ಸುದ್ದಿಮೂಲ ವಾರ್ತೆ ರಾಯಚೂರು, ಜ.21:
ಕಲಬುರುಗಿ ಕನಕ ಗುರುಪೀಠದ ಶ್ರೀ ಸಿದ್ದರಾಮನಂದಪುರಿ ಸ್ವಾಾಮೀಜಿಯವರ ಶಿವೈಕ್ಯರಾದ ಹಿನ್ನೆೆಲೆಯಲ್ಲಿ ಜ.31ರಂದು ತಿಂಥಿಣಿ ಸೇತುವೆ ಬಳಿಯ ಶ್ರೀಮಠದಲ್ಲಿ ಪುಣ್ಯಾಾರಾಧನೆ ಹಾಗೂ ನುಡಿನಮನ ಕಾರ್ಯಕ್ರಮ ಹಮ್ಮಿಿಕೊಳ್ಳಲಾಗಿದೆ ಎಂದು ಕನಕ ಗುರುಪೀಠದ ಟ್ರಸ್ಟಿಿ ಹಾಗೂ ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಜ.15ರಂದು ಶಿವೈಕ್ಯರಾದ ಶ್ರೀ ಸಿದ್ದರಾಮಾನಂದಪುರಿ ಸ್ವಾಾಮೀಜಿಗಳ ಅಗಲಿಕೆ ಸಮಾಜಕ್ಕೆೆ ಅಪಾರ ನೋವುಂಟು ಮಾಡಿದೆ . ಹಾಲುಮತ ಸಮಾಜದ ಸಂಘಟನೆ, ಬೆಳವಣಿಗೆ ಹಾಗೂ ಅಪೂರ್ವ ಜ್ಞಾನಿಗಳಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ನೀಡಿದ ಕೊಡುಗೆ ಸ್ಮರಣೀಯವಾಗಿದೆ ಎಂದರು.
ಪುಣ್ಯಾಾರಾಧನೆ ಕಾರ್ಯಕ್ರಮಕ್ಕೆೆ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಾಮೀಜಿಗಳ ನೇತೃತ್ವದಲ್ಲಿ ನಡೆಯಲಿದ್ದು, ದೇಶದ ವಿವಿಧ ಭಾಗಗಳಿಂದ ಅನೇಕ ಮಠಾಧೀಶರು, ಸ್ವಾಾಮೀಜಿಗಳು, ಮುಖ್ಯಮಂತ್ರಿಿ ಸಿದ್ದರಾಮಯ್ಯಘಿ, ಸಚಿವರು, ಸಂಸದ, ಶಾಸಕರು ಭಾಗವಹಿಸಲಿದ್ದಾರೆ. ಭಕ್ತರು ಹಾಗೂ ಅನುಯಾಯಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.
ತಿಂಥಣಿ ಸೇತುವೆಯ ಮಠದಲ್ಲಿ ಅಂದು ಬೆಳಿಗ್ಗೆೆ 10ರಿಂದಲೆ ಪುಣ್ಯಾಾರಾಧನೆ ಹಾಗೂ ನುಡಿನಮನ ಕಾರ್ಯಕ್ರಮ ಜರುಗಲು ವ್ಯವಸ್ಥೆೆ ಮಾಡಲಾಗುತ್ತಿಿದೆ. ಈಗಾಗಲೇ ಶಾಲೆ ಹಾಗೂ ಕಾಲೇಜುಗಳನ್ನು ಆರಂಭಿಸಲಾಗಿದ್ದು, ಸುಮಾರು 250 ವಿದ್ಯಾಾರ್ಥಿಗಳು ಶಿಕ್ಷಣ ಪಡೆಯುತ್ತಿಿದ್ದಾರೆ. ಶ್ರೀ ಮಠದ ಕಾರ್ಯಚಟುವಟಿಕೆಗಳು ನಿರಂತರವಾಗಿ ಸಾಗುತ್ತಿಿವೆ. ಹೊಸ ಪೀಠಾಧಿಪತಿಗಳ ಆಯ್ಕೆೆ ಕುರಿತು ಟ್ರಸ್ಟ್ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಸುದ್ದಿಗೋಷ್ಠಿಿಯಲ್ಲಿ ಸಮಾಜದ ಗೌರವಾಧ್ಯಕ್ಷ ಕೆ. ಬಸವಂತಪ್ಪ, ಪ್ರಘಿ.ಕಾರ್ಯದರ್ಶಿ ಹನುಮಂತಪ್ಪ ತುರುಕನಡೋಣಿ ಇತರರಿದ್ದರು.

