ಸುದ್ದಿಮೂಲ ವಾರ್ತೆ ಮಾನ್ವಿ, ಜ.03:
ಮಾನ್ವಿಿ ಪಟ್ಟಣದ ಐತಿಹಾಸಿಕ ಬೆಟ್ಟದ ಶ್ರೀಶೈಲ ಶ್ರೀ ಮಲ್ಲಿಕಾರ್ಜುನ ಸ್ವಾಾಮಿ ದೇವಸ್ಥಾಾನದಲ್ಲಿ ಬನದ ಹುಣ್ಣಿಿಮೆ ಅಂಗವಾಗಿ ಶನಿವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಬೆಳಿಗ್ಗೆೆ ಶ್ರೀ ಮಲ್ಲಿಕಾರ್ಜುನಸ್ವಾಾಮಿ ಮೂರ್ತಿಗೆ ರುದ್ರಾಾಭಿಷೇಕ, ಬಿಲ್ವಾಾರ್ಚನೆ, ಮಹಾಮಂಗಳಾರತಿ ನಡೆಯಿತು. ಅಕ್ಕಿಿಯಿಂದ ಮಾಡಿದ ಕೀರಿಟ ಸ್ವಾಾಮಿಯ ಮೂರ್ತಿಗೆ ಹಾಕಿ ವಿಶೇಷ ಅಲಂಕಾರ ಮಾಡಲಾಯಿತು. ದೇವಸ್ಥಾಾನದ ಆವರಣದಲ್ಲಿ ಶ್ರೀ ಭ್ರಮರಾಂಭಾ ದೇವಿ ಮೂರ್ತಿಗೆ ಅಭಿಷೇಕ ಹಾಗೂ ಮಹಾಮಂಗಳಾರತಿ ಮಾಡಲಾಯಿತು. ಸಂಜೆ ಪಲ್ಲಕ್ಕಿಿಯಲ್ಲಿ ಶ್ರೀಶೈಲ ಶ್ರೀ ಮಲ್ಲಿಕಾರ್ಜುನಸ್ವಾಾಮಿ ಉತ್ಸವ ಮೂರ್ತಿ ರಥದಲ್ಲಿ ಕೂಡಿಸಿ ಸಾವಿರಾರು ಭಕ್ತರಿಂದ ರಥೋತ್ಸವ ಜರುಗಿತು.
ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಾಮಿಗಳು ಹಾಗೂ ಚೀಕಲಪರ್ವಿ ಶ್ರೀ ರುದ್ರಮುನೀಶ್ವರ ಮಠದ ಶ್ರೀ ಸದಾಶಿವ ಮಹಾಸ್ವಾಾಮಿಗಳು, ಸುವರ್ಣಗಿರಿ ಮಠದ ಶ್ರೀ ಶಂಕರಯ್ಯಸ್ವಾಾಮಿಗಳು ಸೇರಿದಂತೆ ಮಾನ್ವಿಿ ಪಟ್ಟಣ ಹಾಗೂ ಸುತ್ತ ಮುತ್ತಲಿನ ಗ್ರಾಾಮಗಳ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು.
ಮಾನ್ವಿ: ವಿಜೃಂಭಣೆಯಿಂದ ಜರುಗಿದ ಬೆಟ್ಟದ ಶ್ರೀ ಮಲ್ಲಿಕಾರ್ಜುನಸ್ವಾಮಿ ರಥೋತ್ಸವ

