೆ. ಇಂತಹ ದಾರ್ಶನಿಕರ ಸಾಧನೆ, ತತ್ವಗಳು ಪಠ್ಯ ಪುಸ್ತಕದಲ್ಲಿ ಅಳವಡಿಸಿ ಮುಂದೆ ಬರುವ ಯುವಪೀಳಿಗೆಗೆ ತಲುಪಿಸುವ ಕಾರ್ಯ ಸರ್ಕಾರ ಮಾಡಬೇಕಿದೆ ಎಂದು ಅವರು ಅಭಿಪ್ರಾಾಯಪಟ್ಟರು.
ರೆಡ್ಡಿಿ ಸಮಾಜದ ಅಧ್ಯಕ್ಷರಾದ ಡಾ. ಎಸ್ ಬಿ ಕಾಮರೆಡ್ಡಿಿ ಅವರು ಮಾತನಾಡಿದರು. ಪ್ರಾಾಧ್ಯಾಾಪಕಿ ಡಾ. ಜ್ಯೋೋತಿ ಎಂ. ರೆಡ್ಡಿಿ ಅವರು ವಿಶೇಷ ಉಪನ್ಯಾಾಸ ನೀಡಿದರು.
ಕಾರ್ಯಕ್ರಮದಲ್ಲಿ ಜೆಸ್ಕಾಾಂ ಅಧ್ಯಕ್ಷ ಪ್ರವೀಣ್ ಪಾಟೀಲ್ ಹರವಾಳ, ಜಿಲ್ಲಾಧಿಕಾರಿ ಕಚೇರಿಯ ಕಚೇರಿ ಸಹಾಯಕ ಶಿವಪ್ರಭು ಹಿರೇಮಠ, ಜಗದೀಶ್ವರಿ ನಾಸಿ ಹಾಗೂ ರೆಡ್ಡಿಿ ಸಮಾಜದ ಮುಖಂಡರು ಉಪಸ್ಥಿಿತರಿದ್ದರು.
ಶ್ರೀ ಮಹಾಯೋಗಿ ವೇಮನ ಜಯಂತಿ ಆಚರಣೆ ಲೋಕಕಲ್ಯಾಣಕ್ಕಾಾಗಿ ಶ್ರಮಿಸಿದ ವೇಮನ ಮಹಾನ್ ದಾರ್ಶನಿಕ : ಅಲ್ಲಮಪ್ರಭು ಪಾಟೀಲ

